ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಂಚ ಕೇಳಿದರೆ ಎಸಿಬಿಗೆ ದೂರು ನೀಡಿ’

Last Updated 29 ಅಕ್ಟೋಬರ್ 2019, 12:21 IST
ಅಕ್ಷರ ಗಾತ್ರ

ಹುಣಸಗಿ: ‘ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳುವುದು ಕಂಡುಬಂದರೆ ತಕ್ಷಣ ಎಸಿಬಿಗೆ ದೂರು ನೀಡಿ’ ಎಂದು ಯಾದಗಿರಿ ಎಸಿಬಿ ಪಿಐ ಗುರುಪಾದಪ್ಪ ಬಿರಾದಾರ ತಿಳಿಸಿದರು.

ಹುಣಸಗಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಎಸಿಬಿ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾರ್ವಜನಿಕರ ಕೆಲಸಕ್ಕೆ ನೌಕರರು ಲಂಚಕ್ಕೆ ಬೇಡಿಕೆ ಇಡುವುದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಪ್ರಕಾರ ಅಪರಾಧವಾಗುತ್ತದೆ. ನೌಕರ ಆಸ್ತಿ ಮಾಡಿರುವುದು ಕಂಡುಬಂದಲ್ಲಿ ದೂರು ನೀಡಬಹುದು’ ಎಂದು ಹೇಳಿದರು.

ತಹಶೀಲ್ದಾರ್ ಸುರೇಶ ಚವಲರ್ ಮಾತನಾಡಿ,‘ಲಂಚ ಕೊಡುವುದು ಮತ್ತು ತೆಗೆದುಕೊಳ್ಳವುದು ಎರಡೂ ಅಪರಾಧ. ವಿದ್ಯಾವಂತರು ಈ ಕುರಿತು ಜಾಗೃತಿ ಮೂಡಿಸಬೇಕಿದೆ’ ಎಂದರು.

ಹಿರಿಯ ಉಪನೋಂದಣಾಧಿಕಾರಿ ಯಶ್ವಂತ ಶಿಂಧೆ, ಉಪ ಖಜಾನೆ ಅಧಿಕಾರಿ ಸಣಕೆಪ್ಪ ಕೊಂಡಿಕಾರ, ಎಎಸ್ಐ ಅಂಬಯ್ಯ ಹಾಗೂ ಜಿ.ಪಂ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT