ಬಾದಾಮಿ: ‘ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಯೋಜನೆಯಲ್ಲಿ ನಿರುದ್ಯೋಗಿ ಯುವಕರಿಗೆ ತರಬೇತಿ ಮತ್ತು ಉದ್ಯೋಗವಕಾಶ ಕಲ್ಪಿಸಲಾಗುವುದು. ನಿರುದ್ಯೋಗಿ ಯುವಕರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು’ ಎಂದು ತಾಲ್ಲೂಕು ಘಟಕದ ಪಿಂಜಾರ ಸಮಾಜದ ಅಧ್ಯಕ್ಷ ವೈ.ಎಫ್.ಶರೀಫ್ ಹೇಳಿದರು.

‘ಬಾನು ಅಸೋಸಿಯೇಟ್ಸ್ ಆಶ್ರಯದಲ್ಲಿ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಟಿ.ಪಿ.ಎ, ಎಂ.ಆರ್.ಎಫ್, ಸ್ಕಿಲ್ ಡೆವಲಪರ್ಸ್ ಮತ್ತು ಮ್ಯಾನ್ ಪವರ್ ಸಪ್ಲೈ ಗೋವಾ ಕಂಪನಿಗಳಿಂದ ವಿವಿಧ ಉದ್ಯೋಗಗಳ ತರಬೇತಿ ಮತ್ತು ಉದ್ಯೋಗವಕಾಶ ಪಡೆಯಲು ಅಂಜುಮನ್ ಶಿಕ್ಷಣ ಸಂಸ್ಥೆಯ ಸಭಾ ಭವನದಲ್ಲಿ ಮೇ 17 ರಂದು ಬೆಳಿಗ್ಗೆ 10 ಕ್ಕೆ ಸಂದರ್ಶನಕ್ಕೆ ಹಾಜರಾಗಬಹುದು’ ಎಂದು ತಿಳಿಸಿದರು.

ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ ಮತ್ತು ಡಿಪ್ಲೊಮಾ ಉತ್ತೀರ್ಣ ಮತ್ತು ಅನುತ್ತೀರ್ಣರಾದ ಆರೋಗ್ಯವಂತ ಎಲ್ಲ ಸಮುದಾಯದ 18 ವರ್ಷದಿಂದ 25 ವರ್ಷದ ಒಳಗಿನ ಯುವಕರು ಸಂದರ್ಶನಕ್ಕೆ ಹಾಜರಾಗಬಹುದು.

‘ಸಂದರ್ಶನಕ್ಕೆ ಬರುವಾಗ ವಿದ್ಯಾರ್ಹತೆ ಪ್ರಮಾಣ ಪತ್ರ, ಲಿವಿಂಗ್ ಸರ್ಟಿಫಿಕೆಟ್ , ನ್ಯಾಶನಲ್ ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್, ಎರಡು ಫೋಟೊ ಮತ್ತು ಬಯೊಡಾಟಾ ತರಬೇಕು’ ಎಂದು ತಿಳಿಸಿದರು.

ತರಬೇತಿ ಮತ್ತು ಉದ್ಯೋಗಾಕಾಂಕ್ಷಿಗಳು ಹೆಸರು ನೋಂದಾಯಿಸಲು ಮೊ.ಸಂ: 9901953318, 9900395784, 9945246581, 9886998397, 9986096349 ಸಂಪರ್ಕಿಸಬೇಕು ಎಂದು ಹೇಳಿದರು.

ಜಹಾಂಗೀರಸಾಬ್ ನದಾಫ್, ಕಾಲೇಸಾಬ್ ನದಾಫ್, ಅಮೀನಬಿ ನದಾಫ್,ಮಹ್ಮದಸಾಬ್ ಚವಡಿ, ಮುರ್ತುಜ್ ನದಾಫ್, ಶಕೀಲ ಪಿಂಜಾರ, ನೂರಅಹ್ಮದ್ ನದಾಫ್, ಅಲ್ಲಾಭಕ್ಷ ಶೇಖ್, ಪತ್ತೇಸಾಬ್ ನದಾಫ್, ಅಲ್ಲಾಭಕ್ಷ ಸದಾಫ್, ಎಚ್.ಎಚ್. ನದಾಫ್, ಪೀರಸಾಬ್ ನದಾಫ್, ಎಲ್.ಎಂ. ಯಂಡಿಗೇರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-19-1260715315

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.