ಗುರುಮಠಕಲ್: ‘ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಅತಿಯಾದ ರಾಸಾಯನಿಕಗಳ ಬಳಕೆಯಿಂದಾಗಿ ಕ್ಯಾನ್ಸರ್, ಪಾರ್ಶ್ವವಾಯು, ಮೂತ್ರಪಿಂಡ ಸಮಸ್ಯೆ, ಮಧುಮೇಹ ಮತ್ತು ರಕ್ತದೊಡ್ಡದಂತಹ ಸಮಸ್ಯೆಗಳು ಹೆಚ್ಚುತ್ತಿರುವ ಕುರಿತು ವರದಿಯಾಗುತ್ತಿದೆ. ಸಾಮಾನ್ಯ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಆಘಾತಕಾರಿ’ ಎಂದು ಶಾಸಕ ಶರಣಗೌಡ ಕಂದಕೂರ ಕಳವಳಗೊಂಡರು.

ಪಟ್ಟಣದ ರೈತ ಸಂಪರ್ಕ ಕಚೇರಿಯಲ್ಲಿ ಭಾನುವಾರ ರಾಯಚೂರು ಕೃಷಿ ವಿಶ್ವವಿದ್ಯಾಲಯ, ಜಿಲ್ಲಾ ಕೃಷಿ ಇಲಾಖೆಯ ಸಹಯೋಗದಲ್ಲಿ ಕೃಷಿಯಲ್ಲಿ ರಾಸಾಯನಿಕಗಳ ಸಮರ್ಪಕ ಬಳಕೆ ಕುರಿತ ಜಾಗೃತಿ, ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಹಾಗೂ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚಹಾ ಅಂಗಡಿ, ಹೋಟೆಲ್, ಹಣ್ಣಿನ ಅಂಗಡಿ, ಫಾಸ್ಟ್ ಪುಡ್ ಹಾಗೂ ದಾಬಾಗಳಲ್ಲಿ ಅತೀಯಾದ ರಾಸಾಯನಿಕ ಮತ್ತು ಪ್ಲಾಸ್ಟಿಕ್ ಬಳಕೆಯಿಂದ ಜನರ ಅರೋಗ್ಯ ಹದಗೇಡುತ್ತಿದೆ. ಅಧಿಕಾರಿಗಳು ನಿಯಮ ಮೀರಿದ, ನಿಷೇಧಿತ ವಸ್ತುಗಳನ್ನು ಬಳಸುವವರ ವಿರುದ್ಧ ಕ್ರಮವಹಿಸಬೇಕು’ ಎಂದು ಸೂಚಿಸಿದರು.

‘ಅತಿಯಾದ ರಾಸಾಯನಿಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕೃಷಿ ವಿಜ್ಞಾನಿಗಳ ಸಲಹೆಯಂತೆ ಗೊಬ್ಬರ ಬಳಸಿ, ಅವಶ್ಯವಿದ್ದಷ್ಟೇ ರಾಸಾಯನಿಕಗಳನ್ನು ಬಳಸಿದರೆ ವೆಚ್ಚವೂ ಕಡಿಮೆಯಾಗಲಿದೆ. ಆದ್ದರಿಂದ ರೈತರೂ ಸಹ ಎಚ್ಚರಿಕೆ ವಹಿಸುವುದು ಅಗತ್ಯ. ಹಸಿರು ಮತ್ತು ಜೈವಿಕ ಗೊಬ್ಬರ ಬಳಗೆ ಆದ್ಯತೆ ನೀಡಬೇಕು’ ಎಂದರು.

ರಾಯಚೂರ ವಿಶ್ವವಿದ್ಯಾಲಯದ ಡೀನ್ ಎ.ಜಿ. ಶ್ರೀನಿವಾಸ ಮಾತನಾಡಿ, ‘ಬೆಳೆಗಳ ಬಾಧಿಸುವ ರೋಗಗಳನ್ನು ಗುರುತಿಸಿ ಅಗತ್ಯ ಪ್ರಮಾಣದಲ್ಲಷ್ಟೇ ರಸಾಯನಿಕ ಸಿಂಪಡಣೆ ಮಾಡಬೇಕು. ಮಿತ್ರಕೀಟಗಳ ರಕ್ಷಣೆಗೆ ಜೈವಿಕ ಪದ್ದತಿ ಸೂಕ್ತ’ ಎಂದು ಸಲಹೆ ನೀಡಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುರೇಶ, ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ, ಆಯುಬ್ ಅಹಮದ್, ಶಿವಕುಮಾರರೆಡ್ಡಿ, ಗೌರೀಶ ಗುಮಡಾಲ, ಪ್ರಕಾಶ ಗುಮಡಾಲ, ವೆಂಕಟೇಶ, ನಾರಾಯಣರೆಡ್ಡಿ, ರವಿ ಹಜಾರೆ, ಲಕ್ಷ್ಮೀ ನಾರಾಯಣರೆಡ್ಡಿ ಸೇರಿದಂತೆ ರಸಗೊಬ್ಬರ ಮಾರಾಟಗಾರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-30-932539316

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.