ಕನ್ನಡ ನಾಟಕ ರಚನಾ ಸ್ಪರ್ಧೆ

7

ಕನ್ನಡ ನಾಟಕ ರಚನಾ ಸ್ಪರ್ಧೆ

Published:
Updated:

ಬೆಂಗಳೂರು: ಆಧುನಿಕ ಕನ್ನಡ ರಂಗಭೂಮಿಯಲ್ಲಿ ಹೊಸ ನಾಟಕಗಳನ್ನು ಬರೆಯಲು ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ನಾಟಕ ಅಕಾಡೆಮಿ ‘ಕನ್ನಡ ನಾಟಕ ರಚನಾ ಸ್ಪರ್ಧೆ’ ಆಯೋಜಿಸಿದೆ.

ಸ್ವತಂತ್ರ ನಾಟಕಗಳನ್ನು ರಚಿಸಬಹುದು. ಅಥವಾ ಕಥೆ, ಕಾದಂಬರಿಗಳನ್ನು ಆಧರಿಸಿದ ನಾಟಕಗಳನ್ನೂ ಬರೆಯಬಹುದು. ಪ್ರಕಟವಾಗದ ಹಾಗೂ ಪ್ರಯೋಗವಾಗದ ನಾಲ್ಕು ನಾಟಕಗಳಿಗೆ ಸಮಾನಾಂತರ ಬಹುಮಾನ ನೀಡಲಾಗುತ್ತದೆ. 50 ಪುಟಗಳ ಮಿತಿಯಲ್ಲಿ ಬರೆಯಬೇಕು. ನಾಟಕಕಾರರ ಪರಿಚಯ ಪತ್ರ, ರಂಗರೂಪವಾಗಿದ್ದರೆ ಮೂಲ ಕೃತಿಕಾರರ ಕಾಪಿರೈಟ್‌ ಹೊಂದಿರುವ ಅನುಮತಿ ಪತ್ರವನ್ನೂ ಲಗತ್ತಿಸಬೇಕು.

ನವೆಂಬರ್‌ 30ರೊಳಗೆ academy.nataka@gmail.com ಮೂಲಕ ಅಥವಾ ರಿಜಿಸ್ಟ್ರಾರ್‌, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು ಈ ವಿಳಾಸಕ್ಕೆ ಕಳಿಸುವ ಅವಕಾಶ ಇದೆ. ಹೆಚ್ಚಿನ ವಿವರಗಳಿಗೆ 080–22237484ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !