ಯಾದಗಿರಿ: ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆ– 2026 ಅನ್ನು ಹಿಂಪಡೆಯುವಂತೆ ಆಗ್ರಹಿಸಿ ಸಿಎಸ್ಜಿಎಂಆರ್ ಒಕ್ಕೂಟ, ಸಾರಥ್ಯ ಕರ್ನಾಟಕ ಸಮುದಾಯ ಸಂಘಟನೆಗಳ ಒಕ್ಕೂಟ ಹಾಗೂ ಆಶಾಕಿರಣ ಸಾಮಾಜಿಕ ಸೇವಾ ಸಂಘದ ಲಿಂಗತ್ವ ಅಲ್ಪಸಂಖ್ಯಾತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ನೇತಾಜಿ ವೃತ್ತದಲ್ಲಿ ಜಮಾಯಿಸಿದ ಲಿಂಗತ್ವ ಅಲ್ಪಸಂಖ್ಯಾತರು ಪ್ರತಿಭಟನೆ ಮಾಡಿದರು. ‘ 2026ರ ಟ್ರಾನ್ಸ್ಜೆಂಡರ್ ಮಸೂದೆ ತಿರಸ್ಕರಿಸಿ’, ‘ದೇಹಗಳ ಮೇಲೆ ಪೊಲೀಸ್ಗಿರಿ ನಿಲ್ಲಿಸಿ’, ‘ನನ್ನ ಲಿಂಗತ್ವವನ್ನು ನಾನು ನಿರ್ಧರಿಸುತ್ತೇನೆ’, ‘ನನ್ನ ಲಿಂಗತ್ವವನ್ನು ವೈದ್ಯಕೀಯಕರಣ ಮಾಡಬೇಡಿ’, ‘ಅಂತರಲಿಂಗಿ ಜನರಿಗೆ ಪ್ರತ್ಯೇಕ ಕಾನೂನು ಬೇಕು’ ಎಂಬ ನಾಮಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಜಿಲ್ಲಾಧಿಕಾರಿಯ ಕಚೇರಿಗೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರಿಗೆ ಮನವಿ ಪತ್ರ ಸಲ್ಲಿಕೆ ಮಾಡಿದರು.

ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ರಿಸ್ಟಿ ರಾಜ್, ‘ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆಯು ಲಿಂಗತ್ವ ಅಲ್ಪಸಂಖ್ಯಾತರ ಮತ್ತು ಲಿಂಗ ವೈವಿಧ್ಯತೆ ಸಮುದಾಯಗಳ ಹಕ್ಕುಗಳಿಗೆ ಗಂಭೀರವಾದ ಹಾನಿಯುಂಟು ಮಾಡುವ ಸಾಧ್ಯತೆ ಇದೆ. ಈಗ ಅಸ್ತಿತ್ವದಲ್ಲಿ ಇರುವ ಸಮಾನತೆ, ಗೌರವ ಮತ್ತು ಸ್ವಯಂ ಗುರುತಿನ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ’ ಎಂದು ಹೇಳಿದರು.

‘ಟ್ರಾನ್ಸ್ಜೆಂಡರ್ ಎಂಬ ಪದಕ್ಕೆ ಸೀಮಿತ ಮತ್ತು ತಪ್ಪಾದ ವ್ಯಾಖ್ಯಾನ ನೀಡಲಾಗಿದೆ. ಲಿಂಗತ್ವ ಗುರುತಿಗೆ ವೈದ್ಯಕೀಯ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸುವ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗಿದೆ. ಸಂವಿಧಾನದ 14, 19 ಮತ್ತು 21ನೇ ವಿಧಿಗಳ ಉಲ್ಲಂಘನೆಯಾಗುವ ಸಾಧ್ಯತೆಗಳಿವೆ’ ಎಂದು ಆರೋಪಿಸಿದರು.

‘ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ಮೇಲ್ವಿಚಾರಣೆ ಮತ್ತು ನಿಯಂತ್ರಣ ಮಾಡಲು ಹೊರಟಿರುವುದು ಖಂಡನೀಯ. ಲಿಂಗ ಗುರುತಿನ ಸ್ವಯಂ ನಿರ್ಧಾರ ಹಕ್ಕು ರಕ್ಷಿಸಬೇಕು. ಕಾಯ್ದೆಗಳನ್ನು ರೂಪಿಸುವ ಮುನ್ನ ಎಲ್ಲ ಹಂತಗಳಲ್ಲಿ ಸಮುದಾಯದೊಂದಿಗೆ ಸಮಾಲೋಚನೆ ನಡೆಸಬೇಕು’ ಎಂದರು.

‘ತಿದ್ದುಪಡಿಯ ಕಾನೂನುಗಳು ಸಂವಿಧಾನ ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕು ಮಾನದಂಡಗಳಿಗೆ ಅನುಗುಣವಾಗಿ ಇರಬೇಕು. ಸಂವಿಧಾನದ ಮೌಲ್ಯಗಳನ್ನು ಕಾಪಾಡಬೇಕು’ ಎಂದು ಕೋರಿದರು.

ಸಂಸ್ಥೆಯ ಪದಾಧಿಕಾರಿಗಳಾದ ಮಾಯಾ ನಾಯಕ, ಪ್ರಿಯಾಂಕಾ ಮಾತನಾಡಿ, ‘ನಮ್ಮ ಸಮುದಾಯದಲ್ಲಿ ಉನ್ನತ ಶಿಕ್ಷಣ ಪಡೆದವರು ಸಾಕಷ್ಟು ಜನರಿದ್ದಾರೆ. ಜಿಲ್ಲಾಡಳಿತ ಸೂಕ್ತ ಕೆಲಸ ನೀಡಿದರೆ ನಾವು ಏಕೆ ಭಿಕ್ಷೆ ಬೇಡುತ್ತೇವೆ. ಆದಾಯದ ಮೂಲ ಇಲ್ಲದೆ ಜೀವನ ನಿರ್ವಹಣೆ ಹೇಗಾಗುತ್ತದೆ? ಅಧಿಕಾರಿಗಳು ನಮ್ಮ ಸ್ಥಿತಿಗತಿ ಅರ್ಥ ಮಾಡಿಕೊಳ್ಳಬೇಕು’ ಎಂದರು.

ಈ ವೇಳೆ ಒಕ್ಕೂಟದ ಪ್ರಮುಖರಾದ ಚಾಂದಿನಿ, ತ್ರಿಮೂರ್ತಿ, ಅಂಕಿತಾ, ಮಂಜುಳಾ, ಪುಂಡಲಿಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-30-44823256

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.