ಗ್ರಾಮಾಡಳಿತದ ನಿರ್ಲಕ್ಷ್ಯಕ್ಕೆ ಜನರು ಬೇಸರ

7
ಕಾಳಗಿ ರಾಮನಗರ ಜನತೆ ಕುಡಿಯುವ ನೀರು ಕಲುಷಿತ

ಗ್ರಾಮಾಡಳಿತದ ನಿರ್ಲಕ್ಷ್ಯಕ್ಕೆ ಜನರು ಬೇಸರ

Published:
Updated:
 ಕಾಳಗಿ ರಾಮನಗರದಲ್ಲಿ ಕೊಳವೆ ಬಾವಿಯ ಕುಡಿಯುವ ನೀರಿನ ಸುತ್ತಲು ಕೊಳಚೆ ಆವರಿಸಿದೆ

ಕಾಳಗಿ: ‘ಇಲ್ಲಿನ ರಾಮನಗರ ಪ್ರದೇಶದ ಜನರು ಕುಡಿಯಲು ಉಪಯೋಗಿಸುವ ಕೊಳವೆ ಬಾವಿಯ ನೀರಿನ ಸುತ್ತಲು ಕೊಳಚೆ ಹರಡಿಕೊಂಡು ನೀರು ಕಲುಷಿತಗೊಳುತ್ತಿದೆ’ ಎಂದು ನಿವಾಸಿಗಳು ದೂರಿದ್ದಾರೆ.

‘ಶಹಾಪುರ–ಶಿವರಾಂಪುರ ರಾಜ್ಯ ಹೆದ್ದಾರಿ–149 ಬದಿಯಲ್ಲಿ (ರೇವಣಸಿದ್ದೇಶ್ವರ ಮೆಡಿಕಲ್ ಸಮೀಪ) ವಿದ್ಯಾರ್ಥಿಗಳ ಸರ್ಕಾರಿ ವಸತಿ ನಿಲಯ ಇದೆ. ಇದರ ಪಕ್ಕದಲ್ಲೆ ಸರ್ಕಾರ ಕೊಳವೆ ಬಾವಿ ಕೊರಿಸಿದೆ. ಈ ನೀರು ಸರ್ವರಿಗೂ ಸಿಗಲಿ ಎಂಬ ದೃಷ್ಟಿಯಿಂದ ಸಿಮೆಂಟ್‌ನ ಕಿರು ಟ್ಯಾಂಕ್ ನಿರ್ಮಿಸಿ, ವಿದ್ಯುತ್ ಮೋಟರ್ ಅಳವಡಿಸಿ ಟ್ಯಾಂಕ್‌ನಲ್ಲಿ ನೀರು ಸಂಗ್ರಹಿಸಿ ನಲ್ಲಿಗಳ ಮೂಲಕ ಜನತೆಗೆ ನೀರು ಒದಗಿಸಲಾಗುತ್ತಿದೆ’ ಎಂದು ಜನರು ತಿಳಿಸಿದ್ದಾರೆ.

‘ಈ ನೀರಿನ ಟ್ಯಾಂಕ್ ಮೇಲೆ ಯಾವುದೇ ತರಹದ ಮುಚ್ಚಳ ಇರದೆ ನೀರೊಳಗೆ ಹಲವು ಗುಬ್ಬಿ, ಹುಳು ಬಿದ್ದು ಸತ್ತಿವೆ. ಕಸಕಡ್ಡಿ ಬಿದ್ದು ನೀರು ಗಲೀಜು ಆಗುತ್ತಿದೆ. ನೀರೊಳಗೆ ಪಾಚಿಯು ಬೆಳೆದಿದೆ. ಒಮ್ಮೆಯೂ ಈ ಟ್ಯಾಂಕಿನ ಸ್ವಚ್ಛತೆಗೆ ಗ್ರಾಮಾಡಳಿತ ಮುಂದೆ ಬಂದಿಲ್ಲ’ ಎಂದು ಶರಣಪ್ಪ ಬೇಲೂರ ಆಪಾದಿಸಿದ್ದಾರೆ.

‘ಟ್ಯಾಂಕಿನ ನಲ್ಲಿಗಳು ಕಳಚಿ ಹೋಗಿವೆ. ಜನರೇ ಕಟ್ಟಿಗೆ ಚುಚ್ಚಿದಾರೆ. ಹೊಸ ನಲ್ಲಿ ಕೂಡಿಸುವವರು ಯಾರು? ಎಂಬ ಪ್ರಶ್ನೆ ಕಾಡುತ್ತಿದೆ. ಟ್ಯಾಂಕಿನ ಕೆಳಭಾಗದ ಸುತ್ತಲು ಕೆಸರು, ಹುಲ್ಲು ನಿರ್ಮಾಣವಾಗಿ ದುರ್ವಾಸನೆ ಬೀರುತ್ತಿದೆ. ಒಂದೆಡೆ ಕಸದ ತಿಪ್ಪೆಗುಂಡಿಯ ರಸ ಈ ಟ್ಯಾಂಕ್ ಸೆಳೆಯುತ್ತಿದೆ. ಇದರ ಪಕ್ಕದಲ್ಲೆ ಹಂದಿ, ನಾಯಿಗಳ ವಾಸವೂ ಇದೆ. ಇದರಿಂದ ನಿವಾಸಿಗಳಿಗೆ ಅನಾರೋಗ್ಯದ ಎದುರಾಗಿದೆ. ವಸತಿ ನಿಲಯದ ಪಾಲಿಗೆ ಈ ನೀರೇ ಗತಿಯಾಗಿ ವಿದ್ಯಾರ್ಥಿಗಳು ರೋಸಿ ಹೋಗಿದ್ದಾರೆ’ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು’.

ಈ ಅವ್ಯವಸ್ಥೆ ಸರಿಪಡಿಸುವಂತೆ ಹಲವು ಬಾರಿ ಗ್ರಾಮಾಡಳಿತಕ್ಕೆ ಮನವಿ ಮಾಡಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಸ್ವಚ್ಛತೆಗೆ ಮುಂದಾಗದ ಗ್ರಾಮಾಡಳಿತ ಮಾತ್ರ ಕಣ್ಣುಮುಚ್ಚಿ ಕುಳಿತಿದೆ’ ಎಂದು ಬಂಡಪ್ಪ ಬೊಮ್ಮಾಣಿ, ಶಿವಯೋಗಿ ಡೊಣ್ಣೂರ ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !