ಯಾದಗಿರಿ: ‘ಅದ್ವೈತ ಸಿದ್ಧಾಂತಕ್ಕೆ ತಾರ್ಕಿಕ ನೆಲೆಗಟ್ಟನ್ನು ಒದಗಿಸಿಕೊಟ್ಟು, ಅದನ್ನು ದರ್ಶನ ಮಟ್ಟಕ್ಕೆ ಕೊಂಡೊಯ್ದ ಶಂಕರಾಚಾರ್ಯರು ಇಡೀ ಜಗತ್ತಿಗೆ ಜ್ಞಾನದ ದಾರಿ ತೋರಿಸಿದವರು’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಹಾಗೂ ಶಂಕರಾಚಾರ್ಯರ ಜಯಂತ್ಯುತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬಾಲಕರಾಗಿದ್ದಾಗಲೇ ಸನ್ಯಾಸಿ ಆಗಬೇಕೆಂದು ದೃಢಸಂಕಲ್ಪ ಮಾಡಿದ್ದ ಶಂಕರಾಚಾರ್ಯರು, ಲೋಕ ಕಲ್ಯಾಣಕ್ಕಾಗಿ 8ನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿದರು. ತಮ್ಮ ಗುರುವಾಗಿ ಗುರು ಗೋವಿಂದ ಭಗವತ್ಪಾದರನ್ನು ಆರಿಸಿಕೊಂಡರು. ಭಾರತದ್ಯಾಂತ ಮೂರು ಬಾರಿ ಸಂಚರಿಸಿ, ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿ ಹಿಂದೂ ಧರ್ಮವನ್ನು ಪುನರ್ ಸ್ಥಾಪಿಸಿದ್ದಾರೆ’ ಎಂದರು.

‘ಭಾರತದ ಸಂಸ್ಕೃತಿಯ ಇತಿಹಾಸದಲ್ಲಿ ಧ್ರುವ ನಕ್ಷತ್ರದಂತೆ ಪ್ರಕಾಶಮಾನ ವಾಗಿರುವ ಮಹಾಪುರುಷರಲ್ಲಿ ಶಂಕರಾಚಾರ್ಯರು ಪ್ರಮುಖರು. ಅದ್ವೈತ ಸಿದ್ಧಾಂತವು ವಿಶ್ವದ ತತ್ವಶಾಸ್ತ್ರಗಳಲ್ಲಿ ಅತ್ಯಂತ ಪ್ರಮುಖವಾಗಿದ್ದು, ಸನಾತನ ಭಾರತ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಆಚಾರ್ಯತ್ರಯರಲ್ಲಿ ಶಂಕರಾ ಚಾರ್ಯರು ಮೊದಲಿಗರು’ ಎಂದು ಹೇಳಿದರು.

‘ಶುದ್ಧವಾದ ಚೈತನ್ಯವನ್ನು ಕಣ್ಣಿನಿಂದ ನೋಡಲು ಸಾಧ್ಯವಿಲ್ಲ, ಅದಕ್ಕೊಂದು ರೂಪ ಕೊಡಲಾಗಿದೆ. ರೂಪವಿಲ್ಲದಿದ್ದರೆ ಸಾಕ್ಷಾತ್ಕಾರ ಮಾಡಿಕೊಳ್ಳಲು ಸಾಧ್ಯವಿಲ್ಲ. ಶುದ್ಧ ಚೈತನ್ಯವು ನಿರ್ಗುಣ ಸ್ವರೂಪವಾದದ್ದು ಎಂದು ಶಂಕರಾಚಾರ್ಯರು ತಮ್ಮ ಸಂದೇಶದ ಮೂಲಕ ಜ್ಞಾನದ ಗುರುವಾಣಿಯಲ್ಲಿ ಜಗತ್ತಿಗೆ ಸಾರಿದ್ದಾರೆ’ ಎಂದರು.

‘ನಮ್ಮ ಸಮಾಜಕ್ಕೆ ಶಂಕರಾಚಾರ್ಯರ ಆಶೀರ್ವಾದ ಸದಾ ಇರಲಿ. ಸಮಾಜದ ಮುಖಂಡ ಗೋರಖನಾಥ್ ಅವರು ಹೇಳಿದಂತೆ ಮಠಕ್ಕೆ ಜಾಗ ಕೊಡಿಸುವ ಪ್ರಯತ್ನ ಮಾಡಿ, ಸರ್ಕಾರದಿಂದ ಸಹಾಯವೂ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ವಿಶೇಷ ಉಪನ್ಯಾಸ ನೀಡಿದ ವಿಜಯಲಕ್ಷ್ಮಿ ಅರಕೇರಾ, ‘ಶಂಕರಾಚಾರ್ಯರು ಜಗತ್ತಿಗೆ ಮಾರ್ಗದರ್ಶಕರು. ಹಿಂದೂ ಧರ್ಮ ನಶಿಸುತ್ತಿದ್ದ ಕಾಲದಲ್ಲಿ ವೇದ ಪುರಾಣಗಳನ್ನು ಪುನರುಜ್ಜೀವನಗೊಳಿಸಿದ್ದವರು. ಬಾಲ್ಯದಲ್ಲಿಯೇ ವೇದ, ಪುರಾಣಗಳನ್ನು ಅಧ್ಯಯನ ಮಾಡಿ ಅರ್ಥೈಸಿಕೊಂಡವರು’ ಎಂದರು.

‘ಬಾಲ್ಯದಲ್ಲಿಯೇ ಮಹಾನ್ ಜ್ಞಾನ ಸಂಪಾದಿಸಿದ್ದ ಶಂಕರಾಚಾರ್ಯರು, ಮೂರು ಬಾರಿ ಅಖಂಡ ಭಾರತದಲ್ಲಿ ಸಂಚರಿಸಿದರು. ನಾಲ್ಕು ಕಡೆಗಳಲ್ಲಿ ಪೀಠಗಳನ್ನು ಸ್ಥಾಪಿಸಿದ್ದರು. ಶೃಂಗೇರಿಯಲ್ಲಿ ಸ್ಥಾಪಿಸಿದ್ದ ಪೀಠವು ಶಂಕರಾಚಾರ್ಯರಿಗೆ ಬಹು ಪ್ರಿಯವಾಗಿತ್ತು. ಧರ್ಮ ಸ್ಥಾಪನೆಯ ಸೂಕ್ತ ಸ್ಥಳವೆಂದು ಭಾವಿಸಿದ್ದರಿಂದ ಇಂದಿಗೂ ಅಲ್ಲಿ ಜ್ಞಾನ ಮಹಿಮೆ ಸಾರುತ್ತಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ‘ಯುಡಾ’ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಸಹಾಯಕ ಆಯುಕ್ತ ಶ್ರೀಧರ್ ಗೋಟೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಸಮಾಜದ ಮುಖಂಡರಾ ಗೋರಖನಾಥ ಜೋಶಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-30-823237751

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.