ವಡಗೇರಾ: ಕಳೆದ ವರ್ಷ ಮೇ 28 ರಂದು ಸಚಿವ ಸಂಪುಟ ಸಭೆಯಲ್ಲಿ ವಡಗೇರಾ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವುದಾಗಿ ಘೋಷಣೆ ಮಾಡಿತ್ತು. ಅಂದು ಈ ಭಾಗದ ಜನ ಸಂಭ್ರಮಿಸಿದರು.

ಆದರೆ, ವಡಗೇರಾ ಪಟ್ಟಣಕ್ಕೆ ಇಲ್ಲಿಯವರೆಗೂ ಪಟ್ಟಣ ಪಂಚಾಯಿತಿ ಆಡಳಿತ ಅಧಿಕಾರಿ ನೇಮಕ ಮಾಡಿಲ್ಲ. ಹಾಗೆಯೇ ಪಂಚಾಯಿತಿಯ ಚುನಾವಣೆಗಾಗಿ ಸದಸ್ಯರ ಸಂಖ್ಯಾ ಪಟ್ಟಿಯನ್ನು ಕೇಳಿ ಸರ್ಕಾರ ಅಧಿಸೂಚನೆ ಹೋರಡಿಸಿದೆ. ಇದರಿಂದಾಗಿ ತಾಲ್ಲೂಕಿನ ವ್ಯಾಪ್ತಿಯ ಜನರಲ್ಲಿ ಆತಂಕವ ಉಂಟಾಗಿದೆ.

ವಡಗೇರಾ ಗ್ರಾ.ಪಂ ವ್ಯಾಪ್ತಿಯ ಕಮಲಾ ನಾಯಕ ತಾಂಡಾ, ಬೀರನಕಲ್ ತಾಂಡಾ, ಬೀರನಕಲ್, ಕೋನಹಳ್ಳಿ, ಕಂಠಿತಾಂಡಾ, ಬಸವನಗರ, ಕೊನಹಳ್ಳಿ ಬರುತ್ತವೆ. ಒಟ್ಟು 27 ಗ್ರಾ.ಪಂ ಸದಸ್ಯರಿದ್ದು, ಸುಮಾರು 64 ಹಳ್ಳಿಗಳು ತಾಲ್ಲೂಕಿನ ವ್ಯಾಪ್ತಿಯಲ್ಲಿದೆ. 10 ಸಾವಿರಕ್ಕಿಂತ ಅಧಿಕ ಜನಸಂಖ್ಯೆ ಹೊಂದಿದೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಭೀಮಾ ಹಾಗೂ ಕೃಷ್ಣಾ ನದಿಗಳಿರುವುದರಿಂದ ನೀರಾವರಿ ಸೌಲಭ್ಯವಿದೆ. ಸುತ್ತಮುತ್ತಲಿನ ಹಳ್ಳಿಗಳಿಗೆ ವಡಗೇರಾ ಕೇಂದ್ರಸ್ಥಾನವಾಗಿದೆ. ಇಷ್ಟೆಲ್ಲಾ ಇದ್ದರೂ ಸಹ ಇಲ್ಲಿಯವರೆಗೂ ಸರ್ಕಾರ ಘೋಷಿತ ಪಟ್ಟಣ ಪಂಚಾಯಿತಿಗೆ ಆಡಳಿತ ಅಧಿಕಾರಿ ನೇಮಕ ಮಾಡಿಲ್ಲ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದರ ಜತೆಗೆ ತಾಲ್ಲೂಕು ಕೇಂದ್ರವೆಂದು ಘೋಷಣೆಯಾಗಿರುವ ಹುಣಸಗಿ ಗ್ರಾ.ಪಂ.ಯನ್ನು ಪಟ್ಟಣ ಪಂಚಾಯತಿಯನ್ನಾಗಿ ಪರಿವರ್ತಿಸಲಾಯಿತು. ಆದರೆ, ಇದೇ ಸಮಯದಲ್ಲಿ ವಡಗೇರಾವನ್ನು ನಿರ್ಲಕ್ಷಿಸಲಾಗಿತ್ತು. ಇದರಿಂದ ಅಂದಿನ ಬಿಜೆಪಿ ಸರ್ಕಾರದ ನಡೆ ತಾಲ್ಲೂಕಿನ ಜನರ ಆಕ್ರೋಶಕ್ಕೆ ಕಾರಣವಾಗಿತ್ತು.

ನಂತರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಿಕ್ಕೆ ಬಂದಾಗ ತಾಲ್ಲೂಕಿನ ಜನರು ಹಾಗೂ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರನ್ನು ಭೇಟಿ ಮಾಡಿ ಪಟ್ಟಣ ಪಂಚಾಯಿತಿಗಾಗಿ ಮನವಿ ಸಲ್ಲಿಸಿದರು.

ಮನವಿಗೆ ಸ್ಪಂದಿಸಿದ ಶಾಸಕ ತುನ್ನೂರು, ವಡಗೇರಾವನ್ನು ಪಟ್ಟಣ ಪಂಚಾಯಿತಿ ಎಂದು ಘೋಷಣೆ ಮಾಡಿಸುವಲ್ಲಿ ಯಶಸ್ವಿಯಾದರು. ಆದರೆ, ಅದು ಘೋಷಣೆಯಾಗಿಯೇ ಉಳಿದಿರುವುದು ವಡಗೇರಾ ಜನರಲ್ಲಿ ನಿರಾಸೆ ಉಂಟು ಮಾಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-30-799694509

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.