ಶಹಾಪುರ: ರಾಜ್ಯ ವಕೀಲರ ಪರಿಷತ್ -2026. ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬುಧವಾರ ಮತದಾನ ನಡೆಯಿತು. ಯಾದಗಿರಿ ಜಿಲ್ಲೆಯಲ್ಲಿ ಶೇ.88ರಷ್ಟು ಮತದಾನವಾಗಿದೆ.

‘ಶಹಾಪುರ ತಾಲ್ಲೂಕಿನಲ್ಲಿ 147ರಲ್ಲಿ130, ಸುರಪುರ ತಾಲ್ಲೂಕಿನಲ್ಲಿ 170 ರಲ್ಲಿ 159, ಯಾದಗಿರಿ ನಗರದಲ್ಲಿ 264 ರಲ್ಲಿ 222 ಸದಸ್ಯ ಮತದಾರರು ಹಕ್ಕು ಮಂಡಿಸಿದ್ದಾರೆ’ ಎಂದು ಆಯಾ ವಕೀಲರ ಸಂಘದ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಆಯಾ ತಾಲ್ಲೂಕು ವಕೀಲರ ಸಂಘದ ಕಾರ್ಯಾಲಯದಲ್ಲಿ ಮತಗಟ್ಟೆ ಸ್ಥಾಪಿಸಿದ್ದರು. ಬೆಳಿಗ್ಗೆ 9ರಿಂದ ಸಂಜೆ 6ಗಂಟೆಯವರೆಗೆ ಮತದಾನ ನಡೆಯಿತು. ಮತದಾನದ ಬಗ್ಗೆ ಸಂಪೂರ್ಣವಾಗಿ ವಿಡಿಯೋ ಚಿತ್ರಿಕರಣ ಮಾಡಿದರು. ಯಾವುದೆ ಅಹಿತಕರ ಘಟನೆ ನಡೆಯದೆ ಶಾಂತಿಯುತವಾಗಿ ಸದಸ್ಯ ವಕೀಲರು ಮತಚಲಾಯಿಸಿದರು.

‘ಒಟ್ಟು 149 ಅಭ್ಯರ್ಥಿಗಳು ಸ್ಫರ್ಧಾ ಕಣದಲ್ಲಿ ಇರುವುದರಿಂದ ಬ್ಯಾಲೇಟ್ ಪೇಪರ್ ದೊಡ್ಡದಾಗಿತ್ತು. ಪ್ರಾಶಸ್ತ್ಯ ಮತ ಹಾಕುವ ಅವಕಾಶ ಇರುವುದರಿಂದ ಅಭ್ಯರ್ಥಿಯ ಹೆಸರಿನ ಮುಂದೆ ಅವರ ಭಾವಚಿತ್ರವಿತ್ತು ಅದರ ಮುಂದುಗಡೆ ಇಂಗ್ಲಿಷ್ ಕ್ಯಾಪಿಟಲ್ ಅಕ್ಷರದಲ್ಲಿ ಒನ್, ಟು ಎಂದು ನಮೂದಿಸಬೇಕಾಗಿದ್ದರಿಂದ ಹರಸಾಹಸ ಪಡುವಂತೆ ಆಯಿತು’ ಎನ್ನುತ್ತಾರೆ ಶಹಾಪುರ ವಕೀಲರ ಸಂಘದ ಅಧ್ಯಕ್ಷ ಯೂಸೂಫ್ ಸಿದ್ದಿಕಿ.

‘ಸೀಲ್ ಮಾಡಿದ ಮತದಾನದ ಬಾಕ್ಸ್ನ್ನು ಅಂಚೆ ಮೂಲಕ ಬೆಂಗಳೂರಿಗೆ ರವಾನಿಸಲಾಯಿತು’ ಎಂದು ಚುನಾವಣೆ ಅಧಿಕಾರಿ ಒಬ್ಬರು ಮಾಹಿತಿ ನೀಡಿದರು.

‘ರಾಜ್ಯ ಪರಿಷತ್ ಚುನಾವಣೆಯು ಯಾವುದೇ ರಾಜಕೀಯ ಪಕ್ಷಕ್ಕಿಂತ ಕಡಿಮೆಯಾಗಿರಲಿಲ್ಲ. ಪ್ರಜಾತಂತ್ರದ ಹಬ್ಬದಂತೆ ಸದಸ್ಯ ಮತದಾರರು ಭಾಗವಹಿಸಿದ್ದರು. ಗೋಪ್ಯವಾಗಿ ಬಾಡೂಟ, ಪೋನ್ ಪೇ, ಜಾತಿ ಲಾಭಿ ಜೋರಾಗಿತ್ತು’ ಎನ್ನುತ್ತಾರೆ ಹಿರಿಯ ವಕೀಲ ಸದಸ್ಯ ಮತದಾರರು ಒಬ್ಬರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.