ಯಾದಗಿರಿ: ‘ಶಹಾಪುರ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಮೇ 18ರಂದು ಬಸವಾದಿ ಶಿವಶರಣರ ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಕುಂಬಾರಿಗೇರಿ ಹಿರೇಮಠದ ಸೂಗೂರೇಶ್ವರ ಶಿವಾಚಾರ್ಯರು ತಿಳಿಸಿದರು.

‘ಅಂದು ಸಂಜೆ 4ಕ್ಕೆ ಗುಗ್ಗಳ ಬಸವೇಶ್ವರ ದೇವಸ್ಥಾನದಿಂದ ಸಿಪಿಎಸ್ ಶಾಲಾ ಮೈದಾನದವರೆಗೆ ಶೋಭಯಾತ್ರೆ ನಡೆಯಲಿದೆ. ಸಾರೋಟದಲ್ಲಿ ಭಾರತಾಮಾತೆ, ಬಸವಾದಿ ಶಿವಶರಣರ ಭಾವಚಿತ್ರಗಳನ್ನು ಇರಿಸಿ 2,000 ಮುತ್ತೈದೆಯರಿಂದ ಕುಂಭ ಮೆರವಣಿಗೆ ಜರುಗಲಿದೆ. ಸಂಜೆ 6ರ ಸುಮಾರಿಗೆ ಸಮಾವೇಶ ನಡೆಯಲಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ 300ಕ್ಕೂ ಹೆಚ್ಚು ಮಠಾಧೀಶರು, ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ಜಿಲ್ಲಾ ಉಸ್ತುವಾರಿ ಸಚಿವರು ಒಳಗೊಂಡು ಶಾಸಕರಿಗೂ ಆಹ್ವಾನ ನೀಡಲಾಗಿದೆ. ಸಮಾವೇಶದಲ್ಲಿ 10 ಸಾವಿರ ಜನರು ಸೇರುವ ನಿರೀಕ್ಷೆ ಇದ್ದು, ಪ್ರಸಾದದ ವ್ಯವಸ್ಥೆಯೂ ಮಾಡಲಾಗಿದೆ’ ಎಂದು ತಿಳಿಸಿದರು.

‘ಹಲವರು ನಾವು ಪೂಜಿಸುವ ದೇವಾನು ದೇವತೆಗಳ ಬಗ್ಗೆ ಅಲ್ಲಸಲ್ಲದ ಶಬ್ದಗಳನ್ನು ಬಳಸಿಕೊಂಡು, ದೊಡ್ಡ ಮಠಾಧೀಶರೇ ಅಪಪ್ರಚಾರ ಮಾಡುತ್ತಿದ್ದಾರೆ. ಅದನ್ನು ನಮಗೂ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ನಮ್ಮ ಸಮಾಜ, ನಮ್ಮ ಧರ್ಮ ಉಳಿಸುವ ನಿಟ್ಟಿನಲ್ಲಿ ನಾವೂ ಒಂದು ಹೆಜ್ಜೆ ಮುಂದು ಬಂದು ಹಿಂದೂ ಸಮಾಜ, ಹಿಂದೂ ಧರ್ಮವನ್ನು ಗಟ್ಟಿ ಗೊಳಿಸಲು ಈ ಸಮಾವೇಶ ಹಮ್ಮಿಕೊಳ್ಳುತ್ತಿದ್ದೇವೆ’ ಎಂದು ಹೇಳಿದರು.

‘ತರ್ಕ ಇಲ್ಲದೆ ಸುಮ್ಮನೆ ವಾದ ಮಾಡಿದರೆ ಅದು ಎಂದಿಗೂ ಮುಗಿಯುವುದಿಲ್ಲ. ಟೀಕೆ, ಆರೋಪ ಮಾಡುವುದಕ್ಕೆ ಸರಿಯಾದ ಆಧಾರ ಬೇಕು. ಲಿಂಗಾಯತರು, ವೀರಶೈವರು ಪೂಜೆ ಮಾಡುವುದು ಇಷ್ಟಲಿಂಗವನ್ನು. ಇಷ್ಟಲಿಂಗದೊಳಗೆ ಶಿವಲಿಂಗವಿದೆ. ಇದೆಲ್ಲವೂ ಹಿಂದೂ ಸಂಸ್ಕೃತಿಯಿಂದ ಬಂದಿರತಕ್ಕಂತಹ ಕುರುಹುಗಳಾಗಿವೆ’ ಎಂದು ಸನಾತನ ಧರ್ಮ ಬಗೆಗಿನ ಟೀಕೆ ಕುರಿತು ಪ್ರತಿಕ್ರಿಯಿಸಿದರು.

‘ಈಗಾಗಲೇ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಎರಡು ಸಮಾವೇಶಗಾಳಗಿದ್ದು, ಮೂರನೇ ಸಮಾವೇಶ ಶಹಾಪುರ ನಗರದಲ್ಲಿ ನಡೆಯಲಿದೆ. ಹಿಂದೂ ದೇವರ ಮತ್ತು ಧರ್ಮಾಚರಣೆ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಆಡುವ ಮೂಲಕ ಒಡಕು ಮೂಡಿಸಲಾಗಿತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸಿ, ಎಲ್ಲರೂ ಒಂದಾಗಿ ದೇಶ ಕಟ್ಟುವ ಕೆಲಸ ಮಾಡುವ ಸಂದೇಶ ರವಾನಿಸಲು ಈ ಸಮಾವೇಶ ಆಯೋಜಿಸಲಾಗಿದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗುಂಬಳಾಪುರ ಮಠದ ಸಿದ್ದೇಶ್ವರ ಶಿವಾಚಾರ್ಯರು, ಒಕ್ಕಲಿಗೇರ ಹಿರೇಮಠದ ಮರುಳಮಹಾಂತ ಶಿವಾಚಾರ್ಯರು, ನಾಗಠಾಣ ಮಠದ ಸೋಮೇಶ್ವರ ಸ್ವಾಮೀಜಿ, ಇಟಗಿಯ ಚಂದ್ರಶೇಖರ ಸ್ವಾಮೀಜಿ, ಅಣಬಿ ಸೊಪ್ಪಿನಮಠದ ಚನ್ನವೀರ ಸ್ವಾಮೀಜಿ, ದೋರನಹಳ್ಳಿಯ ಚಿಕ್ಕಮಠದ ಶಿವಲಿಂಗ ರಾಜೇಂದ್ರ ಶಿವಾಚಾರ್ಯರು, ಪ್ರಮುಖರಾದ ಗುರು ಕಾಮಾ, ಚನ್ನಾರೆಡ್ಡಿ ಕೊಡಲ್, ಸುಭಾಷ ದೇವದುರ್ಗ, ಮಲ್ಲು ಪೂಜಾರಿ ಸೇರಿದದಂತೆ ಇತರರುಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-30-1703518282

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.