ಕೌನ್ಸೆಲಿಂಗ್‌ ಬಹಿಷ್ಕರಿಸಿ ವೈದ್ಯರ ಮುಷ್ಕರ

7

ಕೌನ್ಸೆಲಿಂಗ್‌ ಬಹಿಷ್ಕರಿಸಿ ವೈದ್ಯರ ಮುಷ್ಕರ

Published:
Updated:

ಬೆಂಗಳೂರು: ಖಾಲಿ ಇರುವ ಹುದ್ದೆಗಳ ಪಟ್ಟಿ ಸಿದ್ಧಪಡಿಸುವಲ್ಲಿ ಆರೋಗ್ಯ ಇಲಾಖೆ ಅಕ್ರಮ ನಡೆಸಿದೆ ಎಂದು ದೂರಿರುವ ವೈದ್ಯರು ಶುಕ್ರವಾರ ಕೌನ್ಸೆಲಿಂಗ್‌ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಸೇವಾನಿರತ ವೈದ್ಯರಿಗೆ ವಿದ್ಯಾರ್ಹತೆ ಅನುಗುಣವಾಗಿ ಹುದ್ದೆ ನೀಡುವ ಉದ್ದೇಶದಿಂದ ಮಾಗಡಿ ರಸ್ತೆಯಲ್ಲಿರುವ ಕುಷ್ಠರೋಗಿಗಳ ಆಸ್ಪತ್ರೆಯ ಆವರಣದಲ್ಲಿ ಕೌನ್ಸೆಲಿಂಗ್‌ ಆಯೋಜಿಸಲಾಗಿತ್ತು. ಸ್ನಾತಕೋತ್ತರ ಪದವಿ ಪೂರೈಸಿ ನೇಮಕಾತಿ ನಿರೀಕ್ಷೆಯಲ್ಲಿದ್ದ ರಾಜ್ಯದ 103 ವೈದ್ಯರು ಪಾಲ್ಗೊಂಡಿದ್ದರು. ಆದರೆ 800 ಹುದ್ದೆಗಳ ಜಾಗದಲ್ಲಿ ಕೇವಲ 170 ಹುದ್ದೆಗಳನ್ನು ತೋರಿಸಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಅವರು ಪ್ರತಿಭಟನೆ ನಡೆಸಿದರು.

‘ರಾಜ್ಯದಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದರೂ ಕೇವಲ 170 ಹುದ್ದೆ ತೋರಿಸುವ ಹಿಂದೆ ದೊಡ್ಡ ಹುನ್ನಾರ ನಡೆದಿದೆ. ಇದರಿಂದಾಗಿ ನಮಗೆ ಬೇಕಾದ ಕಡೆ ಕೆಲಸ ಸಿಗುವ ಸಾಧ್ಯತೆ ಕಡಿಮೆಯಾಗಿದೆ. ಕನಿಷ್ಠ ಆರು ವರ್ಷಗಳವರೆಗೆ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಿರಬೇಕು. ಮೂರು ವರ್ಷ ಸರ್ಕಾರಿ ಸೇವೆ ಸಲ್ಲಿಸಿರಬೇಕು ಎಂಬ ನಿಯಮ ಇದೆ. ಆದರೆ ನಮ್ಮಲ್ಲಿ ಅನೇಕರು ಅದಕ್ಕಿಂತ ಹೆಚ್ಚು ವರ್ಷದ ಸೇವೆ ಹೊಂದಿದ್ದಾರೆ. ಈಗಲೂ ನಾವು ನಮ್ಮ ಕುಟುಂಬವನ್ನು ಬಿಟ್ಟು ದೂರದ ಊರುಗಳಲ್ಲಿ ಕೆಲಸ ಮಾಡುವ ಪರಿಸ್ಥಿತಿಯನ್ನು ಉದ್ದೇಶಪೂರ್ವಕವಾಗಿ ನಿರ್ಮಿಸಲಾಗಿದೆ’ ಎಂದು ಪ್ರತಿಭಟನಾ ನಿರತ ವೈದ್ಯ ನವೀನ್‌ ಹೇಳಿದರು.

‘ಸೇವಾನಿರತ ವೈದ್ಯರು ಸ್ನಾತಕೋತ್ತರ ಪದವಿ ಮಾಡಲು ಅವಕಾಶ ನೀಡಲಾಗಿದೆ. ಈ ವರ್ಷ 103 ವೈದ್ಯರು ತೇರ್ಗಡೆಯಾಗಿದ್ದೇವೆ. ಸಾಮಾನ್ಯ ವರ್ಗಾವಣೆ ಸಂದರ್ಭದಲ್ಲಿ 800ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇರುವುದಾಗಿ ತೋರಿಸಲಾಗಿತ್ತು. ಆದರೆ ಈಗ ನಮಗೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಅವರು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !