ಯಾದಗಿರಿ: ಹಸಿರುಸಿರಿಯ ಬೆಟ್ಟಗುಡ್ಡಗಳ ನಡುವೆ ಕೆರೆ ಏರಿ ಮಾದರಿಯಲ್ಲಿ ನಿರ್ಮಾಣವಾದ ಸೌದಗಾರ ಜಲಾಶಯವು ಪ್ರಾಕೃತಿಕ ಸೌಂದರ್ಯದ ಮಡಿಲು. ಜಲರಾಶಿಯಲ್ಲಿ ಅಡಗಿದ್ದ ಕಲ್ಲು ಬಂಡೆಗಳೆಲ್ಲ ರಣ ಬೇಸಿಗೆಗೆ ಮೈದಡವಿ ಎದ್ದು ಕುಳಿತಿವೆ.

ಎಡ– ಬಲದಲ್ಲಿನ ಬೆಟ್ಟಗಳ ಸಾಲು, ಕಲ್ಲು ಬಂಡೆಗಳ ನಡುವೆ ವ್ಯಾಪಿಸಿಕೊಂಡ ಸೌದಗಾರ ಜಲಾಶಯವು 0.29 ಟಿಎಂಸಿ ಜಲ ಸಾಮರ್ಥ್ಯದ ಹಿನ್ನೀರಿನ ಪ್ರದೇಶ ಹೊಂದಿದೆ. ಹಸಿರು, ಜಲರಾಶಿಯಿಂದಾಗಿ ಮಳೆಗಾಲದಲ್ಲಿ ಪ್ರಕೃತಿ ಪ್ರಿಯರನ್ನು ಸೆಳೆಯುತ್ತದೆ.

ಮಳೆಗಾಲದಲ್ಲಿ ಭರ್ತಿಯಾದರೆ ಜಲಾಶಯದಲ್ಲಿ ಅಲ್ಲಲ್ಲಿ ತಲೆ ಎತ್ತಿನಿಂತ ಕಲ್ಲು ಬಂಡೆಗಳು ದೀಪದಂತೆ, ಲಂಗರು ಹಾಕಿದ ಹಡಗಿನಂತೆ ಭಾಸವಾಗುತ್ತವೆ. ಕಣ್ಮನ ಸೆಳೆಯುತ್ತಿದ್ದ ಜಲರಾಶಿಯು ಕರಗಿ, ಬೇಸಿಗೆಯ ಭೀಕರತೆಯನ್ನು ಬಂಡೆಗಳು ಪಾಚಿ ಗಟ್ಟಿದ ನೀರಿನಿಂದ ಹೊರಬಿದ್ದು ಬಿಳಿಯಾನೆಯಾಗಿ ಸಾರಿ– ಸಾರಿ ಹೇಳುತ್ತಿವೆ.

ಸೂರ್ಯ ಕೆಂಡದಂತೆ ಬಿಸಿಲು ಹೊರಹಾಕಿ, ಬಿಸಿಲ ಝಳ, ಪ್ರಖರತೆ ಹೆಚ್ಚಾದಂತೆ ನೀರು ಆವಿಯಾಗುತ್ತಿದೆ. ಮತ್ತೊಂದು ಕಡೆ ಕಾಲುವೆಗಳಿಗೆ ನೀರು ಹರಿದಂತೆ ಜಲಾಶಯದ ಹಿನ್ನೀರು, ನಡು ನೀರಿನಲ್ಲಿ ಅವಿತ್ತಿದ್ದ ಬೃಹತ್ ಬಂಡೆಗಳು ಹೊರಬಂದಿವೆ.

ಬೆಟ್ಟಗಳ ಸಾಲಿನಲ್ಲಿ ದಟ್ಟ ಹಸಿರು ಸಿರಿ ಕಳೆದುಕೊಂಡ ಕುರುಚಲು ಗಿಡಗಳು; ಪಾಚಿಗಟ್ಟಿ ಬಿಳಿ ಬಣ್ಣಕ್ಕೆ ತಿರುಗಿದ ಕಪ್ಪು ಬಂಡೆಗಲ್ಲುಗಳು; ಎಮ್ಮೆಗಳಂತೆ ಕೆಸರು ಮಯವಾದ ನೀರಲ್ಲಿ ಬಿದ್ದುಕೊಂಡ ಕಲ್ಲು ಗುಂಡುಗಳು; ಹಾಸುಬಂಡೆಯ ಮೇಲೆ ಕಪ್ಪೆಯಂತೆ ಕುಳಿತು ನೀರಿಗೆ ಜಿಗಿಯಲ್ಲು ಸನ್ನದ್ಧವಾದ ಶಿಲೆ ಕಲ್ಲು; ನೀರಲ್ಲಿ ಕೆಟ್ಟು ನಿಂತ ಹಡಗಿನಂತೆ ಕಾಣಿಸುವ ಕಲ್ಲು– ಮಣ್ಣು– ಗಿಡಗಳಿಂದ ಆವೃತ್ತವಾದ ದಿಬ್ಬ; ಮೊಸಳೆಯಂತೆ ಬಾಲ ಬಾಗಿಸಿ ಮಲಗಿರುವ ಗುಂಡುಕಲ್ಲು... ಹೀಗೆ, ನಾನಾ ಬಗೆಯ ಕಲ್ಪನೆಯ ಕಲ್ಲುಗಳು ಜಲದಲ್ಲಿ ಮಿಂದು, ಈಗ ಬಿಸಿಲಿಗೆ ‘ಸುಡುವ’ ಹೆಂಚಿನಂತೆ ಕಾಯುತ್ತಿವೆ.

ನೀರಿನಲ್ಲಿ ಸದಾ ಆಟವಾಡುತ್ತಿದ್ದ ಜಲಚರಗಳ ಆಟವೂ ಕಾಣದಾಗಿದೆ. ಹಿನ್ನೀರಿನ ತಗ್ಗುಗಳಲ್ಲಿ ಆಶ್ರಯ ಪಡೆದಿದ್ದ ಮೀನುಗಳು ಸಾವನ್ನಪ್ಪಿವೆ, ಕೆಲವು ಮತ್ಸಪ್ರಿಯರ ಪಾಲಾಗಿವೆ. ಸೂರ್ಯನ ಪ್ರಖರತೆ ಕರಗಿ, ಇಳಿ ಸಂಜೆಯಲ್ಲಿ ಗಾಣ ಹಿಡಿದು ಬರುವವರಿಗೆ ಇಡೀ ದಿನ ಕಾದು ಕೆಂಡವಾದ ಕಲ್ಲುಗಳು ಮಲಗಲು ಹಾಸಿಗೆಯಾಗಿ, ಕೂರಲು ಸಹ ಆಸರೆಯಾಗಿವೆ.

ಒಡಲಿಗೆ ಕನ್ನ

ಜಲಾಶಯದ ನೀರು ಬತ್ತಿದಂತೆ ಮರುಂ ಕಳ್ಳರು ಒಡಲಿಗೆ ಕನ್ನ ಹಾಕುತ್ತಿದ್ದಾರೆ. ದೊಡ್ಡ– ದೊಡ್ಡ ಗುಂಡಿಗಳನ್ನು ತೋಡಿ ಮರುಂ, ಮಣ್ಣು ಕದ್ದು ತೆಗೆದುಕೊಂಡಿ ಹೋಗಿರುವುದನ್ನು ಹಿನ್ನೀರಿನ ಪ್ರದೇಶದಲ್ಲಿ ಬಿದ್ದಿರುವ ಗುಂಡಿಗಳೇ ಹೇಳುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.