ಶಹಾಪುರ: ತಾಲ್ಲೂಕಿನ ವಿಭೂತಿಹಳ್ಳಿ ಗ್ರಾಮದಿಂದ ದಲಿತ ಬಡಾವಣೆಗೆ ಹೊಸ ರಸ್ತೆ ನಿರ್ಮಾಣಕ್ಕೆ ದಲಿತ ಸಮುದಾಯದ ಮುಖಂಡರು ಬೀದಿಗಳಿದರು. ರಸ್ತೆ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಗ್ರಾಮದ ಅನ್ಯ ಸಮುದಾಯದವರು ಪ್ರತಿಭಟನೆ ನಡೆಸಿದರು. ಇದರಿಂದ ಪರ ಹಾಗೂ ವಿರೋಧ ಉಂಟಾಗಿ ಗೊಂದಲ ಆರಂಭವಾಯಿತು. ಸ್ಥಳಕ್ಕೆ ಪೊಲೀಸರು ಆಗಮಿಸಿ ಎರಡು ಸಮುದಾಯದ ಗುಂಪಿನವರನ್ನು ಸಮಾಧಾನಪಡಿಸಿದರು.

ಕೆಕೆಆರ್ಡಿಬಿ ಯೋಜನೆ ಅಡಿಯಲ್ಲಿ ಹೊಸದಾಗಿ ರಸ್ತೆ ನಿರ್ಮಾಣಕ್ಕೆ ವರ್ಷದ ಹಿಂದೆ ₹25 ಲಕ್ಷ ಅನುದಾನ ಬಂದಿತ್ತು. ಆಗ ಗ್ರಾಮದ ಕುರುಬ ಸಮುದಾಯದ ಕೆಲ ಮುಖಂಡರು ತಕಾರರು ತೆಗೆದು ರಸ್ತೆ ಪಕ್ಕದಲ್ಲಿರುವ ದೇಗುಲಕ್ಕೆ ಹಾನಿ ಆಗುತ್ತದೆ ಎಂದು ಆರೋಪಿಸಿ ಕಲಬುರಗಿ ಹೈಕೋರ್ಟ್ ಮೆಟ್ಟಿಲು ಹತ್ತಿದರು. ಈಗ ಅರ್ಜಿ ಇತ್ಯಾರ್ಥಗೊಂಡಿದೆ. ಅದರಂತೆ ನಾವು ರಸ್ತೆ ನಿರ್ಮಾಣಕ್ಕೆ ಮುಂದಾಗಿ ಜೆಸಿಬಿ ಮೂಲಕ ರಸ್ತೆ ಸ್ವಚ್ಛಗೊಳಿಸಲು ಮುಂದಾದ ತಕ್ಷಣ ಕೆಲವರು ರಸ್ತೆ ಕಾಮಗಾರಿಗೆ ಆರಂಭಿಸಲು ಬಿಡುತ್ತಿಲ್ಲ ಎಂದು ಗ್ರಾಮದ ದಲಿತರ ಬಡಾವಣೆಯ ಮುಖಂಡ ವಿಶ್ವ ನಾಟೇಕರ್ ಆರೋಪಿಸಿದರು.

ರಸ್ತೆಗೆ ಹೊಂದಿಕೊಂಡಂತೆ ದೇಗುಲವಿದೆ. ಮಹಿಳೆಯರು ಇದೇ ಪ್ರದೇಶವನ್ನು ಶೌಚಾಲಯಕ್ಕೆ ಉಪಯೋಗಿಸುತ್ತಾರೆ. ರಸ್ತೆ ನಿರ್ಮಾಣದಿಂದ ಮಹಿಳೆಯರಿಗೆ ತೊಂದರೆಯಾಗುತ್ತದೆ. ರಸ್ತೆ ನಿರ್ಮಾಣ ಮಾಡಬೇಡಿ ಎಂದು ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದಾಗ ಎರಡು ಸಮುದಾಯದವನ್ನು ಸಮಧಾನಪಡಿಸಿ ಪೊಲೀಸರು ವಾಪಸ್ಸು ಕಳುಹಿಸಿದ್ದಾರೆ. ಅಲ್ಲದೆ ಯಾವದೇ ಕೆಲಸ ನಿರ್ವಹಿಸದಂತೆ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಗ್ರಾಮದ ಕುರುಬ ಸಮಾಜದ ಮುಖಂಡ ಶರಬಣ್ಣ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-30-860772298

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.