ಶಹಾಪುರ: ತಾಲ್ಲೂಕಿನ ಶಿರವಾಳ ಗ್ರಾಮಕ್ಕೆ ಹೊಂದಿಕೊಂಡಂತೆ ಕೂಗಳೆತೆಯ ದೂರದಲ್ಲಿ ಭೀಮಾ ನದಿ ಹರಿಯುತ್ತಿದ್ದರು ಸಹ ಗ್ರಾಮಸ್ಥರು ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆ ಎದುರಿಸಿ ಬಸವಳಿದಿದ್ದಾರೆ. ಸಾಕಷ್ಟು ನೀರಿನ ಲಭ್ಯತೆ ಇದೆ ಸಮರ್ಪಕವಾದ ನಿರ್ವಹಣೆಯ ಬರ ಎದುರಿಸುವಂತೆ ಆಗಿದೆ ಎನ್ನುವುದು ಗ್ರಾಮಸ್ಥರ ಅಳಲು ಆಗಿದೆ.

ಗ್ರಾಮದಲ್ಲಿ ಸುಮಾರು ಎರಡು ಸಾವಿರ ಕುಟುಂಬಗಳಿದ್ದು, 6 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಗ್ರಾಮದಲ್ಲಿ ಪುರಾತನ ಬಾವಿ ಇವೆ. ಹಳ್ಳದ ನೀರು ಸದಾ ಹರಿಯುತ್ತದೆ. ಯಾವುದೇ ಅಂತರ್ಜಮಟ್ಟ ಕುಸಿದಿಲ್ಲ.

‘ಆದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಇಲ್ಲದ ಸಬೂಬು ಹೇಳುತ್ತಾರೆ. ಮೋಟಾರ ಸುಟ್ಟಿದೆ, ಪೈಪ್ ಒಡೆದಿವೆ. ಅನುದಾನವಿಲ್ಲ ಎಂದು ಹಾರಿಕೆ ಉತ್ತರ ನೀಡಿ ಮರೆಯಾಗುತ್ತಾರೆ. ನಮ್ಮ ಪಾಡು ಹೇಳ ತೀರದಾಗಿದೆ. ಅದರಲ್ಲಿ ಮಹಿಳೆಯರು ಹಿಡಿಶಾಪ ಹಾಕುತ್ತಿದ್ದಾರೆ’ ಎಂದು ಗ್ರಾಮದ ನಿವಾಸಿ ಮರೆಪ್ಪ ಪ್ಯಾಟಿ ಆರೋಪಿಸಿದರು.

‘ನಾವು ಬೆಳಿಗ್ಗೆ ಎದ್ದು ಕುಡಿಯಲು ಯೋಗ್ಯವಲ್ಲದ ಹಳ್ಳದ ನೀರು ಇಲ್ಲವೆ ಕ್ವಾರಿಯಲ್ಲಿ ನಿಂತ ಗಡುಸಾದ ನೀರು ಕುಡಿಯುವುದರಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಎಲ್ಲಾ ಕಡೆ ಪೈಪ್ ಒಡೆದು ಹಾಳಾಗಿ ನೀರು ಸೋರಿಕೆಯಾಗಿ ಇಡೀ ಪ್ರದೇಶ ಗಬ್ಬೆದ್ದು ನಾರುತ್ತದೆ. ಆದರೂ ನಮಗೆ ನೀರು ಸಿಗುತ್ತಿಲ್ಲ. ಮೌನದೊಳಗೆ ಕೆಂಡದಂತಹ ಸಿಟ್ಟು ಉಕ್ಕಿ ಬರುತ್ತಲಿದೆ. ಅಸಹಾಯಕ ಮಹಿಳೆಯರು ನಾವು ಏನು ಮಾಡಲು ಸಾಧ್ಯ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಲಿದೆ’ ಎನ್ನುತ್ತಾರೆ ಗ್ರಾಮದ ಮಹಿಳೆ ಒಬ್ಬರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-30-1276721818

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.