ಬೆಂಗಳೂರು: ‘ಬೈಕ್ ಮೆಕ್ಯಾನಿಕ್ಗಳು ಸಮಾಜದ ನಿರ್ಮಾತೃಗಳಾಗಿದ್ದು, ತಂತ್ರಜ್ಞಾನ ಅಳವಡಿಸಿಕೊಂಡರೆಭವಿಷ್ಯ ಇನ್ನಷ್ಟು ಭದ್ರವಾಗಲಿದೆ’ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದರು.

ಕಾರ್ಮಿಕ ದಿನಾಚರಣೆಯ ಅಂಗವಾಗಿ ಕರ್ನಾಟಕ ದ್ವಿಚಕ್ರ ವಾಹನ ವರ್ಕ್ಶಾಪ್ಗಳ ಮಾಲೀಕರು ಮತ್ತು ತಂತ್ರಜ್ಞರ ಸಂಘವು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಬೈಕ್ ಮೆಕ್ಯಾನಿಕ್ಗಳ ಸಮಾವೇಶದಲ್ಲಿ ಮಾತನಾಡಿದರು.

‘ಸಹಸ್ರಾರು ಬೈಕ್ ಮೆಕ್ಯಾನಿಕ್ಗಳು ಒಂದೇ ವೇದಿಕೆಯಲ್ಲಿ ಸೇರುವುದು ಮಹತ್ವದ ಸಾಧನೆ. ನಿಮ್ಮ ಕೈಯಲ್ಲಿ ದೇಶದ ಚಾಲನಾ ಶಕ್ತಿ ಇದೆ. ಪ್ರತಿಯೊಂದು ಬೈಕ್ ಓಡಲು ನಿಮ್ಮ ಪರಿಶ್ರಮವೇ ಕಾರಣ. ಸಂಘಟಿತ ಶಕ್ತಿಯ ಮೂಲಕ ನಿಮ್ಮ ಹಕ್ಕುಗಳನ್ನು ಪಡೆದು ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡಬೇಕು’ ಎಂದು ಹೇಳಿದರು.

‘ಬೈಕ್ ಮೆಕ್ಯಾನಿಕ್ ಸಮುದಾಯಕ್ಕೆ ಹೊಸ ದಿಕ್ಕು ನೀಡುವಲ್ಲಿ ಈ ಸಮಾವೇಶ ಮಹತ್ವದ ಹೆಜ್ಜೆಯಾಗಿದೆ. ಈ ಸಂದರ್ಭದಲ್ಲಿ ಹೊಸ ತಂತ್ರಜ್ಞಾನ, ಆಧುನಿಕ ಸಾಧನಗಳು ಹಾಗೂ ಬೈಕ್ ಸರ್ವಿಸ್ ಕ್ಷೇತ್ರದ ಕುರಿತು ಚರ್ಚೆಗಳು ನಡೆದವು’ ಎಂದು ಸಂಘದ ರಾಜ್ಯಾಧ್ಯಕ್ಷ ಕೆ.ಎಸ್.ಪ್ರಸನ್ನ ಕುಮಾರ್ ಗೌಡ ತಿಳಿಸಿದರು.

ಜಾಮಿಯಾ ಮಸ್ಜಿದ್ ನ ಮಹಮದ್ ಮಕ್ಸೂದ್ ಇಮ್ರಾನ್ ರಶೀದ್, ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್, ಸಂಘದ ಕಾರ್ಯದರ್ಶಿ ಭಾಸ್ಕರ್.ಜಿ.ನಾಯ್ಡು ಮಾತನಾಡಿದರು. ರಾಜ್ಯ ಕಾರ್ಯದರ್ಶಿ ವೆಂಕಟ್ ಶ್ಯಾಮ್, ರಾಜ್ಯ ಸಲಹೆಗಾರ ನಾರಾಯಣ್ ಉಪಸ್ಥಿತರಿದ್ದರು.

ಸಮಾವೇಶದಲ್ಲಿ ವಿವಿಧ ರಾಜ್ಯಗಳಿಂದ 12,500ಕ್ಕೂ ಹೆಚ್ಚು ಬೈಕ್ ಮೆಕ್ಯಾನಿಕ್, ವರ್ಕ್ಶಾಪ್ ಮಾಲೀಕರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-4-1326341301

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.