ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ವಾರದ ಮಾರುಕಟ್ಟೆ ನೋಟ–ಬದನೆ, ನುಗ್ಗೆಕಾಯಿ ತುಟ್ಟಿ

ಮತ್ತೆ ಏರಿಕೆಯಾದ ತರಕಾರಿ ದರ, ಟೊಮೆಟೊ ದರ ಸ್ಥಿರ, ಸೊಪ್ಪುಗಳ ದರವೂ ಹೆಚ್ಚಳ
Last Updated 5 ಡಿಸೆಂಬರ್ 2021, 3:34 IST
ಅಕ್ಷರ ಗಾತ್ರ

ಯಾದಗಿರಿ: ತರಕಾರಿ ದರ ಕಳೆದ ವಾರಕ್ಕಿಂತ ಬೆಲೆ ಹೆಚ್ಚಳವಾಗಿದೆ. ತರಕಾರಿ ರಾಜ ಬದನೆಕಾಯಿಗೆ ಈ ವಾರ ಅತ್ಯಧಿಕ ಬೆಲೆ ಸಿಕ್ಕಿದೆ. ಕೆಜಿಗೆ ₹80–90ಗೆ ಮಾರಾಟವಾಗುತ್ತಿದೆ.

ಟೊಮೆಟೊ ದರ ಸ್ಥಿರವಾಗಿದ್ದರೆ, ಸೌತೆಕಾಯಿಗೆ ಬೆಲೆ ಏರಿಕೆಯಾಗಿದೆ. ಚಿಕ್ಕ ಗಾತ್ರದ ಟೊಮೆಟೊ ₹50ರಿಂದ 60ಗೆ ಒಂದು ಕೆಜಿ ಇದ್ದರೆ ಗುಣಮಟ್ಟದ ಟೊಮೆಟೊ ₹60–70 ದರವಿದೆ.

ಬದನೆಗೆ ಬಂತು ಬೆಲೆ: ಶ್ರಾವಣ ಮಾಸದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದ ತರಕಾರಿಗಳ ರಾಜ ಬದನೆಕಾಯಿಗೆ ಈ ವಾರ ಹೆಚ್ಚಿನ ಬೆಲೆ ಬಂದಿದೆ. ಇದರ ಜೊತೆಗೆ ಮಾರುಕಟ್ಟೆಗಳಲ್ಲೂ ಆವಕ ಕಡಿಮೆಯಾಗಿದ್ದೆ ಇದಕ್ಕೆ ಕಾರಣವಾಗಿದೆ.

ಕಳೆದ ಎರಡು ವಾರಗಳಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಜೊತೆಗೆ ಮಳೆಯಿಂದ ಬದನೆಗೆ ರೋಗ ಬಂದಿದೆ. ಇದರಿಂದ ಉಳಿದ ಆವಕಕ್ಕೆ ಬೆಲೆ ಏರಿಕೆಯಾಗಿದೆ.

ನಗರದ ಮಹಾತ್ಮ ಗಾಂಧಿ ತರಕಾರಿ ಮಾರುಕಟ್ಟೆಗೆ ತಾಲ್ಲೂಕಿನ ಬಂದಳ್ಳಿ ಭಾಗದಿಂದ ಬರುತ್ತಿದೆ.

ಜೋಳದ ಹೊಲದಲ್ಲಿ ತನ್ನಷ್ಟಕ್ಕೆ ತಾನೇಬೆಳೆಯುವ ಹತ್ತರಕಿ ಸೊಪ್ಪು ಮಾರುಕಟ್ಟೆಯಲ್ಲಿ ಬೆಳಗಿನ ಹೊತ್ತು ಮಾತ್ರ ಮಾರಾಟಕ್ಕೆ ಲಭ್ಯವಿದೆ. ₹20ಗೆ ಪಾವ್‌ ಕೆಜಿ ಮಾರಾಟ ಮಾಡಲಾಗುತ್ತಿದೆ. ಈರುಳ್ಳಿ ಸೊಪ್ಪು ₹40–50 ಕೆಜಿ ಮಾರಾಟವಾಗುತ್ತಿದೆ.

