ಯಾದಗಿರಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು (ಪದವಿ ಪೂರ್ವ ಶಿಕ್ಷಣ) ಜಿಲ್ಲೆಯ ಎರಡು ಪ್ರೌಢಶಾಲೆಗಳನ್ನು ಪದವಿಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಿ ಶುಕ್ರವಾರ ಆದೇಶ ಹೊರಡಿಸಿದೆ.

2025-26ನೇ ಸಾಲಿನ ಬಜೆಟ್ನಲ್ಲಿ ರಾಜ್ಯದ 50 ಸರ್ಕಾರಿ ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲು ಘೋಷಣೆ ಮಾಡಿ ತೀರ್ಮಾನಿಸಿತ್ತು. ಉನ್ನತೀಕರಣಕ್ಕೆ ಒಳ್ಳಪಟ್ಟ 50 ಕಾಲೇಜುಗಳಲ್ಲಿ ಶಹಾಪುರ ಹಾಗೂ ಗುರುಮಠಕಲ್ ತಾಲ್ಲೂಕಿನಲ್ಲಿ ತಲಾ ಒಂದೊಂದು ಕಾಲೇಜು ಇದೆ.

ಶಹಾಪುರ ತಾಲ್ಲೂಕಿನ ದೇರನಹಳ್ಳಿಯ ಸರ್ಕಾರಿ ಪ್ರೌಢಶಾಲೆ ಹಾಗೂ ಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಪಿಯು ಕಾಲೇಜುಗಳಾಗಿ ಉನ್ನತೀಕರಣವಾಗಿದೆ. ಇವುಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಉನ್ನತೀಕರಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ದೋರನಹಳ್ಳಿ ಶಹಾಪುರ ತಾಲ್ಲೂಕಿನ ಅತಿ ದೊಡ್ಡ ಗ್ರಾಮವಾಗಿದೆ. ಈ ಗ್ರಾಮದ ಸರ್ಕಾರಿ ಪ್ರೌಢ ಸುಮಾರು 600 ಮಕ್ಕಳು ಕಲಿಯುತ್ತಿದ್ದಾರೆ. ಈ ಶಾಲೆಯನ್ನು ಪಿಯು ಕಾಲೇಜನ್ನಾಗಿ ಮಂಜೂರು ಮಾಡಬೇಕು ಎಂಬ ಹಲವು ವರ್ಷಗಳ ಬೇಡಿಕೆಗೆ ಈಗ ಸ್ಪಂದನೆ ಸಿಕ್ಕಿದೆ’ ನಿಜಗುಣ ದೋರನಹಳ್ಳಿ ಹೇಳಿದ್ದಾರೆ.

ನೂರಾರು ವಿದ್ಯಾರ್ಥಿಗಳಿಗೆ ಅನುಕೂಲ: ‘ದೋರನಹಳ್ಳಿಯಲ್ಲಿ ಪಿಯು ಕಾಲೇಜು ಮಾಡುವಂತೆ ಹಲವು ವರ್ಷಗಳಿಂದ ಮನವಿ ಮಾಡಿಕೊಂಡು ಬರಲಾಗುತ್ತಿತ್ತು. ನಮ್ಮ ಸರ್ಕಾರ ಸ್ಪಂದಿಸಿ, ನೂರಾರು ವಿದ್ಯಾರ್ಥಿಗಳಿಗೆ ತಮ್ಮ ಗ್ರಾಮಗಳ ಸಮೀಪದಲ್ಲೇ ಉನ್ನತ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಿದೆ. ಇದಕ್ಕಾಗಿ ಶಾಸಕರು ಬಹಳಷ್ಟು ಶ್ರಮಿಸಿದ್ದಾರೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ವಕ್ತಾರ ಶ್ಯಾಮಸನ್ ಮಾಳಿಕೇರಿ ಹೇಳಿದ್ದಾರೆ.

‘ದೋರನಹಳ್ಳಿ ಹಾಗೂ ಅದರ ಸುತ್ತಲಿನ ಟೋಕಾಪುರ, ಹುರಸಗುಂಡಗಿ, ತಡಬಿಡಿ, ಇಬ್ರಾಹಿಂಪುರ ಸೇರಿ ಇತರೆ ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ದೂರದ ಶಹಾಪುರ, ಯಾದಗಿರಿ ನಗರಕ್ಕೆ ಹೋಗಿ ಬರುವುದು ತಪ್ಪಲಿದೆ’ ಎಂದಿದ್ದಾರೆ.

ಪ್ರಸ್ತಕ ಸಾಲಿನಿಂದ ಕಾಲೇಜು ಆರಂಭ

ಯಾದಗಿರಿ: ‘ಯಾದಗಿರಿ ವಿಧಾನ ಸಭಾ ಮತಕ್ಷೇತ್ರ ವ್ಯಾಪ್ತಿಯ ದೋರನಹಳ್ಳಿ ಹಾಗೂ ವಡಗೇರಾ ಪಟ್ಟಣದಲ್ಲಿ ಪಿಯು ಕಾಲೇಜು ಆರಂಭ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆ. ಈಗ ದೋರನಹಳ್ಳಿಯಲ್ಲಿ ಮಂಜೂರಾಗಿದ್ದು ಪ್ರಸಕ್ತ ಸಾಲಿನಿಂದ ಕಾಲೇಜು ಆರಂಭವಾಗಲಿದೆ’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ತಿಳಿಸಿದ್ದಾರೆ. ‘ವಡಗೇರಾ ಪಟ್ಟಣದಲ್ಲಿಯೂ ಕಾಲೇಜು ಆರಂಭ ಮಾಡುವಂತೆ ಎಲ್ಲ ರೀತಿಯ ಪ್ರಯತ್ನಗಳು ಮಾಡಲಾಗುತ್ತಿದೆ.

ಕೆಲವೇ ದಿನಗಳಲ್ಲಿ ವಡಗೇರಾಕ್ಕೂ ಪಿಯು ಕಾಲೇಜು ಲಭ್ಯವಾಗಿಲಿದೆ. ಇದರಿಂದ ವಡಗೇರಾ ಹಾಗೂ ದೋರನಹಳ್ಳಿ ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ಅನುಕೂಲವಾಗಲಿದೆ’ ಎಂದರು. ‘ಸರ್ಕಾರಿ ಪಿಯು ಕಾಲೇಜಿನ ಅವಶ್ಯಕತೆ ಇರುವುದನ್ನು ಮನಗಂಡು ಸರ್ಕಾರದ ಗಮನಕ್ಕೆ ತಂದು ಮಂಜೂರು ಮಾಡಿಸಲಾಗಿದೆ. 2026-27ನೇ ಸಾಲಿನಿಂದ ಕಾಲೇಜು ಆರಂಭಗೊಳ್ಳಲಿದೆ. ಮನವಿಗೆ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸ್ಪಂದಿಸಿ ಮಂಜೂರು ಮಾಡಿಸಿಕೊಟ್ಟಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.