ಯಾದಗಿರಿ: ಜಿಲ್ಲೆಯ ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2014ರಲ್ಲಿ ನಡೆದ ಪ್ರಕರಣವೊಂದರಲ್ಲಿ 11 ಜನ ಅಪರಾಧಿಗಳಿಗೆ ಯಾದಗಿರಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಈರಣ್ಣ ಅವರು ಮೂರು ವರ್ಷ ಜೈಲು ಶಿಕ್ಷೆ ಮತ್ತು ₹77 ಸಾವಿರ ದಂಡ ವಿಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಜಿಲ್ಲೆಯ ನೀಲಹಳ್ಳಿ ಗ್ರಾಮದ ಹನುಮ ಮಂದಿರದ ಎದುರಿನ ಸ್ಥಳದಲ್ಲಿ ಶರಣಯ್ಯ ತ್ರಿಪೂರಾಂತಯ್ಯ ಸ್ವಾಮಿ ಅವರು ತಮ್ಮ ಪುತ್ರನಿಗೆ ಹೋಟೆಲ್ ನಿರ್ಮಿಸಿಕೊಟ್ಟಿದ್ದರು ಮತ್ತು ಅವರ ಸಹೋದರ ಬನ್ನಯ್ಯ ಸ್ವಾಮಿ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಆದರೆ, ಈ ಸ್ಥಳ ಹನುಮಾನ ಮಂದಿರದ್ದಾಗಿದ್ದು, ಕೂಡಲೇ ಖಾಲಿ ಮಾಡುವಂತೆ ಈ ಅಪರಾಧಿಗಳು ತಕರಾರು ಮಾಡುತ್ತಿದ್ದರು.

2014ರ ಮಾರ್ಚ್ 18ರಂದು ರಾತ್ರಿ ಶಂಕ್ರೆಪ್ಪಗೌಡ ಪೊಲೀಸ್ ಪಾಟೀಲ, ಶಾಂತುರೆಡ್ಡಿ ಪೊಲೀಸ್ ಪಾಟೀಲ, ಬಸನಗೌಡ ಗಿರಿಯಪ್ಪನೋರ, ಚೆನ್ನರೆಡ್ಡಿ ಮುನಗಲೋರ, ರೆಡ್ಡೆಪ್ಪ ಶೇಕಸಿಂದಿ, ಬನ್ನಪ್ಪ ಶೇಕಸಿಂದಿ, ಹಣಮಂತ ಬಾಗಲಿ, ಹುಸೇನಪ್ಪ ಬಾಗಲಿ, ಮಲ್ಲಪ್ಪ ಉಪ್ಪಾರ, ಮಾರಾಯ ಉಪ್ಪಾರ, ಭೀಮಣ್ಣ ಹೂಗಾರ ಅವರು ಹೋಟೆಲ್ ಮತ್ತು ಕಿರಾಣಿ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಕುರಿತು ಸೈದಾಪುರ ಠಾಣೆಯಲ್ಲಿ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಾಗಿತ್ತು. ಅದರಂತೆ ಹನ್ನೊಂದು ಜನರ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ.

ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.