ಕಲಬುರಗಿ: ‘ಜಾಗತಿಕ ಲಿಂಗಾಯತ ಮಹಾಸಭಾ, ಸೌಹಾರ್ದ ಕರ್ನಾಟಕ, ಬಸವಪರ ಸಂಘಟನೆಗಳ ಒಕ್ಕೂಟ, ದಲಿತಪರ ಸಂಘಟನೆಗಳು, ಕಾಯಕಜೀವಿಗಳ ಒಕ್ಕೂಟ, ರೈತ, ಮಹಿಳಾ, ವಿದ್ಯಾರ್ಥಿ, ಯುವಜನ, ಕಾರ್ಮಿಕ ಸಂಘಟನೆಗಳಿಂದ ‘ಬಸವಾದಿ ಶರಣರ ಜಾಗೃತಿ ಸಮಾವೇಶ’ವನ್ನು ಮೇ 15ರಂದು ಸಂಜೆ 5 ಗಂಟೆಗೆ ಯಾದಗಿರಿ ಜಿಲ್ಲೆ ಶಹಾಪುರದ ಹಳೆಯ ಬಸ್ ನಿಲ್ದಾಣ ಎದುರಿನ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಆರ್.ಜಿ. ಶೆಟಗಾರ ತಿಳಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಹಾಪುರದಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ ಹೆಸರಿನಲ್ಲಿ ಕೋಮುವಾದಿ ಕಾರ್ಯಕ್ರಮ ಮಾಡಲಾಗುತ್ತಿದೆ. ಇದು ಶರಣರನ್ನು ಕೋಮುವಾದಿ ವೃತ್ತದೊಳಗೆ ತೆಗೆದುಕೊಳ್ಳಲು ಹವಣಿಸುತ್ತಿರುವ ಯೋಜನೆಯಾಗಿದೆ. ವೈದಿಕ ಕೋಮುವಾದಿಗಳ ಈ ಕುತಂತ್ರವನ್ನು ತಿಳಿಸಿಹೇಳಲು ನಾವು ಬಸವಾದಿ ಶರಣರ ಜಾಗೃತಿ ಸಮಾವೇಶ ಹಮ್ಮಿಕೊಂಡಿದ್ದೇವೆ’ ಎಂದರು.

‘ಅಂದು ಮಧ್ಯಾಹ್ನ 3 ಗಂಟೆಗೆ ಶಹಾಪುರದ ಸಿಪಿಎಸ್ ಮೈದಾನದಿಂದ ವಚನ ಗಾಯನದೊಂದಿಗೆ ಮೆರವಣಿಗೆ ಹೊರಟು 5 ಗಂಟೆಗೆ ಸಮಾವೇಶಗೊಳ್ಳಲಿದೆ. ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ ಸೇರಿ ವಿಜಯಪುರ ಜಿಲ್ಲೆಯಿಂದಲೂ ಬಸವಾಭಿಮಾನಿಗಳು, ಬಸವಪರ ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ. ಸುಮಾರು 5 ಸಾವಿರ ಜನ ಸೇರುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.

ಪ್ರಗತಿಪರ ಚಿಂತಕಿ ಮೀನಾಕ್ಷಿ ಬಾಳಿ ಮಾತನಾಡಿ, ‘ಸನಾತನಿಗಳು ಇಲ್ಲಿಯವರೆಗೆ ಒಂದು ದಿನ ಕೂಡ ಬಸವಣ್ಣನ ಹೆಸರು ತಗೊಂಡಿಲ್ಲ. ಒಂದೇ ಒಂದು ವಚನ ಅವರಿಗೆ ಹೇಳಲು ಸಾಧ್ಯವಾಗಿಲ್ಲ. ಈಗ ಅವರಿಗೆ ಇದ್ದಕ್ಕಿದ್ದಂತೆ ಕಳೆದ ಒಂದೆರಡು ವರ್ಷದಿಂದ ಬಸವಾದಿ ಶಿವಶರಣರು ಹಿಂದೂ ಅನ್ನುವ ಹೊಸ ವರಸೆ, ನಾಟಕ ಶುರು ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಪ್ರಾದೇಶಿಕವಾಗಿ ಇಲ್ಲಿರುವ ಎಲ್ಲ ಮತ, ಪಂಥ, ಪರಂಪರೆಯವರು ಹಿಂದೂಸ್ಥಾನಿಗಳೇ ಆಗಿದ್ದಾರೆ. ಹಿಂದೂ ಎಂಬುದು ಪ್ರದೇಶವಾಚಕವೇ ಹೊರತು ಧರ್ಮ ಅಥವಾ ಸಂಸ್ಕೃತಿ ವಾಚಕವಲ್ಲ. ಸನಾತನಿಗಳು ಹಿಂದೂ ಹೆಸರಿನಲ್ಲಿ ವರ್ಣಾಶ್ರಮ ಪದ್ಧತಿಯನ್ನು ಪುನಃ ಪ್ರತಿಷ್ಠಾಪಿಸಲು ಹೊರಟಿದ್ದಾರೆ. ವೈದಿಕರನ್ನು ಧಿಕ್ಕರಿಸಿದ ಬಸವಾದಿ ಶರಣರನ್ನು ವೈದಿಕ ಚಾತುರ್ವರ್ಣ ವ್ಯವಸ್ಥೆಯ ವಿಷವರ್ತುಲದಲ್ಲಿ ಸಿಲುಕಿಸುವ ಯತ್ನಕ್ಕೆ ನಮ್ಮ ವಿರೋಧವಿದೆ’ ಎಂದರು.

ಪ್ರಮುಖರಾದ ಅಶೋಕ ಘೂಳಿ, ರಾಜಶೇಖರ ಯಂಕಂಚಿ, ಆರ್.ಕೆ.ಹುಡಗಿ, ಶಿವಶಂಕರ ದೇಗಾಂವ, ರವೀಂದ್ರ ಶಾಬಾದಿ, ಬಸವರಾಜ ಕೋಣಿನ, ಶಾಂತಪ್ಪ ಪಾಟೀಲ, ಹಣಮಂತರಾಯ ಪಾಟೀಲ, ಭೀಮಣ್ಣ ಬೋನಾಳ, ಸುಧಾಮ ಧನ್ನಿ, ಚಂದಮ್ಮ ಗೋಳಾ, ಲವಿತ್ರ ವಸ್ತ್ರದ, ದಯಾನಂದ ಯಂಕಂಚಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-34-1985524540

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.