ಬರ ಪರಿಸ್ಥಿತಿ ಕುರಿತು ಕೃಷಿಕರಿಂದ ಮಾಹಿತಿ

7
ಬರಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ಭೇಟಿ

ಬರ ಪರಿಸ್ಥಿತಿ ಕುರಿತು ಕೃಷಿಕರಿಂದ ಮಾಹಿತಿ

Published:
Updated:
Deccan Herald

ಹನೂರು: ತಾಲ್ಲೂಕಿನ ಮಂಗಲ, ಕಣ್ಣೂರು, ಚೆನ್ನಾಲಿಂಗನಹಳ್ಳಿ, ಆನಾಪುರ, ಲೊಕ್ಕನಹಳ್ಳಿ ಗ್ರಾಮಗಳಿಗೆ ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ಅವರು ಭೇಟಿ ನೀಡಿದ್ದು, ಬರಪರಿಸ್ಥಿತಿ ಕುರಿತು ಕೃಷಿಕರಿಂದ ಮಾಹಿತಿ ಪಡೆದರು.

ನಂತರ ಅವರು, ‘ಬರಪರಿಸ್ಥಿತಿ, ಬೆಳೆ ಹಾನಿ ಕುರಿತು ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ನಡೆಸಿ ವರದಿ ರೂಪಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು’ ಎಂದು ತಿಳಿಸಿದರು.

ರಾಗಿ, ಜೋಳ, ಹುರುಳಿ ಬೆಳೆಗಳು ಮಳೆ ಕೊರತೆಯಿಂದಾಗಿ ಒಣಗಿರುವ ಮಾಹಿತಿ ಬಂದಿದೆ. ಸಮಗ್ರವಾಗಿ ಮಾಹಿತಿ ಪಡೆದು ವರದಿ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಒಡೆಯರಪಾಳ್ಯ ಟಿಬೆಟಿಯನ್ ನಿರಾಶ್ರಿತರ ಶಿಬಿರ ಹಾಗೂ ಬೌದ್ಧ ದೇವಾಲಯ ಮತ್ತು ಶಾಲೆಗೆ ಭೇಟಿ ನೀಡಿದ್ದರು. ಲೊಕ್ಕನಹಳ್ಳಿ ನಾಡಕಚೇರಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು.

ಉಪ ವಿಭಾಧಿಕಾರಿ ಬಿ.ಫೌಜಿಯಾ ತರುನ್ನಮ್, ತಹಶೀಲ್ದಾರ್ ರಾಯಪ್ಪ ಹುಣಸಗಿ, ವಿಶೇಷ ತಹಶೀಲ್ದಾರ್ ಶಿವರಾಂ, ಕೃಷಿ ಇಲಾಖೆ ಉಪನಿರ್ದೇಶಕ ಮುತ್ತುರಾಜು, ಕೃಷಿ ತಾಂತ್ರಿಕ ಅಧಿಕಾರಿ ಉಪೇಂದ್ರ, ಗ್ರಾಮ ಲೆಕ್ಕಿಗರಾದ ಕಾರ್ತಿಕ್, ರಾಜು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !