ಮೂಡಲಗಿ: ‘ಯುವಜನತೆಯು ಕೇವಲ ಉದ್ಯೋಗ ಅರಸುವವರಾಗದೆ ಇತರರಿಗೆ ಉದ್ಯೋಗ ನೀಡುವ ಉದ್ಯಮಿಗಳಾಗಿ ಬೆಳೆಯಬೇಕು’ ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಂಡಿತ ದೀನ ದಯಾಳ ಉಪಾಧ್ಯಾಯ ಅಧ್ಯಯನ ಪೀಠದ ನಿರ್ದೇಶಕ ಪ್ರೊ.ಬಿ.ಎಸ್.ನಾವಿ ಹೇಳಿದರು.

ತಾಲ್ಲೂಕಿನ ಕಲ್ಲೋಳಿ ಪಟ್ಟಣದ ಎಸ್ಆರ್ಇಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಂಡಿತ ದೀನ ದಯಾಳ್ ಉಪಾಧ್ಯಾಯ ಅಧ್ಯಯನ ಪೀಠ, ಲಘು ಉದ್ಯೋಗ ಭಾರತಿ ಕರ್ನಾಟಕ, ಐಕ್ಯೂಎಸಿ ಹಾಗೂ ಕಾಲೇಜಿನ ಎನ್ಎಸ್ಎಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ‘ಕಲ್ಪನೆಯಿಂದ ಕಾರ್ಯರೂಪಕ್ಕೆ: ಯುವ ಉದ್ಯಮಿಗಳಿಗೆ ಅವಕಾಶಗಳು’ ವಿಷಯದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

'ಉದ್ಯಮಶೀಲತೆಯಲ್ಲಿ ಸ್ವಾವಲಂಬಿಯಾಗಿ ಬೆಳೆಯಲು ಉತ್ತಮ ಅವಕಾಶವಿರುತ್ತದೆ’ ಎಂದರು.

ಬೆಳಗಾವಿಯ ಡಿಎಂಎಸ್ ಮಂಡಲದ ವ್ಯವಸ್ಥಾಪನಾ ಆಡಳಿತ ಕಾಲೇಜಿನ ಪೂರ್ವ ಪ್ರಾಂಶುಪಾಲ ಬಸವರಾಜ ಕೊಲುಚೆ ಮಾತನಾಡಿ, ‘ವಿದ್ಯಾರ್ಥಿಗಳು ತಮ್ಮಲ್ಲಿರುವ ಹೊಸ ಆಲೋಚನೆಗಳನ್ನು ವಾಣಿಜ್ಯೀಕರಣಗೊಳಿಸುವತ್ತ ಗಮನ ಹರಿಸಬೇಕು’ ಎಂದು ಹೇಳಿದರು.

ಅಥಣಿಯ ಕೈಗಾರಿಕಾ ವಿಸ್ತರಣಾಧಿಕಾರಿ ಸತೀಶ ಬಸವಗೌಡರ ಮಾತನಾಡಿ, ನವೋದ್ಯಮ ಆರಂಭಿಸಲು ಸರ್ಕಾರದ ವಿವಿಧ ಯೋಜನೆಗಳು, ಸೌಲಭ್ಯಗಳು ಹಾಗೂ ತಾಂತ್ರಿಕ ಬೆಂಬಲ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಸುರೇಶ ಹನಗಂಡಿ ಮಾತನಾಡಿದರು.

ಸಂಶೋಧನಾ ಸಹಾಯಕ ಯಲ್ಲಪ್ಪ ಮೂಡಲಗಿ, ಸಂಶೋಧನಾ ಅಧಿಕಾರಿ ಶಿವಲಿಂಗಯ್ಯ ಗೋಠೆ, ಐಕ್ಯೂಎಸಿ ಸಂಯೋಜಕ ಎಂ. ಬಿ.ಕುಲಮೂರ, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಶಂಕರ ನಿಂಗನೂರ, ಉಪನ್ಯಾಸಕರಾದ ಆರ್.ಎಸ್.ಪಂಡಿತ, ವಿಲಾಸ ಕೆಳಗಡೆ, ರಾಜಶ್ರೀ ತೊಟಗಿ, ಅಕ್ಷತಾ ಮೇದಾರ, ಎಂ.ಆರ್.ಕರಗಣ್ಣಿ, ಎಸ್.ಎಚ್.ಅಂಕಲಗಿ, ರಾಧಿಕಾ ಕರೆವ್ವಗೋಳ, ಡಿ.ಎಸ್. ಹುಗ್ಗಿ, ಕೆ.ಎಸ್.ಪರವ್ವಗೋಳ, ಬಿ.ಸಿ.ಮಾಳಿ ಸೇರಿದಂತೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-21-825157877

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.