ನಾಳೆ ‘ಅತಿಕಾಯ ಮೋಕ್ಷ’ ಯಕ್ಷಗಾನ ಪ್ರದರ್ಶನ

7

ನಾಳೆ ‘ಅತಿಕಾಯ ಮೋಕ್ಷ’ ಯಕ್ಷಗಾನ ಪ್ರದರ್ಶನ

Published:
Updated:
Deccan Herald

ಶಿವಮೊಗ್ಗ: ಯಾಜಿ ಯಕ್ಷ ಮಂಡಳಿಯ 13ನೇ ವರ್ಷದ ಯಕ್ಷ ಯಾತ್ರೆಯ ಅಂಗವಾಗಿ ಕುವೆಂಪು ರಂಗಮಂದಿರದಲ್ಲಿ ಅ. 7ರ ಸಂಜೆ 5ಕ್ಕೆ ‘ಅತಿಕಾಯ ಮೋಕ್ಷ ಚಂದ್ರಾವಳಿ ವಿಲಾಸ’ ಪ್ರಸಂಗದ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಇದು 20 ವರ್ಷಗಳಿಂದ ಪ್ರದರ್ಶನ ಕಾಣದ ವಿಶೇಷ ಪ್ರಸಂಗ. ಅಜ್ಜ–ಮೊಮ್ಮಗನ ಮುಖಾಮುಖಿ, ತೋಟಿಯವರ ‘ರಾವಣ’ ಕಾರ್ತಿಕ ಚಿಟ್ಟಾಣಿಯವರ ‘ಕೃಷ್ಣ’ ನೀಲ್ಕೋಡರ ‘ಚಂದ್ರಾವಳಿ’ ಹಾಸ್ಯ ದಿಗ್ಗಜರಾದ ಹಳ್ಳಾಡಿ- ಕಾಸರಗೋಡರ ಜೋಡಿ ಈ ಯಕ್ಷಗಾನದ ವಿಶೇಷ ಎಂದು ವಿದ್ವಾನ್ ದತ್ತಮೂರ್ತಿ ಭಟ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರ, ಪ್ರಸನ್ನ ಭಟ್ಟ ಬಾಳ್ಕಲ್ ಭಾಗವಹಿಸಲಿದ್ದಾರೆ. ಪರಮೇಶ ಭಂಡಾರಿ ಮೃದಂಗ, ರಾಮ ಭಂಡಾರಿ ಅವರ ಚಂಡೆ ಇದೆ. ಮುಖ್ಯ ಕಲಾವಿದರಾಗಿ ದತ್ತ ಮೂರ್ತಿ ಭಟ್, ಜಯರಾಂ ಶೆಟ್ಟಿ ಹಳ್ಳಾಡಿ, ಬಳ್ಕೂರು ಕೃಷ್ಣಯಾಜಿ, ಗಣಪತಿ ಹೆಗಡೆ ತೋಟಿಮನೆ ಅಭಿನಯಿಸಲಿದ್ದಾರೆ ಎಂದು ವಿವರ ನೀಡಿದರು.

ಶಾಸಕ ಕೆ.ಎಸ್. ಈಶ್ವರಪ್ಪ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅ.ಪ. ರಾಮಭಟ್, ಶ್ರೀನಿವಾಸ್ ಕಾಮತ್, ಲಕ್ಷ್ಮೀನಾರಾಯಣ ಕಾಶಿ ಇರುತ್ತಾರೆ ಎಂದರು.

ಈ ಸಮಯದಲ್ಲಿ ಆದಿಕವಿ ಪಾರ್ತಸುಬ್ಬ ಪ್ರಶಸ್ತಿ ಪುರಸ್ಕೃತ ಶಾಂತಾರಾಮ ಪ್ರಭು ಅವರಿಗೆ ಗೌರವ ಸಮರ್ಪಣೆ ಇರುತ್ತದೆ. ಪ್ರವೇಶ ದರ ₨ 300 ಹಾಗೂ ₨ 200 ಇದೆ ಎಂದು ವಿವರ ನೀಡಿದರು.

ಮಂಡಳಿಯಿಂದ ಆಸಕ್ತ ಕಲಾವಿದರಿಗೆ ಆರ್ಥಿಕ ಸಹಾಯ ಹಾಗೂ ಯಾಜಿ ಯಕ್ಷ ಪ್ರಶಸ್ತಿ ನೀಡಿ ಪ್ರತಿವರ್ಷ ಗೌರವಿಸಲಾಗುತ್ತಿದೆ ಎಂದು ಮಂಡಳಿಯ ಸಂಸ್ಥಾಪಕ ಬಳ್ಕೂರು ಕೃಷ್ಣಯಾಜಿ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಅ.ಪ. ರಾಮಭಟ್, ಸೂರ್ಯನಾರಾಯಣ, ಶಬರೀಶ್ ಕಣ್ಣನ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !