ಸೋಮವಾರ, ಆಗಸ್ಟ್ 19, 2019
28 °C

ಅನಧಿಕೃತ ಹಾಲ್‍ಮಾರ್ಕ್‌; ವ್ಯಾಪಾರಿ ಬಂಧನ

Published:
Updated:
Prajavani

ಬೆಂಗಳೂರು: ಚಿನ್ನಾಭರಣಗಳ ಮೇಲೆ ಅನಧಿಕೃತವಾಗಿ ‘ಹಾಲ್‌ಮಾರ್ಕ್‌’ ಚಿಹ್ನೆ ಮುದ್ರಿಸಿ ಮಾರುತ್ತಿದ್ದ ಆರೋಪದಡಿ ಸುದರ್ಶನ್ ಜೈನ್ (28) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಶಿವಾಜಿನಗರದ ಚಿನ್ನಸ್ವಾಮಿ ಮೊದಲಿಯಾರ್ ಸ್ಟ್ರೀಟ್‌ನಲ್ಲಿ ವಾಸವಿದ್ದ ಸುದರ್ಶನ್, ನಗರ್ತಪೇಟೆ ಕ್ರಾಸ್‌ ರಾಜರಾಜೇಶ್ವರಿ ಮಾರುಕಟ್ಟೆಯಲ್ಲಿ ‘ಆರ್.ಟಿ.ಎನ್ ಟೆಸ್ಟಿಂಗ್ ಮತ್ತು ಹಾಲ್‍ಮಾರ್ಕಿಂಗ್ ಸೆಂಟರ್’ ತೆರೆದಿದ್ದ. ಆತನ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಆರು ತಿಂಗಳಿನಿಂದ ಆರೋಪಿ, ಕೃತ್ಯ ಎಸಗುತ್ತಿದ್ದ. ಮಳಿಗೆ ಮೇಲೆ ದಾಳಿ ನಡೆಸಿ 60 ಗ್ರಾಂ ತೂಕದ ಚಿನ್ನದ ಆಭರಣ ಜಪ್ತಿ ಮಾಡಲಾಗಿದೆ’ ಎಂದರು. 

Post Comments (+)