ಯಾದಗಿರಿ: ನಗರದ ಸ್ಟೇಷನ್ ಏರಿಯಾದ ಶಿವಾಜಿ ಯುವ ಗರ್ಜನೆ ಸೇನೆ ವತಿಯಿಂದ ಶುಕ್ರವಾರ ಸರ್ಕಾರಿ ಪದವಿ ಕಾಲೇಜು ಸಮೀಪದ ಹನುಮಾನ ದೇವಸ್ಥಾನದಿಂದ ಭವಾನಿ ಮಂದಿರದವರೆಗೆ ಸುಮಾರು 14 ಅಡಿ ಎತ್ತರದ ಶ್ರೀರಾಮ ಮೂರ್ತಿ, ಅಂಬಾಭವಾನಿ ಹಾಗೂ ಶಿವಾಜಿಯ ಅದ್ದೂರಿ ಶೋಭಾಯಾತ್ರೆ ಜರುಗಿತು.

ಹನುಮಾನ ಮಂದಿರದಲ್ಲಿ ಅಲಂಕೃತ ವಾಹನಗಳಲ್ಲಿ ಇರಿಸಿದ್ದ ಬಿಲ್ಲುದಾರಿ ಶ್ರೀರಾಮನ ಮೂರ್ತಿ, ಹೂಗಳಿಂದ ಸಿಂಗರಿಸಲಾದ ಅಂಬಾಭವಾನಿ ಭಾವಚಿತ್ರ ಹಾಗೂ ಸಿಂಹಾಸನಾರೂಢ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.

ಶೋಭಾಯಾತ್ರೆಗೆ ಚಾಲನೆ ಸಿಗುತ್ತಿದ್ದಂತೆ ‘ಜೈಶ್ರೀರಾಮ’, ‘ರಾಮಚಂದ್ರ ಪ್ರಭು ಮಹಾರಾಜಕೀ ಜೈ’, ‘ಜಾನಕಿರಾಮನಿಗೆ ಜೈ’... ಘೋಷಣೆಗಳು ಮೊಳಗಿದವು. ಡಿ.ಜೆ. ಸಂಗೀತದಲ್ಲಿ ಶ್ರೀರಾಮನ ಕುರಿತ ಹಾಡುಗಳನ್ನು ಬಿತ್ತರಿಸುತ್ತಿದ್ದಂತೆಯೇ ಕೇಸರಿ ಶಾಲು, ಕೇಸರಿ ಧ್ವಜಗಳನ್ನು ಹಿಡಿದಿದ್ದ ಯುವಕರು ಕುಣಿದು ಕುಪ್ಪಳಿಸಿದರು.

‘ಜೈ ಶ್ರೀರಾಮ್’, ‘ಜೈ ಶ್ರೀರಾಮ್ ರಘುಪತಿ ರಾಘವ ಜೈ ಶ್ರೀರಾಮ್’, ‘ಹುಟ್ಟಿದ್ದಾರೆ ಕನ್ನಡ ನಾಡಲ್ಲಿ’ ಸೇರಿದಂತೆ ಕನ್ನಡ, ಹಿಂದಿ, ಮರಾಠಿ ಡಿ.ಜೆ. ರಿಮಿಕ್ಸ್ ಹಾಡುಗಳಿಗೆ ಯುವಕರು ಮೈ ಸಡಿಲ ಮಾಡಿ ಕುಣಿದು ಸಂಭ್ರಮಿಸಿದರು. ಶೋಭಾಯಾತ್ರೆಯನ್ನು ಕಣ್ತುಂಬಿಕೊಳ್ಳಲು ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ಜನರು ನಿಂತಿದ್ದು ಕಂಡುಬಂತು.

ಹನುಮಾನ ದೇವಸ್ಥಾನದಿಂದ ಹೊರಟ ಶೋಭಾಯಾತ್ರೆಯು ನೇತಾಜಿ ಸುಭಾಷ ಚಂದ್ರಬೋಸ್ ವೃತ್ತ, ಶಾಸ್ತ್ರಿ ವೃತ್ತ, ರೈಲ್ವೆ ನಿಲ್ದಾಣ ರಸ್ತೆ ಮಾರ್ಗವಾಗಿ ಭವಾನಿ ಮಂದಿರ ತಲುಪಿ ಸಂಪನ್ನಗೊಂಡಿತು.

ಶಿವಾಜಿ ಯುವ ಗರ್ಜನೆ ಸೇನೆಯ ಮುಖಂಡರಾದ ಲಕ್ಷ್ಮಣ ಮಡ್ಡಿ, ರಾಜು ಚವ್ಹಾಣ, ಚಿಂಟು ದಳಪತಿ, ಭಗವಾನ್, ಆನಂದ ಸಾಗರ್, ಸುಮಿತ್, ಬಜರಂಗದಳದ ಶಿವು, ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಮಹೇಶರೆಡ್ಡಿ ಮುದ್ನಾಳ, ಲಕ್ಷ್ಮಿಪುತ್ರ ಮಾಲಿಪಾಟೀಲ ಸೇರಿದಂತೆ ಹಲವರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಶೋಭಯಾತ್ರೆ ಸಾಗುವ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಯಿತು. ವಾಹನಗಳ ಸುಗಮ ಸಂಚಾರಕ್ಕಾಗಿ ಪೊಲೀಸರು ರಸ್ತೆಯ ಅಲ್ಲಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ವಾಹನಗಳು ಬೇರೊಂದು ರಸ್ತೆಗಳಲ್ಲಿ ತೆರಳುವಂತೆ ಸೂಚಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-30-387860871

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.