ನಿಂಬೆ ಹಣ್ಣು ₹2ಗೆ ಒಂದು, ಕುಂಬಳ ಕಾಯಿ ಒಂದು ಕೆಜಿಗೆ ₹60–70 ಇದೆ. ಕರಿಬೇವು ಒಂದು ಕೆಜಿ 60 ಆಗಿದೆ. ತಿಂಗಳಿಂದ ನುಗ್ಗೆಕಾಯಿ ನೋಡಲು ಸಿಗುತ್ತಿಲ್ಲ. ಶುಂಠಿ ₹50 ಕೆಜಿ, ಬೆಳ್ಳುಳ್ಳಿ ₹80ರಿಂದ 100 ಇದೆ.

ಸೊಪ್ಪುಗಳ ದರ: ವಾರವೂ ಸೊಪ್ಪುಗಳ ದರ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಮೆಂತೆ ಸೊಪ್ಪು ₹5 ಏರಿಕೆಯಾಗಿದೆ. ಕಳೆದ ವಾರ ₹20 ದೊಡ್ಡ ಗಾತ್ರ ಸೊಪ್ಪು ಲಭ್ಯವಿತ್ತು.

ಮೆಂತೆ ಸೊಪ್ಪು ₹25–30 ಪಾಲಕ್‌ ಸೊಪ್ಪು ₹10, ಪುಂಡಿಪಲ್ಯೆ ಒಂದು ಕಟ್ಟು ₹5, ರಾಜಗಿರಿ ಸೊಪ್ಪು ₹ 5ಗೆ ಒಂದು ಕಟ್ಟು, ಸಬ್ಬಸಿಗಿ ಒಂದು ಕಟ್ಟು ₹10–15, ಕೊತಂಬರಿ ಸೊಪ್ಪು ಒಂದು ಕಟ್ಟು ₹20–25, ಪುದೀನಾ ಒಂದು ಕಟ್ಟು ₹20–25 ದರ ಇದೆ.

***

ತರಕಾರಿ; ದರ (ಪ್ರತಿ ಕೆ.ಜಿಗೆ ₹ಗಳಲ್ಲಿ)

ಟೊಮೆಟೊ;60-70

ಬದನೆಕಾಯಿ;80–90

ಬೆಂಡೆಕಾಯಿ;60–70

ದೊಣ್ಣೆಮೆಣಸಿನಕಾಯಿ;60–70

ಆಲೂಗಡ್ಡೆ;30-35

ಈರುಳ್ಳಿ;40–35

ಎಲೆಕೋಸು;40–50

ಹೂಕೋಸು; 60–70

ಚವಳೆಕಾಯಿ;60–70

ಬೀನ್ಸ್; 60–70

ಗಜ್ಜರಿ;60-70

ಸೌತೆಕಾಯಿ; 60–70

ಮೂಲಂಗಿ;40-50

ಮೆಣಸಿನಕಾಯಿ;40-30

ಸೋರೆಕಾಯಿ;40–50

ಬಿಟ್‌ರೂಟ್;50-60

ಹೀರೆಕಾಯಿ;60-70

ಹಾಗಲಕಾಯಿ; 50-60

ತೊಂಡೆಕಾಯಿ; 40-50

ಅವರೆಕಾಯಿ; 40–50

***

ಈ ವಾರ ತರಕಾರಿ ದರ ಏರಿಕೆಯಾಗಿದ್ದು, ನುಗ್ಗೆಕಾಯಿ ಮಾರುಕಟ್ಟೆಯಲ್ಲೇ ಸಿಗುತ್ತಿಲ್ಲ. ₹300 ಕೆಜಿ ಬೆಲೆ ಇದ್ದರಿಂದ ಮಾರಾಟಕ್ಕೂ ತರಲಾಗುತ್ತಿಲ್ಲ
ಗುಲಾಂ ರಸೂಲ್, ತರಕಾರಿ ವ್ಯಾಪಾರಿ

***

ಕಳೆದ ವಾರ ತರಕಾರಿ ದರ ಇಳಿಕೆಯಾಯಿತು ಎನ್ನುಷ್ಟರಲ್ಲೇ ಮತ್ತೆ ಹೆಚ್ಚಳವಾಗಿದೆ. ಈಗ ಮದುವೆ ಸಿಸನ್‌ ಆರಂಭವಾಗುತ್ತಿದೆ
ಆನಂದ ಹೊಸೂರ್, ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT