ಶುಕ್ರವಾರ, ಫೆಬ್ರವರಿ 28, 2020
19 °C
ವಿಶ್ವಸಂಸ್ಥೆ

ಅಫ್ಗಾನಿಸ್ತಾನದಲ್ಲಿ ಭೀಕರ ಬರ: 30 ಲಕ್ಷ ಜನರಿಗೆ ತುರ್ತು ಆಹಾರ ಅಗತ್ಯ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Deccan Herald

ಕಾಬೂಲ್‌: ಅಫ್ಗಾನಿಸ್ತಾನದಲ್ಲಿ ಭೀಕರ ಬರ ತಲೆದೋರಿದ್ದು, 30 ಲಕ್ಷ ಮಂದಿಗೆ ತುರ್ತಾಗಿ ಆಹಾರ ಪೂರೈಸುವ ಅಗತ್ಯವಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಉತ್ತರ ಮತ್ತು ಪಶ್ಚಿಮ ಅಫ್ಗಾನಿಸ್ತಾನದಲ್ಲಿ ಬೆಳೆಗಳು ನಾಶವಾಗಿದ್ದು,  ಜಾನುವಾರುಗಳು ಸಂಕಷ್ಟದ ಸ್ಥಿತಿಯಲ್ಲಿವೆ. ಕುಡಿಯುವ ನೀರು ಸಿಗದೆ ಜನರು ಪರದಾಡುತ್ತಿದ್ದಾರೆ. ಲಕ್ಷಾಂತರ ಮಂದಿ ಮನೆಗಳನ್ನು ತೊರೆದು ವಲಸೆ ಹೋಗುತ್ತಿದ್ದಾರೆ.

‘ಅಫ್ಗಾನಿಸ್ತಾನದಲ್ಲಿ ದಿನಕ್ಕೆ ಒಂದು ಬಾರಿಯೂ ಊಟ ಮಾಡದೆ ಬದುಕುತ್ತಿರುವವರು ಇದ್ದಾರೆ. ಅವರು ಕೇವಲ ಬ್ರೆಡ್‌ ಮತ್ತು ಚಹಾ ಸೇವಿಸಿಯೇ ಬದುಕಿರುವ ಸಾಧ್ಯತೆಗಳಿವೆ’ ಎಂದು ಅಫ್ಗಾನಿಸ್ತಾನದಲ್ಲಿನ ವಿಶ್ವಸಂಸ್ಥೆ ಮಾನವೀಯತೆ ಸಮನ್ವಯಾಧಿಕಾರಿ ಟೊಬಿ ಲ್ಯಾಂಝರ್‌ ತಿಳಿಸಿದ್ದಾರೆ.

'ಶೀಘ್ರದಲ್ಲೇ ಈ ಜನರಿಗೆ ಆಹಾರ ತಲುಪಿಸದಿದ್ದರೆ ಸಂಕಷ್ಟದ ಸ್ಥಿತಿಗೆ ತಲುಪುವ ಸಾಧ್ಯತೆಗಳಿವೆ. ಚಳಿಗಾಲದಲ್ಲಿ ಈ ಪರಿಸ್ಥಿತಿ ವಿಕೋಪಕ್ಕೆ ತಲುಬಹುದು’ ಎಂದು ತಿಳಿಸಿದ್ದಾರೆ.

ಕಳೆದ ತಿಂಗಳು ಹಲವು ಸಂಸ್ಥೆಗಳು 6 ಲಕ್ಷ ಮಂದಿಗೆ ಗೋಧಿ ಹಿಟ್ಟು ಸೇರಿದಂತೆ ಕೆಲವು ಆಹಾರ ಪದಾರ್ಥಗಳನ್ನು ನೀಡಿದ್ದವು. ಆದರೂ, ಆಹಾರ, ಆಶ್ರಯ ಮತ್ತು ಆರೋಗ್ಯ ಸೇವೆಗಳಿಗೆ ಉಂಟಾಗಿರುವ ಅಪಾರ ಬೇಡಿಕೆಯನ್ನು ನೀಗಿಸಲು ಅಫ್ಗಾನಿಸ್ತಾನದ ಅಧಿಕಾರಿಗಳಿಗೆ ಮತ್ತು ಅಂತರರಾಷ್ಟ್ರೀಯ ನೆರವು ನೀಡುವ ಸಂಸ್ಥೆಗಳಿಗೆ ಸಾಧ್ಯವಾಗುತ್ತಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು