ವಡಗೇರಾ: ತಾಲ್ಲೂಕಿನ ತುಮಕೂರು ಗ್ರಾಮದ ಗಂಗಾನಗರದ ಬಡಾವಣೆಯಲ್ಲಿ ಕಳೆದ 9 ದಿನಗಳಿಂದ ಕುಡಿಯುವ ನಿರಿನ ಸಮಸ್ಯೆ ಉದ್ಭವಿಸಿದರು ಯಾರೊಬ್ಬರು ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಆರೋಪಿಸಿ ಶನಿವಾರ ಬಡಾವಣೆಯ ನಿವಾಸಿಗಳು ಖಾಲಿ ಕೊಡಗಳನ್ನು ಹಿಡಿದುಕೊಂಡು ಪಂಚಾಯಿತಿಯ ಮುಂದೆ ಪ್ರತಿಭಟನೆಯನ್ನು ಮಾಡಿದರು.

‘ಗ್ರಾಮ ಪಂಚಾಯಿತಿಯ ಕಚೇರಿಯ ಪಕ್ಕದಲ್ಲಿಯೆ ಇರುವ ಗಂಗಾನಗರ ಬಡಾವಣೆಯಲ್ಲಿ ಸುಮಾರು 52 ಮನೆಗಳು ಇವೆ. ಈ ಮನೆಗಳಿಗೆ ಕಳೆದ 9 ದಿನಗಳಿಂದ ಕುಡಿಯಲು ನೀರಿಲ್ಲ ಪೈಪ್ಗಳು ಒಡೆದು ಹೋಗಿವೆ ಇನ್ನು ಕುಡಿಯುವ ನೀರು ತರಲು ಖಾಸಗಿ ವ್ಯಕ್ತಿಗಳ ಬೋರ್ವೆಲ್ಗೆ ಹೋಗಿ ಗಂಟೆಗಟ್ಟಲೆ ನಿಂತು ನೀರು ತರಬೇಕಾಗುತ್ತದೆ’ ಎಂದು ಪ್ರತಿಭಟನಾ ನಿರತ ಮಹಿಳೆಯರು ಆಕ್ರೊಶವನ್ನು ವ್ಯಕ್ತಪಡಿಸಿದರು.

‘ಬಡಾಣೆಯ ನಿವಾಸಿಗಳು ನಳದ ನೀರಿನ ಮೇಲೆ ಅವಲಂಬಿತರಾಗಿದ್ದೇವೆ. ಒಂದು ದಿನ ನಳದ ನೀರು ಬಾರದಿದ್ದರೆ ಕುಡಿಯುವ ನೀರಿನ ಹಾಹಾಕಾರ ಎದುರಾಗುತ್ತದೆ. ಹೀಗಿರುವಾಗ ಪದೇ ಪದೇ ನಳದ ಸಮಸ್ಯೆ ಎದುರಾಗಿ ಬಡಾವಣೆಯ ನಿವಾಸಿಗಳು ತೊಂದರೆಯನ್ನು ಅನುಭವಿಸುತ್ತಿದ್ದರೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾತ್ರ ನಿರ್ಲಕ್ಷ ವಹಿಸುವುದರ ಜೊತೆಗೆ ಸರಿಯಾಗಿ ಗ್ರಾಮ ಪಂಚಾಯಿತಿಗೆ ಬರುವುದಿಲ್ಲ ಸಾರ್ವಜನಿಕರ ಕೈಗೂ ಸಿಗದೇ ಮೊಬೈಲ್ಗೆ ಕರೆ ಮಾಡಿದರು ಕರೆ ಸ್ವೀಕರಿಸಲ್ಲ’ ಎಂದು ಬಡಾವಣೆಯ ನಿವಾಸಿಗಳು ದೂರಿದರು.

‘ಇಂತಹ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಬೇರೆಡೆ ವರ್ಗಾವಣೆ ಮಾಡುವಂತೆ ಆಗ್ರಹಿಸುವುದರ ಜತೆಗೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸದಿದ್ದರೆ ಮುಂಬರುವ ದಿನಗಳಲ್ಲಿ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆಯನ್ನು ಮಾಡಲಾಗುವುದು’ ಎಂದು ಮಹಿಳೆಯರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮಸಿದೇಮ್ಮ ದಾವುಲ್ ಸಾಬ್, ಜಲ್ಲಮ್ಮ ರಹಿಮ್ ಸಾಬ್ ಮುಲ್ಲಾ, ಸಿದ್ದಲಿಂಗಮ್ಮ, ಚನ್ನಮ್ಮ, ಮಹಾದೇವಮ್ಮ, ಬಸಮ್ಮ ದೊರೆ, ಅಬ್ದುಲ್ ರಹಿಮ್, ಸುಬಾಶ್, ಶಾಂತಪ್ಪ ಮ್ಯಾಗೇರಿ, ತಿಮ್ಮಪ್ಪ ಮ್ಯಾಗೇರಿ, ತಿಮ್ಮಪ್ಪ ಕುಣಿಚಿ, ಕುಮಾರ ಮ್ಯಾಗೇರಿ, ಈಶಪ್ಪ, ಹೊಗ್ಗಯ್ಯ ಪೂಜಾರಿ ಹಾಗೂ ಇನ್ನಿತರರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-30-1722473680

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.