ಬತ್ತಿದ ಕೆರೆಗಳು–ಕುಸಿದ ಅಂತರ್ಜಲ

ಗುರುವಾರ , ಮೇ 23, 2019
32 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಸೀರೆಸಂದ್ರ, ಬ್ಯಾತ ಮತ್ತು ಕಾಕೋಳು ಕೆರೆಯಲ್ಲಿ ನೀರಿಲ್ಲ

ಬತ್ತಿದ ಕೆರೆಗಳು–ಕುಸಿದ ಅಂತರ್ಜಲ

Published:
Updated:
Prajavani

ಹೆಸರಘಟ್ಟ: ಹೋಬಳಿಯ ಜೀವನಾಡಿಯಾಗಿರುವ ಸೀರೆಸಂದ್ರ, ಬ್ಯಾತ ಮತ್ತು ಕಾಕೋಳು ಕೆರೆಗಳು ಬತ್ತಿ ಹೋಗಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಸೀರೆಸಂದ್ರ, ಬ್ಯಾತ, ಕಾಕೋಳು ಕೆರೆಗಳ ಆಸುಪಾಸಿನ ಸುಮಾರು 214 ಎಕರೆ ಪ್ರದೇಶದಲ್ಲಿನ ಕೃಷಿಯನ್ನೆ ಸ್ಥಳೀಯರು ಅವಲಂಬಿಸಿದ್ದಾರೆ.

‘ಹೋದ ವರ್ಷ ಮಳೆ ಬಂದು ಕೆರೆಗಳು ತುಂಬಿ ಕೋಡಿ ಹರಿದಿದ್ದವು. ಕೆರೆಗಳು ತುಂಬಿದ್ದರಿಂದ ಅಂತರ್ಜಲ ಮಟ್ಟ ಹೆಚ್ಚಿ, ಫಸಲು ಲಾಭ ತಂದು ಕೊಟ್ಟಿತ್ತು. ಆದರೆ, ಈ ಬಾರಿ ನಿರೀಕ್ಷಿತ ಮಟ್ಟದ ಮಳೆಯಾಗದೇ ಕೆರೆಗಳು ಬತ್ತಿವೆ’ ಎಂದು ಬ್ಯಾತದ ರೈತ ಬಸವರಾಜು ಹೇಳಿದರು.

‘ಕೆರೆಗಳಲ್ಲಿ ಇರುವ ಹೂಳನ್ನು ತೆಗೆಸಿದ್ದರೆ, ಪ್ರಾಯಶಃ ಮೇ ವರೆಗೆ ಕೆರೆಯಲ್ಲಿ ನೀರು ಇರುತ್ತಿತ್ತು. ಕೃಷಿಗೆ ಅಗತ್ಯ ಪ್ರಮಾಣದ ನೀರು ಸಿಗುತ್ತಿತ್ತು. ಆದರೆ ಜನ ಪ್ರತಿನಿಧಿಗಳು, ಅಧಿಕಾರಿಗಳು ಕೆರೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ’ ಎನ್ನುತ್ತಾರೆ ಕೃಷಿಕ ಮಹದೇವ್.

ಮೂರು ಕೆರೆಗಳ ಅಸುಪಾಸಿನ ಸುಮಾರು 53 ಗ್ರಾಮಗಳಲ್ಲಿ 84 ಕೊಳವೆ ಬಾವಿ ಮತ್ತು 12 ಕೃಷಿ ಹೊಂಡಗಳಿವೆ. ‘1,200 ರಿಂದ 1,500 ಅಡಿ ಆಳ ಕೊಳವೆಬಾವಿ ಕೊರೆಸಿದರೂ ಅಗತ್ಯವಿರು ವಷ್ಟು ನೀರು ಸಿಗುತ್ತಿಲ್ಲ’ ಎಂದು ಕಾಮಾಕ್ಷಿ ಪುರ ಪಾಳ್ಯದ ರೈತ ಕರಿಗೌಡ. ‘ದ್ರಾಕ್ಷಿ, ದಾಳಿಂಬೆ, ಮೆಕ್ಕೆಜೋಳ, ರಾಗಿ ಇಳುವರಿ ಈ ಸಾರಿ ಕೈ ಕಚ್ಚಿದೆ’ ಎಂದರು.

ಜಲಮಂಡಳಿಯ ಸಹಾಯಕ ಎಂಜಿನೀಯರ್ ಕೃಷ್ಣಗೌಡ, ‘ಕೆರೆಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದರು.

 

ಕೆರೆ;ವಿಸ್ತೀರ್ಣ

ಬ್ಯಾತ–933.7 ಎಕರೆ

ಕಾಕೋಳು–116 ಎಕರೆ

ಸೀರೆಸಂದ್ರ–72 ಎಕರೆ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !