ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ಕಾಮಗಾರಿ ಪರಿಶೀಲಿಸಿದ ಶಾಸಕ ಶರಣಬಸಪ್ಪ ದರ್ಶನಾಪುರ

ಹೊತಪೇಟ: ₹1.50 ಕೋಟಿ ವೆಚ್ಚದಲ್ಲಿ ಅಣೆಕಟ್ಟು ಕಾಮಗಾರಿ
Last Updated 24 ಜೂನ್ 2022, 3:07 IST
ಅಕ್ಷರ ಗಾತ್ರ

ಶಹಾಪುರ: ತಾಲ್ಲೂಕಿನ ಹೊತಪೇಟ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ₹1.50 ಕೋಟಿ ಅನುದಾನದಲ್ಲಿ ನಿರ್ಮಾಣದ ಕೊನೆ ಹಂತದಲ್ಲಿರುವ ಅಣೆಕಟ್ಟು, ₹3.50 ಕೋಟಿ ವೆಚ್ಚದ ಜಲ ಜೀವನ ಮಿಷನ್ ಯೋಜನೆ, ₹17ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಕೈಲಾಸ ಆಶ್ರಮ ಕಲ್ಯಾಣ ಮಂಟಪ ಕಾಮಗಾರಿಯನ್ನು ಶಾಸಕ ಶರಣಬಸಪ್ಪ ದರ್ಶನಾಪುರ ಗುರುವಾರ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಗುಣಮಟ್ಟದ ಕಾಮಗಾರಿಗಳಿಂದ ಗ್ರಾಮಾಭಿವೃದ್ದಿಗೆ ನೆರವಾಗಲಿದೆ. ಅಲ್ಲದೆ ಗ್ರಾಮದಲ್ಲಿ ಇನ್ನೂ ₹40ಲಕ್ಷ ವೆಚ್ಚದಲ್ಲಿ ಸಿ.ಸಿ ರಸ್ತೆ ಕಾಮಗಾರಿ ನಿರ್ವಹಿಸಲಾಗುವುದು. ಇದರಿಂದ ಜನರ ಮೂಲ ಸೌಲಭ್ಯಗಳಿಗೆ ಮುಕ್ತಿ ದೊರಕಿದಂತೆ ಆಗುತ್ತದೆ ಎಂದರು.

ಸಣ್ಣನೀರಾವರಿ ಇಲಾಖೆಯ ಆಶ್ರಯದಲ್ಲಿ ಹಳ್ಳಕ್ಕೆ ಅಣೆಕಟ್ಟು ನಿರ್ಮಿಸುವ ಕಾರ್ಯ ಕೊನೆ ಹಂತಕ್ಕೆ ಬಂದಿದೆ. ಸಂಗ್ರಹವಾದ ನೀರನ್ನು ಕೃಷಿಗೆ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಅಂತರ್ಜಲ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ. ಕೈಲಾಸ ಆಶ್ರಮದಲ್ಲಿ ಕಲ್ಯಾಣಮಂಟಪ ನಿರ್ಮಾಣದಿಂದ ಭಕ್ತರಿಗೆ ಉಪಯೋಗವಾಗಲಿದೆ. ಜಲ ಜೀವನ ಯೋಜನೆಯ ಅನುಷ್ಠಾನದಿಂದ ಪ್ರತಿಯೊಂದು ಮನೆ ಮನೆಗೆ ಕುಡಿಯುವ ನೀರಿನ ಸೌಲಭ್ಯ ದೊರಕಲಿದೆ. ಗ್ರಾಮದ ಅಭಿವೃದ್ದಿಯಲ್ಲಿ ಆಯಾ ಗ್ರಾಮಸ್ಥರ ಸಹಕಾರ ಪಾತ್ರ ಮುಖ್ಯವಾಗಿದೆ ಎಂದರು.

ಗ್ರಾಮದ ಸರ್ಕಾರಿ ಪ್ರೌಢಶಾಲೆಗೂ ಭೇಟಿ ನೀಡಿ ಅಗತ್ಯ ಸೌಲಭ್ಯಗಳನ್ನು ನೀಡಲಾಗುವುದು ಎಂದು ಶಾಲಾ ಸಿಬ್ಬಂದಿಗೆ ಭರವಸೆ ನೀಡಿದರು.

ಕೈಲಾಸ ಆಶ್ರಮದ ಶಿವಲಿಂಗ ಶರಣರು, ಮರಿಗೌಡ ಪಾಟೀಲ್ ಹುಲಕಲ್, ಶಿವಮಹಾಂತ ಚಂದಾಪುರ, ಚಂದ್ರಶೇಖರಗೌಡ ಲಿಂಗದಳ್ಳಿ, ಕಾಶಿಲಿಂಗ, ಪ್ರಭುಲಿಂಗ ರಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT