ಡಿಜೆ ಸಂಗೀತಕ್ಕೆ ತಂತ್ರಜ್ಞಾನ ವರ

7

ಡಿಜೆ ಸಂಗೀತಕ್ಕೆ ತಂತ್ರಜ್ಞಾನ ವರ

Published:
Updated:
Deccan Herald

*ಡಿಜೆಯಾಗಲು ಸ್ಫೂರ್ತಿ?
ನನ್ನ ವೃತ್ತಿ ಜೀವನ ಆರಂಭವಾಗಿ 5 ವರ್ಷ ಕಳೆದಿದೆ. ಬಾಲ್ಯದಿಂದಲೂ ನನಗೆ ಸಂಗೀತದ ಬಗ್ಗೆ ಒಲವಿತ್ತು. ಈ ಕ್ಷೇತ್ರಕ್ಕೆ ಬರಬೇಕು ಎಂಬುದು ನನ್ನ ಕನಸಾಗಿತ್ತು. ಚಿಕ್ಕಂದಿನಿಂದಲೂ ನಾನು ಎಲ್ಲಾ ರೀತಿಯ ಸಂಗೀತವನ್ನು ಕೇಳಿ ಆನಂದಿಸುತ್ತಿದ್ದೆ. ಹಾಗೆ ನೋಡಿದರೆ ನಾನು ಯಾವುದೋ ಒಂದು ಸಂಗೀತ ಪ್ರಕಾರಕ್ಕೆ ವಾಲಿಲ್ಲ. ಎಲ್ಲವೂ ನನಗೆ ಇಷ್ಟ. ಎಲ್ಲಾ ಕಾಲದ ಸಂಗೀತವು ನನಗೆ ಸ್ಫೂರ್ತಿ ಮತ್ತು ಪ್ರೇರಣೆ ನೀಡಿದೆ ಎಂದು ಹೇಳಬಹುದು. ಅಮ್ಮನ ಮೂಲಕ ಪರಿಚಯವಾದ ರಬೀಂದ್ರ ಸಂಗೀರ್‌ ಮತ್ತು ನಜ್‌ರುಲ್‌ ಗೀತಿ ಅವರ ಗರಡಿಯಲ್ಲಿ ಸಂಗೀತ ಕಲಿತೆ.

*ಕಾರ್ಯಕ್ರಮದ ತಯಾರಿ?
ಸಾಮಾನ್ಯವಾಗಿ ನನ್ನ ಕಾರ್ಯಕ್ರಮಕ್ಕೆ ಯಾವುದೇ ರೂಪುರೇಷೆ ಮಾಡಿಕೊಂಡಿರುವುದಿಲ್ಲ. ನನ್ನ ಬಳಿ ಹಾಡುಗಳ ಅಸಂಖ್ಯಾತ ಸಿ.ಡಿಗಳ ಸಂಗ್ರಹವಿದೆ. ಅದರಲ್ಲಿ ಒಂದು ಹಾಡನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಜನರಿಗೆ ಪರಿಚಿತವಾಗಿರುವ ಪ್ರಖ್ಯಾತ ಹಾಡಿನೊಂದಿಗೆ ಕಾರ್ಯಕ್ರಮವನ್ನು ಆರಂಭಿಸುತ್ತೇನೆ. 

* ಡಿಜೆಯಾಗಿ ನಿಮ್ಮ ಮುಂದಿರುವ ಮುಖ್ಯ ಸವಾಲುಗಳು?
ಲಕ್ಷಾಂತರ ಡಿಜೆಗಳ ನಡುವೆ ನಾನೊಬ್ಬಳು ಉತ್ತಮ ಡಿಜೆಯಾಗುವುದೇ ಒಂದು ದೊಡ್ಡ ಸವಾಲು. ಮಹಿಳಾ ಡಿಜೆಯೆಂದರೆ ಅಲ್ಲಿ ಹಲವಾರು ಸಾಧಕ–ಬಾಧಕಗಳು ಇರುತ್ತವೆ. ಆದರೆ ನೀವೇ ಹೇಳಿ ಯಾವ ಕ್ಷೇತ್ರದಲ್ಲಿ ಸವಾಲುಗಳಿಲ್ಲ. ನಾವದನ್ನು ಸರಿಯಾಗಿ ನಿಭಾಯಿಸಬೇಕಷ್ಟೆ. ವೃತ್ತಿಪರತೆ, ಕೌಶಲಗಳ ಬಳಕೆ ನಮ್ಮ ಕನಸಿನ ಗುರಿ ಮುಟ್ಟಲು ಸಹಕರಿಸುತ್ತದೆ.

* ಸಂಗೀತ ನಿರ್ಮಾಣ ಮತ್ತು ಡಿಜೆಗೂ ಇರುವ ವ್ಯತ್ಯಾಸವೇನು? ಡಿಜೆ ಹೇಗೆ ಕುತೂಹಲಕಾರಿ ಎನಿಸುತ್ತದೆ?
ನಾನು ಎಂದಿಗೂ ಸಂಗೀತ ನಿರ್ಮಾಣ ಮತ್ತು ಡಿಜೆ ವೃತ್ತಿಯನ್ನು ಹೋಲಿಸುವುದಿಲ್ಲ. ಇವೆರಡು ಒಂದಕ್ಕೊಂದು ಸೇರಿಕೊಂಡಿರುತ್ತದೆ. ನಾನು ನನ್ನದೇ ಆದ ಸಂಗೀತವನ್ನು ಮಿಕ್ಸ್‌ ಮಾಡುತ್ತೇನೆ. ಹಾಗಾಗಿ ಸಂಗೀತ ನಿರ್ಮಾಪಕ ಮತ್ತು ಡಿಜೆ ಇಬ್ಬರು ಒಂದನ್ನು ಬಿಟ್ಟು ಇನ್ನೊಂದು ಇರುವುದಿಲ್ಲ ಎಂದೇ ಅನಿಸುತ್ತದೆ. ಸಂಗೀತ ನಿರ್ಮಾಪಕರು ಇಡೀ ವಿಶ್ವಕ್ಕೆ ಅದ್ಭುತವಾದ ಸಂಗೀತ ನೀಡಿದ್ದಾರೆ. ನಾನು ಅವರನ್ನು ಯಾವಾಗಲೂ ಗೌರವಿಸುತ್ತೇನೆ. ಡಿಜೆಗಳಾದ ನಾವು ಅಂತಹ ಹಾಡುಗಳನ್ನು ಇನ್ನಷ್ಟು ಪ್ರಚಲಿತಗೊಳಿಸುತ್ತೇವೆ.

* ತಂತ್ರಜ್ಞಾನ ಅಭಿವೃದ್ಧಿಯಿಂದ ಡಿಜೆ ವೃತ್ತಿಗಾದ ಅನುಕೂಲಗಳು?
ಸಿ.ಡಿ ಮೂಲಕ ಆರಂಭವಾದ ನನ್ನ ವೃತ್ತಿ ಜೀವನವು ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾಗುತ್ತಾ ಬಂದಿದೆ. ಹೇಳಬೇಕೆಂದರೆ ತಂತ್ರಜ್ಞಾನ ನನ್ನ ವೃತ್ತಿಯನ್ನು ಇನ್ನಷ್ಟು ಸುಲಭಗೊಳಿಸಿದೆ. ಮೊದಲು ಸಿಡಿಗಳ ಬ್ಯಾಗ್‌ ಹೊರುತ್ತಿದ್ದೆ. ಈಗ ಹೊರೆ ಕಡಿಮೆಯಾಗಿದೆ. ನಮ್ಮ ಕೆಲಸದ ಬಗ್ಗೆ ಇನ್ನಷ್ಟು ಗಮನಹರಿಸಲು ಸಹಕಾರಿಯಾಗಿದೆ. ಕೆಲವು ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತು ಪಡಿಸಿದರೆ ತಂತ್ರಜ್ಞಾನ ಡಿಜೆ ವೃತ್ತಿಗೆ ವರವಾಗಿಯೇ ಕಾಣುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !