ಶಹಾಪುರ: ‘ಜೀವ ಸಂಕುಲದ ಉಳಿವಿಗೆ ನೀರುಣಿಸುವುದು ನಮ್ಮ ಹೊಣೆಗಾರಿಕೆಯನ್ನು ಹೆಚ್ಚಿಸಿದಂತೆ ಆಗುತ್ತದೆ’ ಎಂದು ತಾಲ್ಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರೂ ಆಗಿರುವ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶೆ ಹೇಮಾ ಪಸ್ತಾಪುರ ಹೇಳಿದರು.

ಇಲ್ಲಿನ ಕೋರ್ಟ್ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ‘ವಿಶ್ವ ಜಲ ದಿನ’ದ ಅಂಗವಾಗಿ ಹಮ್ಮಿಕೊಂಡಿದ್ದ ‘ನೀರು ನೀಡಿ ಜೀವ ಉಳಿಸಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಕೆಂಡದಂತಹ ಉರಿ ಬಿಸಿಲಿನಲ್ಲಿ ಪ್ರಾಣಿ–ಪಕ್ಷಿಗಳಿಗೆ ನೀರಿನ ದಾಹವನ್ನು ತೀರಿಸಿಕೊಳ್ಳಲು ಪ್ರತಿಯೊಬ್ಬರು ಜಾಗ ಇರುವ ಕಡೆ ಇಲ್ಲವೆ ಮರದ ಕೊಂಬೆಗೆ ಮಣ್ಣಿನ ತಟ್ಟೆಯನ್ನು ನೇತು ಹಾಕಿ ಅದರಲ್ಲಿ ನೀರು ಹಾಗೂ ಆಹಾರವನ್ನು ಇಡಿ’ ಎಂದು ಸಲಹೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಯೂಸೂಫ್ ಸಿದ್ದಿಕಿ ಮಾತನಾಡಿ, ‘ಪರಿಸರಕ್ಕೂ ಕೃಷಿಗೂ ಕರಳು ಬಳ್ಳಿಯ ಸಂಬಂಧವಿದೆ. ಅದರಂತೆ ಬೇಸಿಗೆ ಕಾಲದಲ್ಲಿ ಪಕ್ಷಿಗಳಿಗೆ ನೀರು ಮತ್ತು ಆಹಾರ ದೊರಕುವುದು ದುಸ್ತರ. ಸ್ಥಳೀಯ ಕಚ್ಚಾವಸ್ತುಗಳನ್ನು ಸದ್ಬಳಕೆ ಮಾಡಿಕೊಂಡು ನಮ್ಮ ಮನೆಯ ಅಥವಾ ನೆರಳಿನ ಆಸರೆ ಬಯಸಿ ಬರುವ ಪಕ್ಷಿಗಳಿಗೆ ಕಾಣುವಂತೆ ತೊಟ್ಟಿ ನೇತು ಹಾಕಿ ಅದರಲ್ಲಿ ಒಂದರಲ್ಲಿ ನೀರು ಇನ್ನೊಂದರಲ್ಲಿ ಹಿಡಿ ಅಕ್ಕಿ, ಸಜ್ಜೆಯಂತಹ ಪಕ್ಷಿ ಸೇವಿಸುವ ಆಹಾರವನ್ನು ಹಾಕಿ. ಪ್ರತಿ ದಿನ ಒಂದು ಲೋಟ ನೀರು ಹಾಕಿ ಜೀವ ಸಂಕುಲದ ಸಂರಕ್ಷಣೆ ಮಾಡಿದಂತೆ ಆಗುತ್ತದೆ’ ಎಂದರು.

‘ನಮ್ಮ ಕೋರ್ಟ್ ಆವರಣದಲ್ಲಿ ಸಾಕಷ್ಟು ಮರಗಳನ್ನು ಬೆಳೆಸಿದ್ದೇವೆ. ಪಕ್ಷಿಗಳಿಗೆ ನೀರುಣಿಸಲು ಅಲ್ಲಲ್ಲಿ ಮಣ್ಣಿನ ತೊಟ್ಟಿ ನೇತು ಹಾಕಿದ್ದೇವೆ. ನೆರಳಿನ ಆಸರೆಯ ಕೆಳಗಡೆ ಕುಳಿತಾಗ ತೊಟ್ಟಿಯಲ್ಲಿ ನೀರು ಹಾಕಿ. ಆಗ ಪಕ್ಷಿಗಳು ನೀರಿನ ದಾಹ ತೀರಿಸಿಕೊಳ್ಳಲು ಬರುತ್ತವೆ. ಇದು ನಮ್ಮ ಮಕ್ಕಳಿಗೂ ಪ್ರೇರಣೆಯಾಗಲಿ’ ಎಂದು ಹೇಳಿದರು.

ಶಿರಸ್ತೇದಾರ ಗುರುರಾಜ ದೇಶಪಾಂಡೆ, ಮಲ್ಲಣ್ಣ ಮಡಿವಾಳಕರ್, ಅಯ್ಯಣ್ಣ ಮಕಾಶಿ, ಅನಿಲ ಗಾಜರಕೋಟ, ಪ್ಯಾನಲ್ ವಕೀಲರು, ಮಧ್ಯಸ್ಥಿಕೆದಾರರು ಹಾಗೂ ವಕೀಲರ ಸಂಘದ ಸದಸ್ಯರು ಹಾಗೂ ನ್ಯಾಯಾಂಗ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-30-34363220

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.