ಯಾದಗಿರಿ: ಜಿಲ್ಲೆಯಲ್ಲಿ ಬೇಸಿಗೆಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿ ನದಿಯಲ್ಲಿ ಪ್ರವಾಹ ಬಂದಿದ್ದರೂ ನೀರಿನ ಬವಣೆ ತಪ್ಪುತ್ತಿಲ್ಲ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗವು ಮುಂದಿನ ಮೂರು ತಿಂಗಳಲ್ಲಿ ಕುಡಿಯುವ ನೀರು ಎದುರಿಸುವ ಸಂಭವನೀಯ ಗ್ರಾಮಗಳ ಪಟ್ಟಿ ಮಾಡಿದೆ. ಇದೇ ಮಾರ್ಚ್ ತಿಂಗಳಲ್ಲಿ 16, ಏಪ್ರಿಲ್ನಲ್ಲಿ 25 ಹಾಗೂ ಮೇ ತಿಂಗಳಲ್ಲಿ 24 ಗ್ರಾಮಗಳಲ್ಲಿ ಸಂಭವನೀಯ ಜಲದಾಹ ಎದುರಾಗಬಹುದು ಎಂದು ಅಂದಾಜಿಸಿದೆ.

ಕೃಷ್ಣಾ ಮತ್ತು ಭೀಮಾ ನದಿ ತೀರಗಳನ್ನು ಹೊಂದಿರುವ ಶಹಾಪುರ ಹಾಗೂ ವಡಗೇರಾ ತಾಲ್ಲೂಕಿನಲ್ಲಿ ತಲಾ 8 ಗ್ರಾಮಗಳಿವೆ. ಯಾದಗಿರಿ ತಾಲ್ಲೂಕಿನಲ್ಲಿ 9, ಗುರುಮಠಕಲ್ ತಾಲ್ಲೂಕಿನಲ್ಲಿ 14, ಸುರಪುರ ತಾಲ್ಲೂಕಿನಲ್ಲಿ 10 ಹಾಗೂ ಹುಣಸಗಿ ತಾಲ್ಲೂಕಿನ 16 ಗ್ರಾಮಗಳಲ್ಲಿ ನೀರಿನ ತತ್ವಾರ ಎದುರಾಗಲಿದೆ ಎಂದು ಅಂದಾಜಿಸಲಾಗಿದೆ. ನೀರಿನ ಲಭ್ಯತೆ, ಅಕಾಲಿಕ ಮಳೆ, ಕೊಳವೆ ಬಾವಿಗಳ ಹಾನಿ, ಕೆರೆ–ಕಟ್ಟೆಗಳಲ್ಲಿ ನೀರಿನ ಕೊರತೆಯಾದರೆ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿಯಲ್ಲಿ ಏರುಪೇರಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನದಿ ನೀರಿನ ಮೂಲಗಳು ಬತ್ತಿ ಹೋಗುವುದರಿಂದ ವಡಗೇರಾ, ಕಂದಳ್ಳಿ, ಹಯ್ಯಾಳ (ಬಿ), ಯಕ್ಷಿಂತಿ ಗ್ರಾಮಗಳಲ್ಲಿ ನೀರಿನ ಅಭಾದ ಸೃಷ್ಟಿಯಾಗಬಹುದು. ಬೇಸಿಗೆಯಲ್ಲಿ ಕಾಲುವೆ ನೀರು ಬತ್ತುವುದರಿಂದ ಅರಳಹಳಿ ಸೇರಿ ಇತರೆಡೆ ಕೊರತೆಯಾಗಲಿದೆ. ಬತ್ತಿದ ಕೊಳವೆ ಬಾವಿ, ತೆರೆದ ಬಾವಿ, ಕೆರೆ ಕಟ್ಟೆಗಳು, ಕೊಳಚೆ ಸೇರ್ಪಡೆಯಂತಹ ಸೇರಿ ಇತರೆ ಕಾರಣಗಳಿಂದ ಹಲವು ಹಳ್ಳಿಗಳಲ್ಲಿ ನೀರಿನ ಕೊರತೆ ಬಾಧಿಸಲಿದೆ.

ಹುಣಸಗಿಯಲ್ಲೇ ಅತ್ಯಧಿಕ: ಹುಣಸಗಿ ತಾಲ್ಲೂಕಿನಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಿಲ್ಲೆಯಲ್ಲೇ ಅತ್ಯಧಿಕ 16 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡುಬರಬಹುದು. ಬಪ್ಪರಗಾ, ಉಪ್ಪಲದಿನ್ನಿ, ಆರ್.ಕೆ. ನಗರ, ಸಣ್ಣ ಚಾಪಿ ತಾಂಡಾ, ರಾಯನಗೋಳ, ಹೊಂಬಳಕಲ್, ಗುಂಡಲಗೇರಾ, ಮಾರಲಬಾವಿ, ಶ್ರೀನಿವಾಸಪುರ, ಕಮಲಪುರ, ಅಮಲಿಹಾಳ, ಕರಿಭಾವಿ, ಗೆದ್ದಲಮರಿ ತಾಂಡಾ, ಜಮಾಲಪುರ, ರಾಜನಕೊಳ್ಳೂರ ಮತ್ತು ರಾಜನಕೊಳ್ಳೂರ ತಾಂಡಾಗಳು ಸಮಸ್ಯಾತ್ಮಕ ಪಟ್ಟಿಯಲ್ಲಿವೆ.

