ಯಾದಗಿರಿ: ‘ಶಿಕ್ಷಕರು ಹೇಳಿಕೊಟ್ಟ ಪಾಠ ಕಲಿತು ಪರೀಕ್ಷೆ ಬರೆದ ಮಕ್ಕಳಿಗೆ ತಮ್ಮಲ್ಲಿನ ಪ್ರತಿಭೆಯನ್ನು ಹೊರ ಹಾಕಲು ಬೇಸಿಗೆ ಶಿಬಿರ ವೇದಿಕೆಯಾಗಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹೇಳಿದರು.

ಇಲ್ಲಿನ ಜಿಲ್ಲಾ ಪೊಲೀಸ್ ಭವನದ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ಆಯೋಜಿಸಿದ್ದ ಬೇಸಿಗೆ ಶಿಬಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶೈಕ್ಷಣಿಕ ವರ್ಷದ 10 ತಿಂಗಳು ಶಾಲಾ ತರಗತಿಗಳಿಗೆ ಹಾಜರಾಗುವ ಮಕ್ಕಳು ಪಠ್ಯವನ್ನು ಕಲೆಯುತ್ತಾರೆ. ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಯನ್ನು ಶಿಬಿರದ ಮೂಲಕ ಅನಾವರಣಗೊಳಿಸುವ ನಿಟ್ಟಿನಲ್ಲಿ ಸಣ್ಣ ಪ್ರಯತ್ನಕ್ಕೆ ಮುಂದಾಗಿದ್ದೇವೆ’ ಎಂದರು.

‘ಮಕ್ಕಳ ಮಿದುಳು ಬಹಳ ಸೂಕ್ಷ್ಮವಾಗಿದ್ದು, ವೇಗದ ಗ್ರಹಿಕೆ ಹೊಂದಿರುತ್ತಾರೆ. ಎಳೆಯದರಲ್ಲಿ ನಾವು ಏನು ಹೇಳಿಕೊಡುತ್ತೇವೆ, ಏನು ಕಲಿಸುತ್ತೇವೆ ಅದನ್ನು ಬೇಗನೆ ಅರಿವು ಗುಣವಿರುತ್ತದೆ. ಬೇಸಿಗೆಯ ಶಾಲಾ ರಜೆಗಳಲ್ಲಿ ಮಕ್ಕಳ ಸಾಮಾನ್ಯ ಜ್ಞಾನದ ಜತೆಗೆ ಕಲೆ, ಸಂಗೀತ, ಜಾನಪದ, ನೃತ್ಯ, ಚಿತ್ರಕಲೆ, ನಾಟಕ, ಪರಿಸರ ಸಂರಕ್ಷಣೆ, ಈಜು, ಭಾಷಣದಂತಹ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಮಕ್ಕಳು ಜ್ಞಾನ ಸಂಪಾದನೆಗೆ ತಮ್ಮ ಬಳಿ ಸಾಧಕರ, ಆದರ್ಶನೀಯ ಮತ್ತು ಮಹಾತ್ಮರ ಪುಸ್ತಕಗಳನ್ನು ಇರಿಸಿಕೊಂಡು ಓದಬೇಕು. ಪದಗಳ ಅರ್ಥ ಅರಿಯಲು ಕಡ್ಡಾಯವಾಗಿ ಶಬ್ದಕೋಶ ಇರಿಸಿಕೊಳ್ಳಬೇಕು. ರಾಜ್ಯ, ರಾಷ್ಟ್ರದ ನಕ್ಷೆ ಇರಿಸಿಕೊಂಡು, ಸುತ್ತಲಿನ ಪರಿಸರ, ಅರಣ್ಯ, ಕೃಷಿ ಬಗ್ಗೆಯೂ ತಿಳಿದುಕೊಂಡಿರಬೇಕು’ ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಿವೈಎಸ್ಪಿ ಭರತಕುಮಾರ ತಳವಾರ, ‘ಬೇಸಿಗೆ ರಜೆಯ ಅಮೂಲ್ಯ ದಿನಗಳು ಹಾಳಾಗಬಾರದು ಎಂಬ ಉದ್ದೇಶದಿಂದ ಎಸ್ಪಿ ಅವರು ಪೊಲೀಸ್ ಇಲಾಖೆ ಸಿಬ್ಬಂದಿ ಮಕ್ಕಳಿಗೆ ಶಿಬಿರವನ್ನು ಏರ್ಪಡಿಸಿದ್ದಾರೆ. ಇದರಿಂದ ಮಕ್ಕಳ ಜ್ಞಾನ ವೃದ್ಧಿಯಾಗಲಿದೆ’ ಎಂದರು.

ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ಭೀಮಾಶಂಕರ, ರಮೇಶ ಕಾಂಬಳೆ, ಶ್ರೀದೇವಿ ಬಿರಾದಾರ, ಲಕ್ಷ್ಮಪ್ಪ ಚವ್ಹಾಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-30-189358824

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.