ಯಾದಗಿರಿ: ಕಳೆದ ಕೆಲವು ತಿಂಗಳಿಂದ ಪಾತಾಳ ಕಂಡಿದ್ದ ಟೊಮೆಟೊ ದರವು ಈಗ ಚೇತರಿಕೆ ಹಂತಲ್ಲಿದ್ದರೂ ಖರೀದಿಯಾಗದೆ ಉಳಿದ ಟೊಮೆಟೊವನ್ನು ಬೆಳೆಗಾರರು ತಿಪ್ಪೆಗೆ ಸುರಿದರು.

ತಾಲ್ಲೂಕಿನ ಗುಂಡಳ್ಳಿ ರೈತ ಬಲರಾಮ ರಾಠೋಡ ಅವರು ತಮ್ಮ ಒಂದೂವರೆ ಎಕರೆಯಲ್ಲಿ ಟೊಮೆಟೊ ಬೆಳೆದಿದ್ದರು. ಫಸಲನ್ನು ನಗರದ ಮಾರುಕಟ್ಟೆಗೆ ತಂದು, ಮೂರು ದಿನಗಳಾದರೂ ಖರೀದಿಯಾಗಲಿಲ್ಲ. ಅನಿವಾರ್ಯವಾಗಿ ಅದನ್ನು ರಸ್ತೆಯ ಬದಿಯ ತಿಪ್ಪೆಗೆ ಸುರಿದು ಖಾಲಿ ಕೈಯಲ್ಲಿ ಮನೆಗೆ ಮರಳಿದರು.

ಮಾರುಕಟ್ಟೆಯಲ್ಲಿ ಈಗ ಉತ್ತಮ ಗುಣಮಟ್ಟದ 25 ಕೆ.ಜಿ. ಒಂದು ಪೆಟ್ಟಿಗೆ ಟೊಮೆಟೊ ₹ 150ರಿಂದ ₹200 ಆಸುಪಾಸಿನಲ್ಲಿ ಮಾರಾಟ ಆಗುತ್ತಿದೆ. ಕೆಲ ದಿನಗಳ ಹಿಂದೆ ಅದು, ₹100ರಿಂದ ₹150 ಆಸುಪಾಸಿನಲ್ಲಿ. ತಿಂಗಳ ಹಿಂದೆ ₹100ಗೂ ಮಾರಾಟ ಆಗಿತ್ತು. ಈಗ, ದರ ಚೇತರಿಕೆ ಕಾಣುತ್ತಿದ್ದರೂ ಮಾರುಕಟ್ಟೆ ಬಂದಷ್ಟು ಫಸಲು ಖರೀದಿ ಆಗುತ್ತಿಲ್ಲ. ಹೀಗಾಗಿ, ರೈತರು ವಾಪಸ್ ತೆಗೆದುಕೊಂಡು ಹೋಗಲು ಆಗದೆ ರಸ್ತೆಯ ಬದಿಯಲ್ಲಿ ಚೆಲ್ಲುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಸ್ಥರು.

‘ಕಳೆದ ವರ್ಷ ಯಾದಗಿರಿ, ಶಹಾಪುರ, ಜೇವರ್ಗಿಯಲ್ಲಿ ಮಾರಾಟ ಮಾಡಿದ್ದು, ಒಂದು ಬಾಕ್ಸ್ಗೆ ₹1,200 ವರೆಗೆ ಮಾರಾಟ ಮಾಡಿದ್ದೆ. ಈ ವರ್ಷ ಅಂತಹುದ್ದೆ ಬೆಲೆ ನಿರೀಕ್ಷೆಯಲ್ಲಿದ್ದೆ. ಆದರೆ, ಡಿಸೆಂಬರ್ ತಿಂಗಳಲ್ಲಿ ಒಂದು ಬಾಕ್ಸ್ ₹250ಕ್ಕೆ ಮಾರಾಟ ಆಗಿದ್ದೆ ಅತಿಹೆಚ್ಚು. ಎರಡ್ಮೂರು ಲಕ್ಷ ರೂಪಾಯಿ ಖರ್ಚು ಮಾಡಿ ಒಂದೂವರೆ ಎಕರೆಯಲ್ಲಿ ಟೊಮೆಟೊ ಬೆಳೆದಿದ್ದೇನೆ. ಕೇವಲ ₹50 ಸಾವಿರ ಕೈ ಸೇರಿದ್ದು, ಅದು ಸಹ ಫಸಲು ಕಟಾವು ಕೂಲಿ, ಮಾರುಕಟ್ಟೆಯ ಸಾಗಾಣಿಕೆಗೆ ಖರ್ಚಾಗಿದೆ. ತೋಟದಲ್ಲಿ ಬೆಳೆದ ಫಸಲು ದನಗಳಿಗೆ ಹಾಕಿದ್ದೇನೆ’ ಎಂದು ಬಲರಾಮ ರಾಠೋಡ ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ಎರಡನೇ ಗುಣಮಟ್ಟದ ಫಸಲು ₹100ರ ಆಸುಪಾಸಿನಲ್ಲಿ ಖರೀದಿ ಆಗುತ್ತಿದ್ದರೆ, ಸಾಧಾರಣ ಟೊಮೆಟೊ ₹80ಕ್ಕಿಂತ ಕೆಳಗೆ ಇದೆ. ಬಿಸಿಲಿನಿಂದಾಗಿ ಟೊಮೆಟೊದ ಗುಣಮಟ್ಟ ಕುಸಿಯುತ್ತದೆ. ಹೀಗಾಗಿ, ದರದಲ್ಲಿ ಇಳಿಯುವುದು ಸಾಮಾನ್ಯ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-30-1272614738

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.