ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಹೊಟ್ಟಿ ಹನುಮಾನ ಮಂದಿರ ಉದ್ಘಾಟನೆ

Last Updated 30 ಆಗಸ್ಟ್ 2021, 5:58 IST
ಅಕ್ಷರ ಗಾತ್ರ

ಯರಗೋಳ (ಯಾದಗಿರಿ ಜಿಲ್ಲೆ): ಗ್ರಾಮದಲ್ಲಿ ವಾರ್ಡ್‌ ಸಂಖ್ಯೆ 4 ರ ಬಯಲು ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಲಾದ ಹೊಟ್ಟೆ ಹನುಮಾನ ಮಂದಿರವನ್ನು ಸೋಮವಾರ ಸರಳವಾಗಿ ಉದ್ಘಾಟನೆ ಮಾಡಲಾಯಿತು.

ವೀರಶೈವ ಸಮಾಜದ ಮಹಿಳೆಯರು ಕಳಸವನ್ನು ಹೊತ್ತು ಗ್ರಾಮದಲ್ಲಿ ಒಂದು ಸುತ್ತು ಹಾಕಿ ಗಂಗಸ್ನಾನ ನೆರವೇರಿಸಿದರು. ಯುವಕರು ಕೊರಳಿಗೆ ಕೇಸರಿ ಶಾಲು, ಕೈಯಲ್ಲಿ ಭಗವ ದ್ವಜ ಹಿಡಿದು ಅಂಜನೇಯ ಮಹಾರಾಜಕೀ ಜೈ ಎಂದು ಜೈಕಾರ ಕೂಗಿದರು.
ಮಂದಿರದ ಕಳಸ, ಘಂಟೆ ರೋಹಣ ಸಮಾರಂಭದ ಜರುಗಿತು.

ಶ್ರೀ ಗವಿಸಿದ್ದಲಿಂಗೇಶ್ವರ ಮಠದ ಶ್ರೀಗಳಾದ ಸಂಗಮೇಶ್ವರ ಸ್ವಾಮೀಜಿ ತಂಡದವರು ಮಂಗಳ ವಾದ್ಯಗಳ ಜೊತೆ ಹೋಮ, ಹವನ, ನವಗ್ರಾಹ ಪೂಜೆ ಕಾರ್ಯಗಳ ನೆರವೇರಿದರು. ಮಂದಿರಕ್ಕೆ ವಿದ್ಯುತ್ ದೀಪ, ಹೂ ಗಳಿಂದ ಶೃಂಗರಿಸಲಾಗಿತ್ತು.

ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.ಸಮಾರಂಭಕ್ಕೆ ಆಗಮಿಸಿದ ಭಕ್ತರಿಗೆ ಬೆಳಿಗ್ಗೆ ಉಪ್ಪಿಟು, ಮಧ್ಯಾಹ್ನಕ್ಕೆ ಹುಗ್ಗಿ, ಅನ್ನ, ಸಾಂಬರ್ ವ್ಯವಸ್ಥೆ ಮಾಡಲಾಗಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದಮ್ಮ, ಸದಸ್ಯರಾದ ಬಸಮ್ಮ, ಸೈದಮ್ಮ, ಹುಸೆನಪ್ಪ, ರಾಮಲಿಂಗಪ್ಪ ಅಲ್ಲಿಪುರ, ಖಾಶೀಂಬಿ ಇನಂದಾರ, ಶಿವಯೋಗಿ ಭೀಮನಳ್ಳಿ, ಶರಣಪ್ಪ ಮಾನೆಗಾರ, ಕರಣಪ್ಪ ಗೌಡ ಪೊಲೀಸ್ ಪಾಟೀಲ, ನಿಂಗಣ್ಣ ಗೌಡ ಪೊಲೀಸ್ ಪಾಟೀಲ, ಶರಣಗೌಡ ಮಾಲಿ ಪಾಟೀಲ, ನಾಗರಾಜ ಮಾಂತಗೌಡ, ವಿರುಪಾಕ್ಷಯ್ಯ ಸ್ವಾಮಿ, ನಿತ್ಯಾನಂದ ಸ್ವಾಮಿ, ದ್ವಯಪಾನ್ಯಾ ಚಾರ್ಯ, ಮಹಾದೇವ ಹೂಗಾರ, ಮಲ್ಲಿಕಾರ್ಜುನ ಹಡಪದ, ವಿಜಯಕುಮಾರ ದಿಬ್ಬ, ಸಿದ್ದಣ್ಣ ಮಾಕಲ್, ರಮೇಶ ಹುಬ್ಬಳಿ, ಭೀಮಶ ಗೋಡಿಕರ್, ಸಾಬು ಮಚ್ಚಿ, ನಾಗಯ್ಯ ಸ್ವಾಮಿ, ಸಿದ್ರಾಮಪ್ಪ ಟೇಲರ್, ವಿಜಯ ಕುಮಾರ ಚಟ್ನಳಿ, ಚಂದ್ರಯ್ಯ ಸ್ವಾಮಿ, ವಿಶ್ವನಾಥ ಕುನ್ನುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT