ವಾಟ್ಕರ್ ನಾಮದೇವ

ವಡಗೇರಾ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಕೃಷ್ಣಾ ಹಾಗೂ ಭೀಮಾ ನದಿಗಳು ಹರಿಯುತ್ತಿದ್ದರೂ ಕಾಲುವೆಯ ಕೊನೆಯ ಅಂಚಿನ ಗ್ರಾಮಗಳ ರೈತರ ಜಮೀನುಗಳಿಗೆ ನೀರಾವರಿ ಗಗನ ಕುಸುಮವಾಗಿದೆ. ಕಾಲುವೆಗಳಲ್ಲಿ ನೀರು ಹರಿಯದೆ ಬೆಳೆಗಳು ಒಣಗಿ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.

ಕೃಷ್ಣಾ ಮತ್ತು ಭೀಮಾ ನದಿಗಳು ಈ ಭಾಗದ ಜೀವನದಿಗಳಾಗಿದ್ದು, ಇವೆರಡೂ ವಡಗೇರಾ ತಾಲ್ಲೂಕಿನಲ್ಲಿ ಹರಿಯುತ್ತವೆ. ಇದುವರೆಗೂ ಆಡಳಿತ ನಡೆಸಿದ ಸರ್ಕಾರಗಳಿಗೆ ಈ ನದಿಗಳ ನೀರನ್ನು ತಾಲ್ಲೂಕಿನ ರೈತರ ಜಮೀನುಗಳಿಗೆ ಸಮರ್ಪಕವಾಗಿ ತಲುಪಿಸುವ ಕಾರ್ಯವನ್ನು ಮಾಡಲು ಆಗಿಲ್ಲ. ಹಲವು ನೀರಾವರಿ ಯೋಜನೆಗಳಿದ್ದರೂ ನೀರು ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೇಸಿಗೆಯಲ್ಲಿ ಬೆಳೆ ತೆಗೆಯಲು ಪರದಾಡುವ ಸ್ಥಿತಿಯೂ ನಿರ್ಮಾಣವಾಗಿದೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಒಟ್ಟು 62,071 ಹೆಕ್ಟೇರ್ ಪ್ರದೇಶ ಜಮೀನಿದೆ. ಅದರಲ್ಲಿ 52,160 ಹೆಕ್ಟೇರ್ ಸಾಗುವಳಿ ಕ್ಷೇತ್ರವಿದ್ದು, 26,808 ಹೆಕ್ಟೇರ್ ನೀರಾವರಿ ಪ್ರದೇಶವಿದೆ. ಒಣ ಬೇಸಾಯದಡಿ 25,352 ಹೆಕ್ಟೇರ್ ಒಳಪಟ್ಟಿದೆ. ವಡಗೇರಾ ಉಪ ವಿಭಾಗದ ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಸುಮಾರು 33 ಗ್ರಾಮಗಳು ಸೇರುತ್ತವೆ. ಶೇ 50ರಷ್ಟು ಜಮೀನು ಮಾತ್ರ ನೀರಾವರಿ ಸೌಲಭ್ಯ ಹೊಂದಿದೆ. ಹತ್ತಿ, ತೊಗರಿ, ಶೇಂಗಾ, ಸೂರ್ಯಕಾಂತಿ ಹಾಗೂ ಭತ್ತವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ವಿತರಣಾ ಕಾಲುವೆಗಳಿದ್ದರೂ ನೀರಿಲ್ಲ: ಈ ಭಾಗದ ವಿತರಣಾ ಕಾಲುವೆ ಸಂಖ್ಯೆ 18, 19, 20, 20ಎ, 21, 22ಎ, 24 ಹಾಗೂ 25ರ ಮುಖಾಂತರ ರೈತರ ಜಮೀನುಗಳಿಗೆ ನೀರು ಹರಿಯಬೇಕಿತ್ತು. ಆದರೆ, ಬಹುತೇಕ ಕಾಲುವೆಗಳಲ್ಲಿ ನೀರು ಹರಿಯದೆ ಇರುವುದರಿಂದ ಜಮೀನಿನಲ್ಲಿರುವ ಬೆಳೆಗಳು ಒಣಗುತ್ತಿವೆ. ಈ ಕಾಲುವೆಗಳ ಜಂಗಲ್ ಕಟಿಂಗ್, ಹೂಳೆತ್ತಲು ಹಾಗೂ ದುರಸ್ತಿಗಾಗಿ ಪ್ರತಿ ವರ್ಷ ಸರ್ಕಾರ ನೀರಿನಂತೆ ಹಣ ಖರ್ಚು ಮಾಡುತ್ತದೆ. ಆದರೆ, ಕಾಲುವೆಗಳಲ್ಲಿ ಮಾತ್ರ ಆಗಾಗ ನೀರು ಹರಿಯುತ್ತದೆ ಎನ್ನುತ್ತಾರೆ ರೈತರು.

