ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಾರ ತೆರೆಗೆ

Last Updated 31 ಮೇ 2018, 19:30 IST
ಅಕ್ಷರ ಗಾತ್ರ

ವೆನಿಲ್ಲಾ
ಅಖಿಲ ಕಂಬೈನ್ಸ್ ಲಾಂಛನದಲ್ಲಿ ಜಯರಾಮು ನಿರ್ಮಿಸಿರುವ ‘ವೆನಿಲ್ಲಾ’ ಚಿತ್ರಕ್ಕೆ ಜಯತೀರ್ಥ ಆ್ಯಕ್ಷನ್ ಕಟ್‌ ಹೇಳಿದ್ದಾರೆ. ಉಡುಪಿ, ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಸಿರುವ ಈ ಚಿತ್ರದ ಹಾಡೊಂದನ್ನು ವಿದೇಶದಲ್ಲಿ ಚಿತ್ರೀಕರಿಸಲಾಗಿದೆ.

ಬಿ.ಜೆ. ಭರತ್ ಸಂಗೀತ ಸಂಯೋಜಿಸಿದ್ದಾರೆ. ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ವಿಕ್ರಂ ಸಾಹಸ ನಿರ್ದೇಶನ, ಮೋಹನ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಅವಿನಾಶ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಸ್ವಾತಿ ಕೊಂಡೆ. ರವಿಶಂಕರ್ ಗೌಡ, ಪಾವನಾ, ಬಿ. ಸುರೇಶ್, ರೆಹಮಾನ್, ಗಿರಿ, ನಂದ ತಾರಾಬಳಗದಲ್ಲಿದ್ದಾರೆ.

ಸೆಕೆಂಡ್‌ ಹಾಫ್‌
ಪ್ರಿಯಾಂಕಾ ಉಪೇಂದ್ರ ಅವರು ಪೊಲೀಸ್‌ ಕಾನ್ಸ್‌ಸ್ಟೆಬಲ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ಯೋಗಿ ದೇವಗಂಗೆ ನಿರ್ದೇಶಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಾಹಿತ್ಯ ಸಂಭಾಷಣೆಯನ್ನೂ ಅವರೇ ಬರೆದಿದ್ದಾರೆ.

ನಾಗೇಶ್ ನಿರ್ಮಾಣದ ‘ಸೆಕೆಂಡ್‌ ಹಾಫ್‌’ಗೆ ಗುರುಪ್ರಸಾದ್ ಸಂಭಾಷಣೆ, ಯೋಗರಾಜ್‍ ಭಟ್ ಸಾಹಿತ್ಯ, ಸುರೇಶ್ ಆರ್ಮುಗಂ ಸಂಕಲನ, ಆರ್.ಕೆ. ಶಿವಕುಮಾರ್ ಛಾಯಾಗ್ರಹಣ, ಚೇತನ್ ಸಂಗೀತವಿದೆ.

ತಾರಾಗಣದಲ್ಲಿ ನಿರಂಜನ್, ಸುರಭಿ, ಶರತ್ ಲೋಹಿತಾಶ್ವ, ಸತ್ಯಜಿತ್, ವೀಣಾಸುಂದರ್, ಶಾಲಿನಿ, ಅಶೋಕ್‍ ರಾವ್, ಎಂ.ಎಸ್. ಉಮೇಶ್ ಇದ್ದಾರೆ.

ನವಿಲ ಕಿನ್ನರಿ
ಹುಲಿಕಲ್ ಎಂಟರ್‌ಟೈನ್‍ಮೆಂಟ್ ಸ್ಟುಡಿಯೊ ನಿರ್ಮಾಣ ಸಂಸ್ಥೆಯ ಮೊದಲ ಚಿತ್ರ ನವಿಲು ಕಿನ್ನರಿ. ವೆಂಕಿ ಚಲ್ಲಾ ನಿರ್ದೇಶನದ ಈ ಚಿತ್ರದಲ್ಲಿ ಹುಲಿಕಲ್ ನಟರಾಜ್ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಖ್ಯಾತ ಕೂಚಿಪುಡಿ ನೃತ್ಯಪಟು ಹಿಮಾನ್ಸಿ ಚೌಧುರಿ ನಟಿಸಿದ್ದಾರೆ.

ಎಚ್.ಎನ್. ಶರತ್, ಎಚ್.ಎಸ್. ಬಸವಣ್ಣ, ಗಂಗಾಧರ್, ಬಿ.ಪಿ.ಸೂರ್ಯಪ್ರಕಾಶ್, ಪ್ರಕಾಶ್ ಅಂಗಡಿ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಶ್ರೀನಿವಾಸ ವಿನ್ನಕೋಟ ಛಾಯಾಗ್ರಹಣ, ಸುಭಾಷ್ ಆನಂದ್ ಸಂಗೀತ ಚಿತ್ರಕ್ಕಿದೆ. ಕಥೆ ಹಾಗೂ ಸಂಭಾಷಣೆ ವಿ.ಎಲ್. ಪ್ರಕಾಶ್ ಅವರದು. ನಟರಾಜ್ ನಾಗಸಂದ್ರ, ನಾಗರಾಜ್ ನಾಯಕ್, ಸುಧಾ ಬೆಳವಾಡಿ, ಶ್ರೀನಿವಾಸ ಪ್ರಭು, ಸ್ಪಂದನಾ, ಶ್ರೀಧರ್, ಮೀನಾಕ್ಷಿ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT