ಬೆಂಗಳೂರು: ಗೌರವ ಧನ ಹೆಚ್ಚಳವೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಬುಧವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯಿತು.

‘2025ರ ಜನವರಿಯಲ್ಲಿ ಮುಖ್ಯಮಂತ್ರಿ ಅವರೇ ಘೋಷಿಸಿದ ರೀತಿಯಲ್ಲಿ ಗೌರವ ಧನವನ್ನು ಕನಿಷ್ಠ ₹10 ಸಾವಿರ ನೀಡಲು ಕ್ರಮ ವಹಿಸ ಬೇಕು. ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ₹1,000 ಗೌರವ ಧನ ಹೆಚ್ಚಿಸಿದಂತೆ ಆಶಾ ಕಾರ್ಯಕರ್ತೆ ಯರಿಗೆ ಹೆಚ್ಚಳ ಮಾಡಬೇಕು. ಬೇಡಿಕೆ ಗಳ ಕುರಿತು ಚರ್ಚಿಸಲು ಕೂಡಲೇ ಸಭೆ ಕರೆಯಬೇಕು’ ಎಂದು ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಉಪಾಧ್ಯಕ್ಷೆ ಟಿ.ಸಿ.ರಮಾ ಆಗ್ರಹಿಸಿದರು.

‘ಒಂದು ವರ್ಷದಿಂದ ಕಾರ್ಯಕರ್ತೆಯರಿಗೆ ಗೌರವಧನ, ಪ್ರೋತ್ಸಾಹಧನ ಪ್ರತೀ ತಿಂಗಳು ನಿಗದಿತ ಸಮಯಕ್ಕೆ ಬರುತ್ತಿಲ್ಲ. ಈಗಲೂ 3–4 ತಿಂಗಳ ಕೇಂದ್ರದ ಪ್ರೋತ್ಸಾಹಧನ ಬಾಕಿ ಇದೆ. 1–2 ತಿಂಗಳ ರಾಜ್ಯ ಸರ್ಕಾರದ ಗೌರವಧನ ಬಾಕಿ ಇದೆ. ಇದನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು’ ಎಂದರು.

‘ಆ್ಯಪ್ ಮೂಲಕ ದಾಖಲಾತಿ ಮಾಡಿಸುವುದನ್ನು ಕೈಬಿಡಬೇಕು. ಮೌಲ್ಯಮಾಪನದ ಹೆಸರಲ್ಲಿ ಆಶಾ ಗಳಿಗೆ ಆಗುತ್ತಿರುವ ಶೋಷಣೆ ನಿಲ್ಲಿಸಬೇಕು. ನಿವೃತ್ತಿ ಆಗಿರುವ ಆಶಾಗಳಿಗೆಇರುವ ಇಡುಗಂಟು ನೀಡಬೇಕು. ಆಶಾಸುಗಮಕಾರರನ್ನು ಸೂಕ್ತ ವೇತನ ದೊಂದಿಗೆ ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.

‘ಆಶಾ ನಿಧಿ ತಂತ್ರಾಂಶದಲ್ಲಿ ಆಶಾ ಸೇವೆಗಳನ್ನು ನಿಷ್ಕ್ರಿಯಗೊಳಿಸಿ ರುವುದರಿಂದ ಕಾರ್ಯಕರ್ತರಿಗೆ ಮಾಸಿಕ ₹ 500ರಿಂದ ₹1000 ವರೆಗೆ ಪ್ರೋತ್ಸಾಹಧನ ಕಡಿತವಾಗಿದೆ. ಈ ಸೇವೆ ಮುಂದುವರಿಸಬೇಕು’ ಎಂದರು.

ಸಂಘದ ಪ್ರಮುಖರಾದ ಮಹಾಲಕ್ಷ್ಮಿ, ಫರ್ಹಾನ, ದೀಪಾ, ಮುನಿರತ್ನ, ಭವ್ಯಾ, ಲಕ್ಷ್ಮಿದೇವಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-4-745281219

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.