ಯಾದಗಿರಿ: ‘ಬೇಸಿಗೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಅಗತ್ಯ ಕ್ರಮ ತೆಗೆದುಕೊಂಡು, ಮಾರ್ಚ್ 23ರ ಒಳಗಾಗಿ ಎರಡೂ ತಾಲೂಕುಗಳಲ್ಲಿ ಹೊಸ ಕೊಳವೆ ಬಾವಿ ಕೊರೆಯಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು’ ಎಂದು ಶಾಸಕ ಶರಣಗೌಡ ಕಂದಕೂರ ತಹಶೀಲ್ದಾರರಿಗೆ ಸೂಚಿಸಿದರು.

ನಗರದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಶುಕ್ರವಾರ ನಡೆದ ಗುರಮಠಕಲ್ ಮತ್ತು ಯಾದಗಿರಿ ತಾಲ್ಲೂಕುಗಳ ಕುಡಿಯುವ ನೀರಿನ ಟಾಸ್ಕ್ ಫೋರ್ಸ್ ಸಭೆಯಲ್ಲಿ ಅವರು ಮಾತನಾಡಿದರು.

‘ಕುಡಿಯುವ ನೀರಿನ ನಿರ್ವಹಣೆಗೆ ಸರ್ಕಾರದಿಂದ ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ. ಕಳೆದ ಸಾಲಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆಯ ₹ 1 ಕೋಟಿ ಬಿಲ್ ಬಾಕಿ ಇರುವ ಬಗ್ಗೆ ಸದನದಲ್ಲಿ ಸರ್ಕಾರ ಗಮನ ಸೆಳೆದಿದ್ದೇನೆ. ಹೀಗಾಗಿ, ಬಾಕಿ ಇರುವ ಅನುದಾನ ಬಿಡುಗಡೆ ಸೇರಿ, ಅಗತ್ಯ ಇರುವ ಅನುದಾನದ ಬಗ್ಗೆ ಪ್ರಸ್ತಾವನೆ ಸಲ್ಲಿಸಬೇಕು’ ಎಂದು ಆರ್ಡಿಪಿಆರ್ ಇಲಾಖೆಗೆ ತಾಕೀತು ಮಾಡಿದರು.

‘ಸರ್ಕಾರವು ಹಸಿ ಅಥವಾ ಒಣ ಬರಗಾಲ ಎಂದು ಘೋಷಣೆ ಮಾಡಿಲ್ಲ. ಟಾಸ್ಕ್ ಫೋರ್ಸ್ಗೂ ಅನುದಾನ ಬಿಡುಗಡೆ ಮಾಡಿಲ್ಲ. ಆರ್.ಒ. ಪ್ಲಾಂಟ್ ದುರಸ್ತಿ ಸೇರಿದಂತೆ ನಿರ್ವಹಣೆಗಾಗಿ ಗುರುಮಠಕಲ್ ಮತಕ್ಷೇತ್ರಕ್ಕಾಗಿ ₹ 35.50 ಲಕ್ಷ ಅನುದಾನ ಗ್ರಾಮೀಣ ನೀರು ಸರಬರಾಜು ವಿಭಾಗಕ್ಕೆ ಬಿಡುಗಡೆಯಾಗಿದೆ. 28 ಗ್ರಾಮಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ₹1.50 ಲಕ್ಷದೊಳಗೆ ದುರಸ್ತಿ ಮಾಡಬೇಕು’ ಎಂದರು.

‘ಅಕಾಲಿಕ ಮಳೆ ಮತ್ತು ಬಿರುಗಾಳಿಯಿಂದ ಹಾನಿಗೊಳಗಾದ ಜೋಳ, ಭತ್ತ ಹಾಗೂ ಕಲ್ಲಂಗಡಿ ಬೆಳೆಗಳ ನಷ್ಟದ ವರದಿ ಸಲ್ಲಿಸಬೇಕು. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಬಗ್ಗೆಯೂ ವರದಿ ನೀಡಬೇಕು. ಗುರಮಠಕಲ್ ಪಟ್ಟಣದ ಲಕ್ಷ್ಮಿ ನಗರ, ಗಡ್ಡಿ ಮೊಹಲ್ಲಾ ಹಾಗೂ ಮರಾಠಾ ವಾಡ ಕಾಲೊನಿಗಳಲ್ಲಿ ನೀರಿನ ಸಮಸ್ಯೆ ಆಗದಂತೆ ಕ್ರಮವಹಿಸಿ’ ಎಂದು ಹೇಳಿದರು.

‘ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಕಂಡುಬರಬಹುದಾದ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಯಂಪಾಡ, ಸುಭಾಷ ನಗರ, ಬುರ್ಜ್ ತಾಂಡಾ, ನಂದೆಪಲ್ಲಿ, ಮಾಧ್ವಾರ ಮತ್ತು ಸಣ್ಣ ಸಂಬರ ಗ್ರಾಮಗಳಲ್ಲಿ ಬಾಡಿಗೆ ಮೇಲೆ ಕೊಳವೆ ಬಾವಿಗಳು ಪಡೆದು ನೀರು ಸರಬರಾಜು ಮಾಡಬೇಕು’ ಎಂದು ಸೂಚಿಸಿದರು.

‘ತಾಲ್ಲೂಕು ಪಂಚಾಯಿತಿಗಳಿಗೆ ಸರ್ಕಾರದಿಂದ 15 ಹಣಕಾಸು ಯೋಜನೆಯಡಿ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ ಕುಡಿಯುವ ನೀರಿನ ಪೈಪ್ಲೈನ್, ವಿದ್ಯುತ್ ಸಂಪರ್ಕದಂತಹ ಸಮಸ್ಯೆಗಳಿದ್ದರೆ ₹ 50 ಸಾವಿರವರೆಗೆ ಪಂಚಾಯಿತಿ ವತಿಯಿಂದ ಖರ್ಚು ಮಾಡಬಹುದು. ಹೀಗಾಗಿ, ತಾ.ಪಂ. ಇಒಗಳು ಈ ಬಗ್ಗೆ ಗಮನಹರಿಸಬೇಕು’ ಎಂದರು.

ಸಭೆಯಲ್ಲಿ ಗುರಮಠಕಲ್ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಇಒಗಳಾದ ಅಮರೇಶ ಪಾಟೀಲ, ಮಹಾದೇವಪ್ಪ, ಜೆಸ್ಕಾಂ ಅಧಿಕಾರಿಗಳಾದ ಅಮರೇಶ ರಾಠೋಡ್, ಮಾರ್ಕಂಡೇಶ, ಕೃಷಿ ಇಲಾಖೆ ಅಧಿಕಾರಿ ಸುರೇಶ ಉಪಸ್ಥಿತರಿದ್ದರು.

ಜನರಿಂದ ಕುಡಿಯುವ ನೀರಿನ ಬಗ್ಗೆ ದೂರು ಬರದಂತೆ ಗಮನ ಹರಿಸಿ ವಿದ್ಯುತ್ ಪರಿವರ್ತಕಗಳು ಸುಟ್ಟರೆ ತಕ್ಷಣವೇ ಅವುಗಳನ್ನು ಬದಲಾಯಿಸಬೇಕು
ಶರಣಗೌಡ ಕಂದಕೂರ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.