ಗುರುವಾರ , ನವೆಂಬರ್ 21, 2019
20 °C

‘ಡ್ರೀಮ್ ಗರ್ಲ್‌’ಗೆ ಅಂಟಿದ ನಕಲಿನ ಕಳಂಕ!

Published:
Updated:
Prajavani

ಬಾಲಿವುಡ್‌ ನಟ ಆಯುಷ್ಮಾನ್‌ ಖುರಾನಾ ಮುಖ್ಯ ಭೂಮಿಕೆಯಲ್ಲಿರುವ ‘ಡ್ರೀಮ್‌ ಗರ್ಲ್‌’ ಬಿಡುಗಡೆಗೂ ಮುನ್ನವೇ ಅಪಸ್ವರ ಕೇಳಿ ಬಂದಿದೆ. ಈ ಚಿತ್ರ 2017ರಲ್ಲಿ ಬಿಡುಗಡೆಯಾದ ತಮ್ಮ ಚಿತ್ರ ‘ಕಾಲ್‌ ಫಾರ್‌ ರನ್‌’ ಚಿತ್ರದ ಯಥಾವತ್ ನಕಲು ಎಂದು ಆ ಚಿತ್ರದ ನಿರ್ದೇಶಕ ಜನಕ್‌ ತೊಪರಾನಿ ಆರೋಪಿಸಿದ್ದಾರೆ.

ಅನಿವಾರ್ಯ ಕಾರಣಗಳಿಂದ ಹೆಣ್ಣಿನ ವೇಷ ತೊಡುವ ನಾಯಕ ಪಡುವ ಬವಣೆಯನ್ನು ನವಿರಾದ ಹಾಸ್ಯದ ಮೂಲಕ ಕಟ್ಟಿ ಕೊಡುವ ಕಥೆಯನ್ನು ನಟ ಜೀತೇಂದ್ರ ಪುತ್ರಿ ಏಕ್ತಾ ಕಪೂರ್‌ ಒಡೆತನದ ಬಾಲಾಜಿ ಚಿತ್ರನಿರ್ಮಾಣ ಸಂಸ್ಥೆಯ ಜತೆ ಚರ್ಚಿಸಿದ್ದೆ. ಚಿತ್ರ ಮಾಡಲು ಸಂಸ್ಥೆ ಆಸಕ್ತಿ ತೋರದ ಕಾರಣ ಬೇರೆಯವರ ಜತೆ ಸೇರಿ ‘ಕಾಲ್‌ ಫಾರ್‌ ರನ್‌’ ಚಿತ್ರ ನಿರ್ಮಿಸಿದೆ. 

ತನ್ನ ಚಿತ್ರಕತೆಯನ್ನು ಕೇಳಿದ್ದ ಬಾಲಾಜಿ ಚಿತ್ರ ಸಂಸ್ಥೆಯ ಅಧಿಕಾರಿಗಳು ಅದರಲ್ಲಿ ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ‘ಡ್ರೀಮ್‌ ಗರ್ಲ್‌’ ಕತೆ ಹೆಣೆದಿದ್ದಾರೆ ಎಂದು ತೊಪರಾನಿ ದೂರಿದ್ದಾರೆ. ಕೋರ್ಟ್‌ ಮೆಟ್ಟಿಲೇರುವ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ. ರಾಜ್‌ ಶಾಂಡಿಲ್ಯಾ ನಿರ್ದೇಶನದ ಮೊದಲ ಚಿತ್ರವನ್ನು ಬಾಲಾಜಿ ಸಂಸ್ಥೆಯ ಏಕ್ತಾ ಕಪೂರ್‌ ಮತ್ತು ಶೋಭಾ ಕಪೂರ್‌ ನಿರ್ಮಿಸಿದ್ದಾರೆ.

ಪ್ರತಿಕ್ರಿಯಿಸಿ (+)