ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CISFನಲ್ಲಿ 451ಕಾನ್‌ಸ್ಟೇಬಲ್ ಡ್ರೈವರ್ ಮತ್ತು ಡಿಸಿಪಿಒ ನೇಮಕಾತಿಗೆ ಅರ್ಜಿ ಆಹ್ವಾನ

Last Updated 23 ಜನವರಿ 2023, 7:13 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಗೃಹ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ (CISF) 451 'ಕಾನ್‌ಸ್ಟೇಬಲ್ ಡ್ರೈವರ್' ಮತ್ತು 'ಕಾನ್‌ಸ್ಟೇಬಲ್ ಡಿಸಿಪಿಒ' ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಇದೊಂದು ನೇರ ನೇಮಕಾತಿಯಾಗಿದ್ದು ಆನ್‌ಲೈನ್ ಮೂಲಕ ಫೆಬ್ರವರಿ 22ರೊಳಗೆ ಅರ್ಜಿ ಹಾಕಿ, ದೈಹಿಕ ಪರೀಕ್ಷೆ ಮತ್ತು ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ.

ಮುಖ್ಯವಾಗಿ ಕಾನ್‌ಸ್ಟೇಬಲ್ ಡ್ರೈವರ್ ಕೆಟಗರಿಯಲ್ಲಿ 183 ಹುದ್ದೆಗಳಿದ್ದು, ಕಾನ್‌ಸ್ಟೇಬಲ್ ಡಿಸಿಪಿಒ ಕೆಟಗರಿಯಲ್ಲಿ (ಡ್ರೈವರ್ ಫಾರ್ ಫೈರ್ ಸರ್ವಿಸ್‌ಸ್) 268 ಹುದ್ದೆಗಳಿವೆ.

21 ರಿಂದ 27 ವರ್ಷ ವಯಸ್ಸಿನೊಳಗಿನ ಅರ್ಹರು (ಪುರುಷರು ಮಾತ್ರ) ಅರ್ಜಿ ಸಲ್ಲಿಸಬಹುದು. ಎಸ್‌ಸಿ/ಎಸ್‌ಟಿ, ಒಬಿಸಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು 10 ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕು ಹಾಗೂ ಸಂಬಂಧಿಸಿದ ಚಾಲನಾ ಪರವಾನಗಿ ಪತ್ರವನ್ನು 3ವರ್ಷದ ಅನುಭವದೊಂದಿಗೆ ಹೊಂದಿರಬೇಕು.‌

₹100 ಅರ್ಜಿ ಶುಲ್ಕವಿದ್ದು ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್‌ಲೈನ್ ಅರ್ಜಿ ಸಲ್ಲಿಸಲು www.cisfrectt.in ಗೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT