ಯಾದಗಿರಿ: ಅಪಘಾತ ಪ್ರಕರಣವೊಂದರ ಬೈಕ್ ಬಿಟ್ಟುಕೊಡಲು ₹ 13 ಸಾವಿರ ಲಂಚ ಪಡೆದ ಆರೋಪದಡಿ ಯಾದಗಿರಿ ಸಂಚಾರ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೆಬಲ್ ಒಬ್ಬರನ್ನು ಲೋಕಾಯುಕ್ತ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.

ಹೆಡ್ಕಾನ್ಸ್ಟೆಬಲ್ ನಾಗೇಶ ಲಂಚ ಪಡೆದ ಆರೋಪಿ. ತಾಲ್ಲೂಕಿನ ಮುದ್ನಾಳ ದೊಡ್ಡ ತಾಂಡಾ ನಿವಾಸಿ ಅಣ್ಣಯ್ಯ ರಾಠೋಡ ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.

ಅಪಘಾತ ಪ್ರಕರಣದಲ್ಲಿ ಅಣ್ಣಯ್ಯ ಅವರ ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಪ್ರಕರಣ ಇತ್ಯರ್ಥವಾದರೂ ಮಾಲೀಕರಿಗೆ ಬೈಕ್ ಹಸ್ತಾಂತರ ಮಾಡಿರಲಿಲ್ಲ. ಬೈಕ್ ಕೊಡಲು ಆರೋಪಿಯು ₹ 13 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಪೊಲೀಸ್ ಠಾಣೆಯ ಕಚೇರಿಯಲ್ಲಿ ನಾಗೇಶ ₹ 13 ಸಾವಿರ ಲಂಚದ ಹಣವನ್ನು ಪಡೆದಿದ್ದರು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಲೋಕಾಯುಕ್ತ ಡಿವೈಎಸ್ಪಿ ಜೆ.ಎಚ್. ಇನಾಮದಾರ್, ಇನ್ಸ್ಪೆಕ್ಟರ್ ಸಿದ್ದರಾಯ ಬಳ್ಳೂರಗಿ ಅವರಿದ್ದ ತಂಡವು ದಾಳಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.