ವಡಗೇರಾ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ತುಮಕೂರು ಗ್ರಾಮದಲ್ಲಿ ಸೋಮವಾರ ಮಳೆಯಿಂದ ತೇವಾಂಶಗೊಂಡಿದ್ದ ಗೋಡೆ ಕುಸಿದು ಬಿದ್ದು ಒಬ್ಬ ಬಾಲಕಿ ಮೃತಪಟ್ಟು, ಇಬ್ಬರು ಸಹೋದರಿಯರು ಗಾಯಗೊಂಡಿದ್ದಾರೆ.

ಸಿದ್ದಪ್ಪ ಮತ್ತು ಮರೆಮ್ಮ ದಂಪತಿ ಪುತ್ರಿ ಅಕ್ಷತಾ (7) ಮೃತ ಬಾಲಕಿ. ಆಕೆಯ ಸಹೋದರಿಯರಾದ ಸಂಗೀತಾ ಮತ್ತು ಭೂಮಿಕಾ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

‘ಭಾನುವಾರ ಸಂಜೆ ಸುರಿದ ಮಳೆಯಿಂದಾಗಿ ಅಡುಗೆ ಮನೆಯ ಗೋಡೆ ತೇವಗೊಂಡಿತ್ತು. ಬೆಳಿಗ್ಗೆ ಮೂವರು ಮಕ್ಕಳು ಗೋಡೆಯ ಪಕ್ಕದಲ್ಲಿ ಆಟವಾಡುತ್ತಿದ್ದರು. ಏಕಾಏಕಿ ಗೋಡೆ ಕುಸಿದು ಬಿದ್ದು, ಗಂಭೀರವಾಗಿ ಗಾಯಗೊಂಡ ಅಕ್ಷತಾ ಮೃತಪಟ್ಟಿದ್ದಾಳೆ’ ಎಂದು ಬಾಲಕಿ ತಂದೆ ಸಿದ್ದಪ್ಪ ದೂರಿನಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-51-1249428041

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.