ಯಾದಗಿರಿ ತಾಲ್ಲೂಕಿನ ಚಿಂತಕುಂಟಾ, ವಾರಿ ತಾಂಡಾ, ಆರ್.ಹೊಸಳ್ಳಿ ದೊಡ್ಡ ತಾಂಡಾ, ಗೊಂದಡಗಿ, ಬೆಳಗೇರಾ, ಗೌಡಗೇರಾ, ಬಾಲಾಜಿ ನಗರ, ಪಗಲಾಪುರ ಮತ್ತು ಬಂದಳಿಯಲ್ಲಿ ನೀರಿನ ಸಮಸ್ಯೆಯಾಗಬಹುದು. ವಡಗೇರಾ ತಾಲ್ಲೂಕಿನ ಗೋನಾಳ, ಶಿವನೂರು, ಬೋಳಾರಿ ಸೇರಿ 8 ಗ್ರಾಮಗಳಿವೆ.

ಗುರುಮಠಕಲ್ ತಾಲ್ಲೂಕಿನಲ್ಲಿ ಬುರ್ಜ ತಾಂಡಾ, ಕಾಳಬೆಳಗುಂದಿ, ಮಾದ್ವಾರ, ವಂಕಸಂಬರ, ಗುಡ್ಲಗುಂಟಾ, ಧರಮಪುರ ತಾಂಡಾ, ಬದ್ದೇಪಲ್ಲಿ ತಾಂಡಾ, ತುರಕನದೊಡ್ಡಿ, ಜೆ.ಬಿ. ತಾಂಡಾ, ಆಶಾಪುರ ತಾಂಡಾ, ನಂದೇಪಲ್ಲಿ, ಕಾಕಲವಾರ, ಚಂಡ್ರಿಕಿ ಮತ್ತು ಚಪೆಟ್ಲಾದಲ್ಲಿ ನೀರಿನ ಅಭಾವ ತಲೆದೂರಬಹುದು.

ಶಹಾಪುರ ಸುರಪುರದಲ್ಲಿ 18 ಗ್ರಾಮಗಳು

ಕೃಷ್ಣ ಭಾಗ್ಯ ಜಲ ನಿಗಮದ (ಕೆಬಿಜೆಎನ್ಎಲ್) ಕಾಲುವೆಯ ಜಾಲಗಳನ್ನು ಹೊಂದಿರುವ ಶಹಾಪುರ ಹಾಗೂ ಸುರಪುರ ತಾಲ್ಲೂಕುಗಳಲ್ಲಿನ 18 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆಗೆ ತುತ್ತಾಗುವ ಪಟ್ಟಿಯಲ್ಲಿವೆ. ಶಹಾಪುರ ತಾಲ್ಲೂಕಿನಲ್ಲಿನ ಅರಳಹಳ್ಳಿ ಬಾಪೂಗೌಡ ನಗರ ಸಗರ (ಎಸ್ಸಿ ವಾರ್ಡ್) ತಿಪ್ಪನಳ್ಳಿ ಸಾವೂರು ಹೋತಪೇಠ ತಾಂಡಾ ಪರಸಾಪುರ ಹಾಗೂ ಕೊಳ್ಳೂರು (ಎಂ) ಗ್ರಾಮಗಳಿವೆ. ಸುರಪುರ ತಾಲ್ಲೂಕಿನ ಯಕ್ತಾಪುರ ತಳ್ಳಳ್ಳಿ (ಬಿ) ತಳ್ಳಳ್ಳಿ (ಬಿ) ಆಶ್ರಯ ಕಾಲೊನಿ ಹೂವಿನಹಳ್ಳಿ ಆಲ್ದಾಳ ಐನಾಪುರ ದೇವಿಕೇರಾ ವಾಗಣಗೇರಾ ನಾಗರಾಳ ಹಾಗೂ ಗುಡಿಹಾಳ (ಟಿ) ಗ್ರಾಮಗಳಲ್ಲಿ ನೀರಿನ ಅಭಾವ ಕಂಡುಬರಬಹುದು.

‘ಪರ್ಯಾಯ ವ್ಯವಸ್ಥೆ’

‘ಸಂಭವನೀಯ ಕುಡಿಯುವ ನೀರಿನ ಅಭಾವ ಕಂಡುಬರುವ ಗ್ರಾಮಗಳಲ್ಲಿ ಪರ್ಯಾಯ ಮಾರ್ಗದ ಮೂಲಕ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಖಾಸಗಿಯಾಗಿ ಕೊಳವೆ ಬಾವಿಗಳನ್ನು ತೆಗೆದುಕೊಂಡು ಸರಬರಾಜು ಮಾಡಲಾಗುವುದು’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಪ್ರಭಾರ ಇಇ ಬಸವರಾಜ ಐರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.