ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಕೇಕ್‌ ಕತ್ತರಿಸಿ ಯಶ್ ಅಭಿಮಾನಿಗಳ ಸಂಭ್ರಮ

Last Updated 21 ಡಿಸೆಂಬರ್ 2018, 14:07 IST
ಅಕ್ಷರ ಗಾತ್ರ

ರಾಮನಗರ: ಯಶ್‌ ಅಭಿನಯದ ‘ಕೆಜಿಎಫ್’ ಚಿತ್ರವು ಇಲ್ಲಿನ ಶಾನ್ ಚಿತ್ರಮಂದಿರದಲ್ಲಿ ಶುಕ್ರವಾರ ತೆರೆ ಕಂಡಿದ್ದು, ಅವರ ಅಭಿಮಾನಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದರು.

ಬೆಳಿಗ್ಗೆ 6.45ಕ್ಕೆ ಮೊದಲ ಪ್ರದರ್ಶನ ಆರಂಭಗೊಂಡಿದ್ದು, ನೂರಾರು ಪ್ರೇಕ್ಷಕರು ನೆರೆದಿದ್ದರು. ಮೊದಲ ದಿನ ಒಟ್ಟು ಐದು ಪ್ರದರ್ಶನಗಳು ನಡೆದಿದ್ದು, ಎಲ್ಲವೂ ಹೌಸ್‌ಫುಲ್‌ ಆದವು. ಚಿತ್ರಮಂದಿರದ ಮುಂಭಾಗ ನೂರಾರು ಮಂದಿ ನೆರೆದಿದ್ದು, ಯಶ್‌ರ ಆಳೆತ್ತರದ ಕಟೌಟ್‌ಗಳನ್ನು ಹಾಕಿ ಶುಭ ಕೋರಿದರು.

ಅಖಿಲ ಕರ್ನಾಟಕ ರಾಕಿಂಗ್‌ ಸ್ಟಾರ್ ಯಶ್‌ ಅಭಿಮಾನಿಗಳ ಸಂಘದ ಸದಸ್ಯರು ಯಶ್‌ ಭಾವಚಿತ್ರವುಳ್ಳ ಟೀ–ಶರ್ಟ್ ಧರಿಸಿ, ಚಿತ್ರಮಂದಿರದ ಬಳಿ 35 ಕೆ.ಜಿ. ತೂಕದ ಕೇಕ್‌ ಕತ್ತರಿಸಿ ಸಾರ್ವಜನಿಕರಿಗೆ ಹಂಚಿದರು. ಟಮಟೆ ಬಡಿದು, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಂಗವಿಕಲರು, ಹಿರಿಯರ ಸಹಿತ ಹತ್ತಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಟಿಕೆಟ್ ಹಂಚಿ ಅಭಿಮಾನ ಮೆರೆದರು.

ಚಂದನ್‌, ನಾಗಾರ್ಜುನ್, ಆನಂದ್, ರವಿಕಿರಣ್, ಪ್ರವೀಣ್, ದಿನೇಶ್, ಬೆಟ್ಟೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT