ಫೇಸ್‌ಬುಕ್‌ ನಕಲಿ ಖಾತೆ ಮೂರು ಪಟ್ಟು ಹೆಚ್ಚಳ

7

ಫೇಸ್‌ಬುಕ್‌ ನಕಲಿ ಖಾತೆ ಮೂರು ಪಟ್ಟು ಹೆಚ್ಚಳ

Published:
Updated:

ಹೈದರಾಬಾದ್‌ : ಮೂರು ವರ್ಷಗಳಲ್ಲಿ ಫೇಸ್‌ಬುಕ್‌ ನಕಲಿ ಖಾತೆಗಳ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದ್ದು, ಒಟ್ಟು 25 ಕೋಟಿಯಷ್ಟು ನಕಲಿ ಖಾತೆಗಳಿವೆ ಎಂದು ಫೇಸ್‌ಬುಕ್‌ ಹೇಳಿದೆ.  

ಕಂಪನಿ ನಿಯಮದಂತೆ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದುವಂತಿಲ್ಲ. ಇಂತಹ ಖಾತೆಗಳನ್ನು ನಕಲಿ ಅಥವಾ ಅನಪೇಕ್ಷಿತ ಖಾತೆ ಎಂದು ವರ್ಗೀಕರಿಸಲಾಗುತ್ತದೆ. ಇದರ ಅನುಸಾರ 2015ರಲ್ಲಿ ಶೇ 5ರಷ್ಟಿದ್ದ ನಕಲಿ ಖಾತೆಗಳು, 2018ಕ್ಕೆ ಶೇ 11ರಷ್ಟು ಹೆಚ್ಚಿದೆ. 

2015ರ ಅಂಕಿ ಅಂಶಗಳ ಪ್ರಕಾರ ಫೇಸ್‌ಬುಕ್‌ನಲ್ಲಿ ಸರಾಸರಿ 1.59 ಶತಕೋಟಿ ಮಾಸಿಕ (ಎಂಎಯು) ಬಳಕೆದಾರರಿದ್ದರು. ಆದರೆ, 2018ರಲ್ಲಿ ಈ ಪ್ರಮಾಣ 2.32 ಶತಕೋಟಿಗೆ ಏರಿಕೆಯಾಗಿದೆ.  

ಫಿಲಿಪ್ಪಿನ್ಸ್‌ ಮತ್ತು ವಿಯೆಟ್ನಾಂಗಳಲ್ಲಿ ಅನಪೇಕ್ಷಿತ ಖಾತೆಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. 

ಡಿಸೆಂಬರ್‌ 2018ನೇ ಸಾಲಿನ ವರದಿ ಪ್ರಕಾರ, ಇಂಡೋನೇಷ್ಯಾ, ಫಿಲಿಪ್ಪಿನ್ಸ್‌ ಮತ್ತು ಭಾರತದಲ್ಲಿ ಫೇಸ್‌ಬುಕ್‌ ಬಳಕೆದಾರರ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. 

 

 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !