ವಡಗೇರಾ: ಸಮೀಪದ ಇಬ್ರಾಹಿಂಪುರ ಕೆರೆಯಲ್ಲಿರುವ ಅಬ್ದುಲ್ಬಾಷಾ ದರ್ಗಾದ ಬಳಿ ಸುಗಮ ಸಂಚಾರಕ್ಕೆ ಸಂಚಾರ ಪೊಲೀಸರನ್ನು ನಿಯುಕ್ತಿಗೊಳಿಸಬೇಕು ಎಂದು ನಗರಸಭೆ ಮಾಜಿ ಸದಸ್ಯ ಸುರೇಶ ಮಡ್ಡಿ, ಚಂದ್ರಕಾಂತ ಮಡ್ಡಿ, ಸುರೇಶ ತಡಿಬಿಡಿ, ಶ್ರೀನಿವಾಸ ಗುಡಗುಡಿ ಆಗ್ರಹಿಸಿದ್ದಾರೆ.

‘ದರ್ಗಾದ ಬಳಿ ಸೋಮವಾರ ಹಾಗೂ ಗುರುವಾರ ಭಕ್ತರ ಸಂದಣಿ ಹಾಗೂ ವಾಹನಗಳ ದಟ್ಟಣೆ ಹೆಚ್ಚಾಗುವುದರಿಂದ ಸಂಚಾರಕ್ಕೆ ಬಹಳಷ್ಟು ತೊಂದರೆಯಾಗುತ್ತಿದೆ. ಭಕ್ತರು ಹರಕೆ ತೀರಿಸಲು ದರ್ಗಾಕ್ಕೆ ಕುಟುಂಬ ಸಮೇತ ಹಾಗೂ ಗೆಳೆಯರ ಖಾಸಗಿ ವಾಹನಗಳು, ಇಲ್ಲವೆ ತಮ್ಮ ಸ್ವಂತ ವಾಹನಗಳಲ್ಲಿ ಬರುತ್ತಾರೆ. ಭಕ್ತರು ಅಡ್ಡಾದಿಡ್ಡಿಯಾಗಿ ವಾಹನಗಳನ್ನು ರಸ್ತೆ ಮೇಲೆ ನಿಲ್ಲಿಸುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿ ತಾಸುಗಟ್ಟಲೆ ರಸ್ತೆ ಮೇಲೆ ನಿಲ್ಲುವುದು ಅನಿವಾರ್ಯವಾಗಿದೆ. ಇದರಿಂದ ಮಹಿಳೆಯರು, ಚಿಕ್ಕ ಮಕ್ಕಳಿಗೆ ತೊಂದರೆಯಾಗುತ್ತಿದೆ’ ಎಂದು ಪ್ರಕಟಣೆಯಲ್ಲಿ ದೂರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-30-1760223802

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.