‘ಶ್ವಾನ ದತ್ತು’ ಪಡೆಯಿರಿ

7

‘ಶ್ವಾನ ದತ್ತು’ ಪಡೆಯಿರಿ

Published:
Updated:

ಮುದ್ದಾದ ನಾಯಿಯೊಂದು ನಮ್ಮ ಸುತ್ತಲೇ ಸುತ್ತುತ್ತಿದ್ದರೆ ಅದಕ್ಕಿಂತ ಮತ್ತೊಂದು ಆನಂದ ಇನ್ನೊಂದಿಲ್ಲ. ನಾಯಿಗಳು, ನಮ್ಮ ನಡುವೆ ವಿಶೇಷವಾಗಿ ಗುರುತಿಸಿಕೊಂಡಿವೆ. ಹುಡುಗಿಯರಿಗಂತೂ ನಾಯಿಗಳು ಅಚ್ಚುಮೆಚ್ಚು. ತುಂಬಾ ಆತ್ಮೀಯತೆಯಿಂದ ಅವುಗಳನ್ನು ಆರೈಕೆ ಮಾಡಿ ಸಾಕುತ್ತಾರೆ.

ಆದರೆ, ನಗರದ ಹಾದಿ ಬೀದಿಯಲ್ಲಿ ನೂರಾರು ನಾಯಿಗಳು ಕಾಣಸಿಗುತ್ತವೆ. ಅವುಗಳು ಅನಾಥ ಮಕ್ಕಳಂತೆ ತಿರುಗಾಡುವ ಅವುಗಳು ಸೂಕ್ತ ಆರೈಕೆಯಿಲ್ಲದೆ ಸೊರಗುತ್ತಿವೆ. ಇಂಥ ಬೀದಿ ನಾಯಿಗಳ ರಕ್ಷಣೆಗೆ ಹುಟ್ಟಿಕೊಂಡ ಸರ್ಕಾರೇತರ ಸಂಸ್ಥೆ ‘ಬೆಂಗಳೂರು ಒಪ್ಟ್ಸ್‌ ಟು ಅಡಾಪ್ಟ್’ (Bengaluru Opts to Adopt).

ಬೀದಿ ನಾಯಿಗಳ ರಕ್ಷಣೆ ಮಾಡುವ ಈ ಸಂಸ್ಥೆಯು ಅವುಗಳಿಗೆ ಲಸಿಕೆ ಹಾಕಿಸಿ ಸಾಕಿಸಲುಹುತ್ತಿದೆ. ವರ್ಷಕ್ಕೊಮ್ಮೆ ‘ಶ್ವಾನ ದತ್ತು’ ಕಾರ್ಯಕ್ರಮ ಆಯೋಜಿಸಿ, ಉತ್ಕೃಷ್ಟವಾಗಿ ಸಾಕಿಸಲುಹಿದ ಬೀದಿನಾಯಿಗಳನ್ನು ಉಚಿತವಾಗಿ ದತ್ತು ನೀಡುತ್ತದೆ. ಹೀಗೆ, ದತ್ತು ನೀಡಿದ ನಾಯಿಗಳ ಮೇಲೆ ಕಾಲಕಾಲಕ್ಕೆ ನಿಗಾವಹಿಸುವ ಈ ಸಂಸ್ಥೆ, ಯಾವ ರೀತಿ ಅವುಗಳನ್ನು ಆರೈಕೆ ಮಾಡಬೇಕು ಎಂದು ದತ್ತು ಪಡೆದವರಿಗೆ ಮಾರ್ಗದರ್ಶನ ನೀಡುತ್ತದೆ.

ಪ್ರತಿ ವರ್ಷದಂತೆ ‘ಶ್ವಾನ ದತ್ತು’ ಕಾರ್ಯಕ್ರಮವನ್ನು ಆಗಸ್ಟ್ 11 ಮತ್ತು 12 ರಂದು ಯಶವಂತಪುರದ ಮೆಟ್ರೊ ಸಗಟು ವಿತರಣಾ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಮೆಟ್ರೊ ಕ್ಯಾಶ್ ಅಡ್ ಕ್ಯಾರಿ ಇಂಡಿಯಾ ಕಂಪನಿ ಜೊತೆಗೂಡಿ ಈ ಕಾರ್ಯಕ್ರಮವನ್ನು ‘ಬೆಂಗಳೂರು ಒಪ್ಟ್ಸ್‌ ಟು ಅಡಾಫ್ಟ್’ ಸಂಸ್ಥೆ ಹಮ್ಮಿಕೊಂಡಿದ್ದು, ಸೂರಿನ ಆಶ್ರಯವಿಲ್ಲದ ಬೀದಿ ನಾಯಿಗಳಿಗೆ ಆಶ್ರಯ ಒದಗಿಸುವ ಜವಾಬ್ದಾರಿ ಹೊತ್ತ ಪಿಇಟಿ ಮಾಲೀಕತ್ವದ ಪೆಡಿಗ್ರೀ (ಮಾರ್ಸ್ ಇಂಡಿಯಾದ ಪ್ರಮುಖ ಪಿಇಟಿ ಫುಡ್ ಬ್ರಾಂಡ್) ಸಹ ಈ ಕಾಯಕಕ್ಕೆ ನೆರವು ನೀಡಿದೆ.

ಎರಡು ದಿನದ ಈ ಕಾರ್ಯಕ್ರಮದಲ್ಲಿ ಬೀದಿ ನಾಯಿಗಳ ಪ್ರದರ್ಶನ ಆಕರ್ಷಕವಾಗಿರುತ್ತದೆ. ನಾಯಿಗಳನ್ನು ಸಾಕಲಾಗದವರು ಹಾಗೂ ಮನೆಗಳಲ್ಲಿ ಹೆಚ್ಚುವರಿಯಾಗಿ ಇರುವ ನಾಯಿಗಳನ್ನು ಈ ಕಾರ್ಯಕ್ರಮಕ್ಕೆ ತಂದು ಸಂಸ್ಥೆಗೆ ನೀಡಬಹುದು. ಸಂಸ್ಥೆ ಅವುಗಳನ್ನು ಆರೈಕೆ ಮಾಡಿ ಮತ್ತೊಬ್ಬರಿಗೆ ದತ್ತು ನೀಡುತ್ತದೆ.

ಶ್ವಾನ ದತ್ತು ಕಾರ್ಯಕ್ರಮದಲ್ಲಿ ದೇಶಿ ತಳಿಯ ನಾಯಿಗಳ ಹೆಚ್ಚಾಗಿರುತ್ತವೆ. ವಿದೇಶಿ ತಳಿಯ ನಾಯಿಗಳ ಬೆರಳೆಣಿಕಷ್ಟೇ ಕಾಣಸಿಗುತ್ತವೆ. ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ತಮಗಿಷ್ಟವಾಗುವ ನಾಯಿಯನ್ನು ಉಚಿತವಾಗಿ ದತ್ತು ಪಡೆಯಬಹುದು. ಮನೆಗಳಲ್ಲಿ ಸಾಕುತ್ತಿರುವ ನಾಯಿಗಳನ್ನು ಇಲ್ಲಿಗೆ ಕರೆದುಕೊಂಡು ಬಂದು ಅವುಗಳಿಗೆ ಉಚಿತವಾಗಿ ಲಸಿಕೆ ಹಾಕಿಸಬಹುದು. ಲಸಿಕೆಗೆ ತಗಲುವು ಸಂಪೂರ್ಣ ವೆಚ್ಚವನ್ನು ಪೆಡಿಗ್ರೀ ಕಂಪನಿ ಭರಿಸಲಿದೆ.

‘2017ರಲ್ಲೂ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಗ 50ಕ್ಕೂ ಅಧಿಕ ನಾಯಿಗಳನ್ನು ದತ್ತು ನೀಡಲಾಗಿತ್ತು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿತ್ತು. ಅದೇ ಉತ್ಸಾಹದಿಂದ ಮತ್ತೊಮ್ಮೆ ಸಾರ್ವಜನಿಕರ ಮುಂದೆ ಬರುತ್ತಿದ್ದೇವೆ’ ಎನ್ನುತ್ತಾರೆ ಬೆಂಗಳೂರು ಒಪ್ಟ್ಸ್‌ ಟು ಅಡಾಪ್ಟ್’ ಸಂಸ್ಥೆಯ ಸ್ಥಾಪಕಿ  ರಿತಿಕಾ ಗೊಯಲ್. 

‘ನಾವು ಕೇವಲ ನಾಯಿಗಳನ್ನು ದತ್ತು ಕೊಟ್ಟು ಸುಮ್ಮನಾಗುವುದಿಲ್ಲ. ದತ್ತು ಪಡೆದವರು ಅವುಗಳನ್ನು ಯಾವ ರೀತಿ ಆರೈಕೆ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ನಿಗಾ ಇಟ್ಟಿರುತ್ತೇವೆ. ಅದಕ್ಕಾಗಿ ದತ್ತು ಪಡೆಯುವಾಗಲೇ ವಿಳಾಸ ಪಡೆದಿರುತ್ತೇವೆ. ಅನೀರಿಕ್ಷಿತವಾಗಿ ಅವರ ಮನೆಗಳಿಗೆ ಹೋಗಿ ಯಾವ ರೀತಿ ನಾಯಿಗಳನ್ನು ಆರೈಕೆ ಮಾಡುತ್ತಿದ್ದಾರೆ ಎಂಬುದನ್ನು ಪರಿಶೀಲಿಸುತ್ತೇವೆ’ ಎನ್ನುತ್ತಾರೆ.

ಸ್ಥಳ: ಮೆಟ್ರೋ ಕ್ಯಾಶ್ ಆಂಡ್ ಕ್ಯಾರಿ ಇಂಡಿಯಾ ಪ್ರೈ.ಲಿ. ಯಶವಂತಪುರ.
ಸಮಯ: ಬೆಳಿಗ್ಗೆ 11 ರಿಂದ ಸಂಜೆ 
ಕೊನೆ ದಿನ: 12 ಆಗಸ್ಟ್.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !