ಯಾದಗಿರಿ: ಗಿಡ, ಮುಳ್ಳಿನ ಕಂಟಿಗಳಿಂದ ತುಂಬಿರುವ ಕೆರೆಯ ಏರಿ, ಅಲ್ಲಲ್ಲಿ ಕಿತ್ತೋಗಿರುವ ಕಾಲುವೆಗಳು, ಏರಿಯಲ್ಲಿ ಬಿದ್ದ ಕಂದಕಗಳು, ತಿಂಗಳುಗಳ ಹಿಂದೆಯೇ ತುಕ್ಕು ಹಿಡಿದು ಮುರಿದು ಬಿದ್ದ ಕೆರೆಯ ಗೇಟ್....

ತಾಲ್ಲೂಕಿನ ಯರಗೋಳ ಗ್ರಾಮದ ಸಾವಿರಾರು ರೈತರ ಭತ್ತದ ಬೇಸಾಯಕ್ಕೆ ಆಸರೆಯಾಗಿರುವ ದೊಡ್ಡಕೆರೆಯ ದುಃಸ್ಥಿತಿ ಇದು. ಸಾವಿರಾರು ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವ ಕೆರೆಯ ಕಾಲುವೆಯ ಕಬ್ಬಿಣದ ಗೇಟ್ (ಸ್ಲೂಯಿಸ್ ಗೇಟ್) ಮುರಿದು ಬಿದ್ದು 6 ತಿಂಗಳು ಕಳೆದಿವೆ. ಗೇಟ್ ದುರಸ್ತಿ ಮಾಡಿ ರೈತರಿಗೆ ನೆರವಾಗುವಂತಹ ಸಣ್ಣ ಕಾರ್ಯಕ್ಕೂ ಕೆರೆಯ ನಿರ್ವಹಣೆಯ ಹೊಣೆ ಹೊತ್ತಿರುವ ಸಣ್ಣ ನೀರಾವರಿ ಇಲಾಖೆ ಮುಂದಾಗಿಲ್ಲ.

‘ಯರಗೋಳ ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆಗೆ ಎರಡು ಗೇಟ್ಗಳಿವೆ. ಬಲಬದಿಯ ದೊಡ್ಡ ಗೇಟ್ ಹಾಳಾಗಿದ್ದು, ದುರಸ್ತಿ ಮಾಡುವಂತೆ ರೈತರು ಜನಪ್ರತಿನಿಧಿಗಳು, ಎಂಜಿನಿಯರ್ ಕಚೇರಿಗೆ ಅಲೆದರೂ ಪ್ರಯೋಜನವಾಗಲಿಲ್ಲ. ನಾಟಿ ಮಾಡಿದ್ದ ಭತ್ತವನ್ನು ಉಳಿಸಿಕೊಳ್ಳಲು ಬೆಳೆಗಾರರೇ ತಮ್ಮ ಶಕ್ತ್ಯಾನುಸಾರ ₹ 1,000, ₹ 2,000 ಹಣ ಜಮೆ ಮಾಡಿ ನೀರಿನ ಮೋಟಾರ್ ಪಂಪ್ ತಂದರು. ಸಾವಿರಾರು ಎಕರೆ ಭೂಮಿಗೆ ನೀರುಣಿಸಲು ಆಗದೆ ತಂದಿದ್ದ ಮೋಟಾರ್ ಒಂದು ವಾರದಲ್ಲಿ ಕೆಟ್ಟು ಹೋಯಿತು’ ಎನ್ನುತ್ತಾರೆ ಕೆರೆಯ ನೀರಗಂಟಿ ಬಾಷಾ ಖಾದ್ರಿ ಇನಾಂದಾರ್.

‘ಭತ್ತದ ತೆನೆಯು ಹಾಲು ಕಟ್ಟುವ ಹಂತಕ್ಕೆ ಬಂದಿತ್ತು. ಆಗ, ದುಡ್ಡು ಹಾಕಿ ತಂದಿದ್ದ ಮೋಟಾರ್ ಸುಟ್ಟು ಹೋಯಿತು. ಅಧಿಕಾರಿಗಳು ಕೈಚೆಲ್ಲಿದ್ದರು. ಸ್ಥಳೀಯ ಮುಖಂಡರು ಪೈಪ್ಗಳನ್ನು ಕೊಡಿಸಿದರು. ಕೆರೆ ಏರಿಯ ಮೇಲೆ ಐದಾರು ಪೈಪ್ಗಳನ್ನು ಅಳವಡಿಸಿ, ಅದರಲ್ಲಿ ನೀರು ತುಂಬಿ ಗಾಳಿಯನ್ನು ಹೊರಹಾಕಿ ಕೆರೆಯಿಂದ ನೀರು ಪಡೆಯುವ ಹರಸಾಹಸ ತಿಂಗಳಾನುಗಟ್ಟಲೆ ಮಾಡಿದ್ದೇವೆ’ ಎಂದರು.

ಇಳುವರಿ ಕುಸಿತ: ‘ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ಗದ್ದೆಗಳಿಗೆ ಕಾಲುವೆಯ ನೀರು ತಲುಪಲು 48 ಗಂಟೆಗಳು ಬೇಕಾಗುತ್ತದೆ. ಪೈಪ್ಗಳು ಬಳಸಿದ್ದರಿಂದ ಕಾಲುವೆ ತುಂಬ ನೀರು ಹರಿಯಲಿಲ್ಲ. ಬೆಳೆಗಳಿಗೆ ಬೇಕಾಗುವಷ್ಟು ನೀರು ಸಹ ಸಿಗದೆ ಇಳುವರಿಯಲ್ಲಿ ಕುಸಿತವಾಗಿದೆ. ಎಕರೆಗೆ 50 ಚೀಲ ಬೆಳೆಯುವವರು ಈ ವರ್ಷ ಎಕರೆಗೆ ಕೇವಲ 25 ಚೀಲಗಳನ್ನು ಬೆಳೆದಿದ್ದಾರೆ’ ಎನ್ನುತ್ತಾರೆ ರೈತ ಸಾಹೇಬಗೌಡ ಗಾಂಪಲ್ಲಿ.

‘ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಕೆರೆ ಭರ್ತಿಯಾಗಿತ್ತು. ಆದರೆ, ಪೂರ್ಣಪ್ರಮಾಣದಲ್ಲಿ ನೀರು ಬಳಕೆಯಾಗದೆ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದೆ. ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾದರೆ ಬೇಗನೆ ಭರ್ತಿಯಾಗುವ ಸಾಧ್ಯತೆ ಇದೆ. ಕೆರೆಯಲ್ಲಿ ಎರಡ್ಮೂರು ಅಡಿಗಳು ನೀರು ಬಂದರೆ ಗೇಟ್ ದುರಸ್ತಿ ಮಾಡಲು ಆಗುವುದಿಲ್ಲ. ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ಗಳು ಮಳೆಗಾಲಕ್ಕೂ ಮುನ್ನವೇ ದುರಸ್ತಿ ಮಾಡದಿದ್ದರೆ ಈ ವರ್ಷವೂ ಪೈಪ್ಗಳ ಮೊರೆ ಹೋಗಬೇಕಾಗುತ್ತದೆ. ಮತ್ತೆ ಇಳುವರಿ ಕುಸಿತ, ಹಗಲು– ರಾತ್ರಿ ಎನ್ನದೆ ಪೈಪ್ಗಳಿಂದ ನೀರುಣಿಸುವ ಕಾರ್ಯದಲ್ಲಿ ಕಳೆಯಬೇಕಾಗುತ್ತದೆ’ ಎಂದು ಬೇಸರದಿಂದ ಹೇಳಿದರು.

ಕಾಲುವೆಯ ಗೇಟ್ನ ಕೆರೆಯ ಒಳಬದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಳು ತುಂಬಿಕೊಂಡಿದೆ. ಈಗ ಕೆರೆಯ ನೀರು ಕಡಿಮೆ ಇದ್ದು, ಮಳೆಗಾಲ ಆರಂಭವಾಗುವ ಮುನ್ನವೇ ಮರಳು ತೆಗೆದು ಗೇಟ್ ದುರಸ್ತಿ ಮಾಡಬೇಕಿದೆ
ಜಗದೇವಪ್ಪ, ಯರಗೋಳ ನಿವಾಸಿ

‘ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಕೆ’

‘ಯರಗೋಳದ ದೊಡ್ಡಕೆರೆಯ ಸುತ್ತಲೂ ಸಾಕಷ್ಟು ಕಾಮಗಾರಿಗಳು ಕೈಗೊಳ್ಳಬೇಕಿದೆ. ಅದಕ್ಕಾಗಿ ₹ 22.80 ಲಕ್ಷ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ’ ಎಂದು ಸಣ್ಣ ನೀರಾವರಿ ಇಲಾಖೆಯ ಎಇಇ ಮಹಾಂತಪ್ಪ ಮಹಾಗಾಂವ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಸ್ತುತ ಅನುದಾನ ಬಂದಿಲ್ಲ. ಅನುದಾನ ಬಂದ ಬಳಿಕ ಕೆರೆಯ ಏರಿಯನ್ನು ಇನ್ನಷ್ಟು ಸದೃಢ ಮಾಡಿ, ಮುರಿದು ಬಿದ್ದ ಕಾಲುವೆಯ ಗೇಟ್ ದುರಸ್ತಿ, ಏರಿಯ ಮೇಲೆ ಬೆಳೆದ ಗಿಡಗಂಟಿಗಳ ತೆರವು, ಕೆರೆ ಕೋಡಿಯನ್ನು ಸರಿಪಡಿಸುವ ಕಾರ್ಯ ಮಾಡಲಾಗುವುದು. ಈಗ ನೀರು ಕಡಿಮೆ ಇದ್ದು, ಅನುದಾನ ಬಾರದೆ ಇದ್ದರೂ ಆದಷ್ಟು ಬೇಗ ಕಾಲುವೆಯ ಗೇಟ್ ದುರಸ್ತಿಯನ್ನು ಕೈಗೆತ್ತಿಕೊಳ್ಳುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.