ವಡಗೇರಾದಿಂದ ಸಂಗಮವರೆಗೆ ಸುಮಾರು 23 ಕಿ.ಮೀ.ವರೆಗೆ (ಎಕ್ಸ್ಪ್ರೆಸ್ ಲೈನ್– ಕೃಷ್ಣಾ ನದಿಯಿಂದ ನೇರವಾಗಿ ಕಾಲುವೆಗಳಿಗೆ ನೀರು ಸರಬರಾಜು ಮಾಡುವ ಯೋಜನೆ) ನೀರಾವರಿ ಕಾಲುವೆಗಳ ನಿರ್ಮಾಣ ಕಾಮಗಾರಿ ಕಳೆದ ಮೂರು ವರ್ಷದಿಂದ ಚಾಲ್ತಿಯಲ್ಲಿದೆ. ಆದರೆ, ಕಾಮಗಾರಿಯು ಆಮೆಗತಿಯಲ್ಲಿ ನಡೆಯುತ್ತಿರುವುದರಿಂದ ಕೊನೆಯ ಅಂಚಿನ ಗ್ರಾಮಗಳ ಜಮೀನುಗಳಿಗೆ ನೀರಾವರಿ ಸೌಲಭ್ಯ ಸಿಕ್ಕಿಲ್ಲ.

ಕೆರೆ ತುಂಬಿಸುವ ಯೋಜನೆ: ವಡಗೇರಾ ಪಟ್ಟಣದಿಂದ ತುಮಕೂರು 6 ಕಿ.ಮೀ ಅಂತರದಲ್ಲಿದೆ. ಪಕ್ಕದಲ್ಲಿಯೆ ಕೃಷ್ಣಾ ನದಿ ಹರಿಯುತ್ತದೆ. ಕೃಷ್ಣಾ ನದಿಯಿಂದ ಪೈಪ್ ಮುಖಾಂತರ ಪಟ್ಟಣದ ಹೊಸ ಕೆರೆಗೆ ನೀರು ತುಂಬಿಸಿದರೆ ಇಲ್ಲಿಯ ಜಮೀನುಗಳಿಗೆ ಹಾಗೂ ಕೊನೆ ಅಂಚಿನ ಗ್ರಾಮಗಳ ಜಮೀನುಗಳಿಗೆ ಸಕಾಲದಲ್ಲಿ ನೀರು ಸರಬರಾಜಾಗಿ ಇದರಿಂದ ರೈತರು ಆರ್ಥಿಕ ಚೇತರಿಕೆ ಹೊಂದಲು ಸಾಧ್ಯ ಎನ್ನುತ್ತಾರೆ ಸ್ಥಳೀಯರು.

ಎರಡು ಬ್ರಿಡ್ಜ್ ಕಂ ಬ್ಯಾರೇಜ್: ತಾಲ್ಲೂಕಿನ ವ್ಯಾಪ್ತಿಯ ಕಂದಳ್ಳಿ ಹಾಗೂ ಜೋಳದಡಗಿ ಗ್ರಾಮದ ಹತ್ತಿರ ಭೀಮಾ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. ಮಳೆಗಾಲದಲ್ಲಿ ಭೀಮಾ ನದಿ ತುಂಬಿ ಹರಿಯುತ್ತದೆ. ಆದರೆ ಬೇಸಿಗೆ ಕಾಲದಲ್ಲಿ ನದಿಯಲ್ಲಿ ನೀರು ಇರುವುದಿಲ್ಲ.

ಬ್ರಿಡ್ಜ್ ಕಂ ಬ್ಯಾರೇಜ್ಗೆ ಅಳವಡಿಸಿರುವ ಗೇಟ್ಗಳು ತುಕ್ಕು ಹಿಡಿದಿರುವುದರಿಂದ ನೀರು ಹರಿದು ಪೋಲಾಗುತ್ತದೆ . ಇದಿರಂದಾಗಿ ಬೇಸಿಗೆ ಕಾಲದಲ್ಲಿ ಬೆಳೆಗಳಿಗೆ ನೀರು ಸಿಗುವುದಿಲ್ಲ. ಪ್ರತಿ ವರ್ಷ ಬ್ರಿಡ್ಜ್ ಕಂ ಬ್ಯಾರೇಜ್ನ ನಿರ್ವಹಣೆಗೆ ಸರ್ಕಾರದ ಲಕ್ಷಾಂತರ ರೂಪಾಯಿ ಅನುದಾನ ನೀರಿನಂತೆ ಖರ್ಚಾಗುತ್ತದೆ ಆದರೆ ರೈತರ ಜಮೀನುಗಳಿಗೆ ಒಂದು ಹನಿ ನೀರು ಸಿಗುವುದಿಲ್ಲ.

ರೈತರು ನೀರಿನ ಕರ ಕಟ್ಟಲೇಬೇಕು: ಕೊನೆ ಅಂಚಿನ ಗ್ರಾಮಗಳ ರೈತರ ಜಮೀನುಗಳಿಗೆ ನೀರಾವರಿ ಕಾಳುವೆಗಳ ಮೂಲಕ ನೀರು ಸರಬರಾಜು ಆಗುವುದಿಲ್ಲ. ಆದರೂ ರೈತರು ಕಡ್ಡಾಯವಾಗಿ ನೀರಿನ ಕರ ಕಟ್ಟಲೇಬೇಕು. ಕಟ್ಟದಿದ್ದರೆ ಜಮೀನುಗಳ ಮಾರಾಟ ಇಲ್ಲವೆ ಖರೀದಿಯ ನೋಂದಣಿಯಾಗುವುದಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-30-1216717782

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.