ಬುಧವಾರ, ಜುಲೈ 28, 2021
26 °C

ಯಾದಗಿರಿ: ಹೂಳೆತ್ತುವ ಕಾಮಗಾರಿ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಭಾರತೀಯ ಜೈನ್ ಸಂಘದ ವತಿಯಿಂದ ನಡೆಯುತ್ತಿರುವ ನಗರದ ದೊಡ್ಡ ಕೆರೆ ನಾಲಾ ಹೂಳೆತ್ತುವ ಹಾಗೂ ವಿಸ್ತರಣೆ ಕಾಮಗಾರಿಯನ್ನು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮಂಗಳವಾರ ಪರಿಶೀಲಿಸಿದರು.

ಯಾದಗಿರಿ ದೊಡ್ಡ ಕೆರೆ 12.53 ಎಂ.ಸಿ.ಎಫ್‌.ಟಿ ಸಾಮರ್ಥ್ಯ ಹೊಂದಿದ್ದು, ಸುಮಾರು 50 ಹೆಕ್ಟರ್ ನೀರಾವರಿ ಪ್ರದೇಶ ಹೊಂದಿರುತ್ತದೆ. ಸದರಿ ಕಾಮಗಾರಿಯಿಂದ ದೊಡ್ಡ ಕೆರೆಯ ಒಳ ಹರಿವು ಹೆಚ್ಚಾಗಲಿದೆ. 6 ವರ್ಷಗಳಿಂದ ಕೆರೆ ತುಂಬಿಲ್ಲ. ನಾಲಾ ಹೂಳೆತ್ತುವ ಕಾಮಗಾರಿ ನಿರ್ವಹಣೆಯಿಂದ ದೊಡ್ಡ ಕೆರೆ ತುಂಬುವ ಆಶಾಭಾವ ಇದೆ ಎಂದರು.

ನಾಲಾ ದಂಡೆ ಮೇಲೆ ಗಿಡಗಳನ್ನು ನೆಡಬೇಕು. ಚೆಕ್‍ಡ್ಯಾಂ ನಿರ್ಮಿಸಲು ಕ್ರಮ ವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸಣ್ಣ ನೀರಾವರಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಸವರಾಜ ಮಾಲಿಪಾಟೀಲ, ಕೃಷಿ ಇಲಾಖೆ ಉಪ ನಿರ್ದೇಶಕ ಸಮದ್ ಪಟೇಲ್, ಪೌರಾಯುಕ್ತ ಬಕ್ಕಪ್ಪ, ಕೃಷಿ ಇಲಾಖೆ ತಾಂತ್ರಿಕ ಸಹಾಯಕ ಕೇದಾರನಾಥ, ಭಾರತೀಯ ಜೈನ್ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಅಜಿತ್ ಜೈನ್, ಬಿಜೆಎಸ್ ಜಿಲ್ಲಾ ಸಂಯೋಜಕ ರಾಜೇಶ ಜೈನ್, ಕಾರ್ಯದರ್ಶಿ ದಿನೇಶ ಜೈನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು