ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12ನೇ ತರಗತಿ ನಂತರ ಯಾವ ಯಾವ ಸ್ಪರ್ಧಾತ್ಮಕ ಪರೀಕ್ಷೆಗಳು: ಇಲ್ಲಿದೆ ಮಾಹಿತಿ

Last Updated 29 ಸೆಪ್ಟೆಂಬರ್ 2021, 21:30 IST
ಅಕ್ಷರ ಗಾತ್ರ

ಪಿಯುಸಿ ಅಥವಾ 12ನೇ ತರಗತಿಯ ನಂತರ ಸರ್ಕಾರಿ ಹುದ್ದೆಗಳನ್ನು ಸೇರಬಯಸುವವರಿಗೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿರುತ್ತವೆ. ಕಳೆದ ವಾರ ಕೆಲವು ಪರೀಕ್ಷೆಗಳ ವಿವರ ನೀಡಲಾಗಿದ್ದು, ಇನ್ನಷ್ಟು ಪರೀಕ್ಷೆಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಎಸ್‌ಎಸ್‌ಸಿ ಮಲ್ಟಿ ಟಾಸ್ಕಿಂಗ್‌ ಸಿಬ್ಬಂದಿ (ಎಂಟಿಎಸ್‌)

ಇದು ರಾಷ್ಟ್ರಮಟ್ಟದ ಪರೀಕ್ಷೆಯಾಗಿದ್ದು, ಎಸ್‌ಎಸ್‌ಸಿ (ಸ್ಟಾಫ್‌ ಸೆಲೆಕ್ಷನ್‌ ಕಮೀಷನ್‌) ನಡೆಸುತ್ತದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸಚಿವಾಲಯಗಳಲ್ಲಿರುವ ನಾನ್‌ ಗೆಜೆಟೆಡ್‌ ಹಾಗೂ ಗ್ರೂಪ್‌ ಸಿ ಹುದ್ದೆಗಳನ್ನು ಭರ್ತಿ ಮಾಡಲು ಈ ಪರೀಕ್ಷೆ ನಡೆಸಲಾಗುತ್ತದೆ.

ಪರೀಕ್ಷೆಯಲ್ಲಿ ಎರಡು ಪ್ರಶ್ನೆಪತ್ರಿಕೆಗಳಿರುತ್ತವೆ. ಮೊದಲನೆಯದು ಆನ್‌ಲೈನ್‌ ಆಗಿದ್ದು, ಒಂದೂವರೆ ತಾಸಿನ ಅವಧಿಯದ್ದಾಗಿದ್ದರೆ, ಎರಡನೇ
ಪತ್ರಿಕೆ ಆಫ್‌ಲೈನ್‌ ಆಗಿರುತ್ತವೆ. ಅವಧಿ ಅರ್ಧ ತಾಸು. ಹಿಂದಿ, ಇಂಗ್ಲಿಷ್‌ ಹಾಗೂ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಯನ್ನು ಬರೆಯಬಹುದು. ವರ್ಷಕ್ಕೊಮ್ಮೆ ಪರೀಕ್ಷೆ ನಡೆಸುವ ಕ್ರಮವಿದೆ. 12ನೇ ತರಗತಿ ನಂತರ ಸರ್ಕಾರಿ ಉದ್ಯೋಗ ಸೇರಬಯಸುವ ಅಭ್ಯರ್ಥಿಗಳಿಗೆ ಅನುಕೂಲ.

ಎಸ್‌ಎಸ್‌ಸಿ ಸ್ಟೇನೊಗ್ರಾಫರ್‌ (ಗ್ರೇಡ್‌ ಸಿ ಮತ್ತು ಡಿ)

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸ್ಟೇನೊಗ್ರಾಫರ್‌ ಪಾತ್ರ ಬಹುಮುಖ್ಯ. ಭಾಷಣದ ಬರವಣಿಗೆ, ಪತ್ರಿಕಾಗೋಷ್ಠಿಯ ವರದಿ, ಸಾರ್ವಜನಿಕ ಸಂಪರ್ಕದ ವಿಷಯದಲ್ಲಿ ಸಚಿವರಿಗೆ, ಅಧಿಕಾರಿಗಳಿಗೆ ನೆರವಾಗುವುದು, ಅವರ ಹೇಳಿಕೆಗಳನ್ನು ಟೈಪ್‌ ಮಾಡುವುದು, ಮುಖ್ಯವಾದ ಕಡತಗಳನ್ನು, ಈಗಂತೂ ಇ– ಕಡತಗಳಿದ್ದು, ಅವುಗಳನ್ನು ಕಾಪಿಟ್ಟು ಬೇಕೆಂದಾಗ ಹುಡುಕಿ ತೆಗೆಯುವುದು, ಸಚಿವರ, ಅಧಿಕಾರಿಗಳ ಪ್ರಯಾಣದ ವ್ಯವಸ್ಥೆ ಮಾಡುವುದು, ಮುಖ್ಯವಾದ ವಿಷಯಗಳನ್ನು ನಿರ್ವಹಿಸುವುದು ಇದರಲ್ಲಿ ಸೇರಿವೆ.

ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ)

ಅತ್ಯಂತ ಹೆಚ್ಚು ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳುವ ಈ ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯು 12ನೇ ತರಗತಿಯ ನಂತರ ನಡೆಸುವ ಪರೀಕ್ಷೆಗೆ ಪ್ರತೀ ವರ್ಷ ಸಾವಿರಾರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಸಹಾಯಕ ಲೋಕೊ ಪೈಲಟ್‌, ಕಚೇರಿ ಸಹಾಯಕ, ಸ್ಟೇಶನ್‌ ಮಾಸ್ಟರ್‌, ಟಿಕೆಟ್‌ ಕಲೆಕ್ಟರ್‌ ಮೊದಲಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಸಹಾಯಕ ಲೋಕೊ ಪೈಲಟ್‌ ಹಾಗೂ ಟೆಕ್ನೀಶಿಯನ್‌ ಹುದ್ದೆಗೆ ಪರೀಕ್ಷೆಯು ಮೂರು ಹಂತಗಳಲ್ಲಿ ನಡೆಯಲಿದ್ದು, ಕಂಪ್ಯೂಟರ್‌ ಆಧಾರಿತ ಅಥವಾ ಕೌಶಲ ಆಧಾರಿತ ಪರೀಕ್ಷೆಯನ್ನೂ ಒಳಗೊಂಡಿದೆ. ಲೋಕೊ ಪೈಲಟ್‌ ಆಯ್ಕೆಯ ಕೊನೆಯ ಹಂತದಲ್ಲಿ ವೈದ್ಯಕೀಯ ಪರೀಕ್ಷೆ, ದೃಷ್ಟಿ ಪರೀಕ್ಷೆ ಮೊದಲಾದವುಗಳು ನಡೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT