ಸಾಮಾಜಿಕ ಪರಿಣಾಮ– ಜನರಿಂದಲೇ ಅಧ್ಯಯನ

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಎಲಿವೇಟೆಡ್‌ ಕಾರಿಡಾರ್‌

ಸಾಮಾಜಿಕ ಪರಿಣಾಮ– ಜನರಿಂದಲೇ ಅಧ್ಯಯನ

Published:
Updated:
Prajavani

ಬೆಂಗಳೂರು: ಎಲಿವೇಟೆಡ್‌ ಕಾರಿಡಾರ್‌ ಯೋಜನೆಯಿಂದಾಗುವ ಸಾಮಾಜಿಕ ಪರಿಣಾಮಗಳ ಮೇಲಿನ ಅಧ್ಯಯನ ನಡೆಸದೆಯೇ ಈ ಯೋಜನೆಗೆ ಟೆಂಡರ್‌ ಕರೆದಿರುವುದಕ್ಕೆ ನಗರದ ಸಮಾನ ಮನಸ್ಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಯೋಜನೆಯಿಂದ ಆಗುವ ಸಾಮಾಜಿಕ ಪರಿಣಾಮ ಹಾಗೂ ಪರಿಸರದ ಮೇಲಾಗುವ ಪರಿಣಾಮಗಳ ಅಧ್ಯಯನವನ್ನು ಸ್ವತಃ ನಡೆಸಲು ಈ ಸಂಘಟನೆಗಳು ಮುಂದಾಗಿವೆ.

ನಗರದ ಮಿನ್ಸ್ಕ್‌ ಸ್ಕ್ವೇರ್‌ನಿಂದ ಕೆ.ಎಚ್‌. ರಸ್ತೆವರೆಗೆ (ಡಬಲ್‌ ರೋಡ್) ವಿದ್ಯಾರ್ಥಿ ಸ್ವಯಂಸೇವಕರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಶನಿವಾರ ಸಮೀಕ್ಷೆ ನಡೆಸಿದರು. ಎಲಿವೇಟೆಡ್‌ ಕಾರಿಡಾರ್‌ ಹಾದುಹೋಗುವ ಮಾರ್ಗದ ಇಕ್ಕೆಲಗಳಲ್ಲಿರುವ ಮರಗಳು ಹಾಗೂ ಕಟ್ಟಡಗಳ ಮಾಹಿತಿಯನ್ನು ಸಂಗ್ರಹಿಸಿದರು. ಅವುಗಳು ರಸ್ತೆಯ ಮಧ್ಯದಿಂದ ಎಷ್ಟು ದೂರದಲ್ಲಿವೆ ಎಂಬುದನ್ನೂ ಅಳತೆ ಮಾಡಿ ವಿವರಗಳನ್ನು ದಾಖಲಿಸಿಕೊಂಡರು.

‘ಸುಮಾರು 12 ಮಂದಿ ಸ್ವಯಂಸೇವಕರು ಸಂಜೆ 4ಗಂಟೆಯಿಂದ 6.30ರವರೆಗೆ ಅಧ್ಯಯನ ನಡೆಸಿದ್ದೇವೆ. ಮೊದಲ ಹಂತದಲ್ಲಿ ಕಾಮಗಾರಿ ನಡೆಯುವ ಎಲ್ಲ ಕಡೆಯೂ ಅಧ್ಯಯನ ನಡೆಸುತ್ತೇವೆ. ಸಂಪೂರ್ಣ ಮಾಹಿತಿ ಕಲೆ ಹಾಕಿದ ಬಳಿಕ ಆ ವಿವರಗಳನ್ನು ವಿಶ್ಲೇಷಣೆಗೆ ಒಳಪಡಿಸಿ, ಸಾಮಾಜಿಕ ಪರಿಣಾಮದ ಕುರಿತ ಸಮಗ್ರ ವರದಿ ಬಿಡುಗಡೆ ಮಾಡಲಿದ್ದೇವೆ’ ಎಂದು ಬೆಂಗಳೂರು ಬಸ್‌ ಪ್ರಮಾಣಿಕರ ವೇದಿಕೆಯ ಶಹೀನ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆ, ಸಿಟಿಜನ್ಸ್‌ ಫಾರ್‌ ಬೆಂಗಳೂರು ಹಾಗೂ ಸ್ಟೂಡೆಂಟ್ಸ್‌ ಔಟ್‌ಪೋಸ್ಟ್‌ ಸಂಘಟನೆಗಳ ಸದಸ್ಯರು ಸಮೀಕ್ಷೆಯಲ್ಲಿ ಭಾಗವಹಿಸಿದರು.

ರಾಜ್ಯಮಟ್ಟದ ಪರಿಸರ ಮೇಲಿನ ಪರಿಣಾಮಗಳ ಅಧ್ಯಯನ ಪ್ರಾಧಿಕಾರವು (ಎಸ್‌ಇಐಎಎ) ಈ ಯೋಜನೆಗೆ 2019ರ ಮಾರ್ಚ್‌ 2ರಂದು ಅನುಮತಿ ನೀಡಿದೆ. ಹರಿಯಾಣದ ಗುರುಗ್ರಾಮದ ‘ಏಕಾಮ್‌ ಏಷ್ಯಾ ಕೋ ಲಿಮಿಟೆಡ್‌’ ಸಂಸ್ಥೆಯು ಈ ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮದ ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ ಎಂದು ಪರಿಸರ ಅನುಮತಿ ಪತ್ರದಲ್ಲಿ ಎಸ್‌ಇಐಎಎ ಉಲ್ಲೇಖಿಸಿದೆ.

ಜನರ ಅಭಿಪ್ರಾಯ ಪಡೆಯದೆ ಯೊಜನೆಗೆ ಅನುಮತಿ ನೀಡಬಾರದು ಎಂದು ಸಮಾನ ಮನಸ್ಕ ಸಂಘಟನೆಗಳು ಎಸ್‌ಇಐಎಎ ಮುಂಚಿತವಾಗಿ ಮನವಿ ಸಲ್ಲಿಸಿದ್ದವು. ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ತರಾತುರಿಯಲ್ಲಿ ಈ ಯೋಜನೆಗೆ ಎಸ್‌ಇಐಎಎ ಅನುಮತಿ ನೀಡಿದೆ ಎಂಬುದು ಈ ಸಂಘಟನೆಗಳ ಆರೋಪ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !